ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ಡೌನ್ ಜಾರಿ ಮಾಡಿ ಎಲ್ಲಾ ರೀತಿಯ ಸೇವೆಗಳು ಬಂದ್ ಆಗಿದ್ದವು. ಇದೀಗ ಹಂತ ಹಂತವಾಗಿ ಅನ್ಲಾಕ್ ಮಾಡಲಾಗುತ್ತಿದ್ದು, ಎಲ್ಲಾ ಸೇವೆಗಳು ಸಹಜ ಸ್ಥಿತಿಗೆ ಬರುತ್ತಿವೆ.
ಅದರಂತೆ ನೈರುತ್ಯ ರೈಲ್ವೆ ಇಲಾಖೆ ತನ್ನ ಸೇವೆ ಆರಂಭಿಸಿದ್ದು, ಸ್ಥಗಿತಗೊಂಡಿದ್ದ ಬೆಂಗಳೂರಿನಿಂದ ಹೊರಡುವ ರೈಲುಗಳ ಸಂಚಾರ ಆರಂಭವಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಪ್ಯಾಸೆಂಜರ್ ರೈಲುಗಳ ಓಡಾಟ ಶುರುವಾಗಿದ್ದು, MEMU / DEMU ಯುನಿಟ್ ಸೇವೆಗಳನ್ನು ಆರಂಭಿಸಿದೆ. ಮೊದಲ ರೈಲು ಮೈಸೂರು - ಬಂಗಾರಪೇಟೆ ಪ್ಯಾಸೆಂಜರ್ ರೈಲು 5:50ಕ್ಕೆ ಮೈಸೂರಿನಿಂದ ಹೊರಟಿದೆ. ಇದಕ್ಕೆ ಸಂಸದ ಪಿ.ಸಿ.ಮೋಹನ್ ಸಾಕ್ಷಿಯಾದರು. ಪ್ರಯಾಣಿಕರನ್ನು ಮಾತಾಡಿಸಿ ಕೋವಿಡ್ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಇದೇ ವೇಳೆ ಫೇಸ್ ಮಾಸ್ಕ್, ಸ್ಯಾನಿಟೈಸರ್‌ಗಳನ್ನು ವಿತರಿಸಿದರು.
ಓದಿ : ಕೋವಿಡ್ ರೋಗಿಗಳ ಗೌಪ್ಯತೆ ಕಾಪಾಡಿಕೊಳ್ಳದವರ ವಿರುದ್ಧ ಶಿಸ್ತು ಕ್ರಮ : ಸಚಿವ ಸುಧಾಕರ್ ಎಚ್ಚರಿಕೆ
ಇಂದು ಪ್ರಾರಂಭವಾದ ರೈಲು ಸೇವೆಗಳು ಹೀಗಿವೆ:
1.ಬಂಗಾರಪೇಟೆ ಮೈಸೂರು - ಬಂಗಾರಪೇಟೆ ಮೆಮೋ ಪಾಸೆಂಜರ್
2.ಕೆ.ಎಸ್.ಆರ್-ಬೆಂಗಳೂರು - ಹೊಸೂರು - ಕೆ.ಎಸ್.ಆರ್-ಬೆಂಗಳೂರು
3.ಯಶವಂತಪುರ-ತುಮಕೂರು-ಯಶವಂತಪುರ
4. ಕೆ.ಎಸ್.ಆರ್-ಬೆಂಗಳೂರು - ಮಾರಿಕಪ್ಪಂ - ಕೆ.ಎಸ್.ಆರ್-ಬೆಂಗಳೂರು
5.ಹಿಂದೂಪುರ -ಯಶವಂತಪುರ- ಹಿಂದೂಪುರ
6.ಯಶವಂತಪುರ-ಹಾಸನ್ -ಯಶವಂತಪುರ