ETV Bharat / state

ಬಿಬಿಎಂಪಿ ಅಧಿಕಾರಿಗಳ ಮನವೊಲಿಕೆ ಬಳಿಕ ಕೊನೆಗೂ ಕ್ವಾರಂಟೈನ್​ಗೆ ಒಪ್ಪಿಕೊಂಡ ಪ್ರಯಾಣಿಕರು

ಕ್ವಾರಂಟೈನ್​ಗೆ ವಿರೋಧ ವ್ಯಕ್ತಪಡಿಸಿದ್ದ ಪ್ರಯಾಣಿಕರನ್ನು ಬಿಬಿಎಂಪಿ ಅಧಿಕಾರಿಗಳು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲು ಬಿಎಂಟಿಸಿ ಬಸ್​ನಲ್ಲಿ ಕರೆದೊಯ್ದೊರು.

quarantine
ಕ್ವಾರಂಟೈನ್​
author img

By

Published : May 14, 2020, 5:39 PM IST

ಬೆಂಗಳೂರು: ಹೋಂ ಕ್ವಾರಂಟೈನ್ ವಿರೋಧಿಸಿ ಪಟ್ಟು ಹಿಡಿದಿದ್ದ 100ಕ್ಕೂ ಹೆಚ್ಚು ಪ್ರಯಾಣಿಕರನ್ನು ಮನವೊಲಿಸುವಲ್ಲಿ ಬಿಬಿಎಂಪಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ದೆಹಲಿಯಿಂದ ನೇರವಾಗಿ ಬೆಂಗಳೂರಿಗೆ ಬಂದ ಪ್ರಯಾಣಿಕರು ಬಿಬಿಎಂಪಿ ಅಧಿಕಾರಿಗಳು ಕ್ವಾರಂಟೈನ್ ಒಳಗಾಗುವಂತೆ ಹೇಳುತ್ತಿದ್ದಂತೆ 100ಕ್ಕೂ ಹೆಚ್ಚು ಪ್ರಯಾಣಿಕರು ವಿರೋಧ ವ್ಯಕ್ತಪಡಿಸಿದ್ದರು.

ಬಸ್​ನಲ್ಲಿ ಹೋಟೆಲ್​ ಕಡೆ ಹೊರಟ ಪ್ರಯಾಣಿಕರು

ದೆಹಲಿಯಿಂದ ಬರುವಾಗ ನಮಗೆ ಯಾರೂ ಕ್ವಾರಂಟೈನ್​ಗೆ ಒಳಗಾಗಬೇಕು ಎಂದು ಹೇಳಿರಲಿಲ್ಲ‌.‌ ಹೇಗೋ ಪ್ರಯಾಣ ದರ ಹೊಂದಿಸಿಕೊಂಡು ಬಂದಿದ್ದೇವೆ. ಇಲ್ಲಿ ಬಂದರೆ ದಿಢೀರನೇ ಕ್ವಾರಂಟೈನ್​ಗೆ ಒಳಗಾಗುವಂತೆ ಸೂಚಿಸಿ, ಉಳಿದುಕೊಳ್ಳುವ ಹೋಟೆಲ್​ ಹಣ ಪಾವತಿಸುವಂತೆ ಸೂಚಿಸುತ್ತಿರುವುದು ಸರಿಯಲ್ಲ. ನಾವು ಯಾವುದೇ ಕಾರಣಕ್ಕಾಗಿ ಕ್ವಾರಂಟೈನ್​ಗೆ ಒಳಗಾಗುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ಮಾಡಿದ್ದರು.

ಅಧಿಕಾರಿಗಳು ತಮ್ಮ ಸತತ ಪ್ರಯತ್ನದೊಂದಿಗೆ ಪ್ರತಿಭಟನಾಕಾರರ ಮನವೊಲಿಸಿ ನಿಗದಿಪಡಿಸಿದ ಹೋಟೆಲ್​ಗಳಿಗೆ ಬಿಎಂಟಿಸಿ ಬಸ್​ಗಳ ಮೂಲಕ ಪ್ರಯಾಣಿಕರನ್ನು ಕ್ವಾರಂಟೈನ್​ ಮಾಡಲು ಪೊಲೀಸ್ ಭದ್ರತೆಯಲ್ಲಿ ಕರೆದೊಯ್ಯಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.