ಬೆಂಗಳೂರು : ಫೆಬ್ರವರಿ 5ರಂದು ಡಿಪೋ ನಂಬರ್ 21, ಆರ್‌ಆರ್‌ನಗರ ಮಾರ್ಗದ ಬಸ್ನಲ್ಲಿ ಪ್ರಯಾಣಿಸುವ ಪ್ರಯಾಣಿಕರೊಬ್ಬರು ತಮ್ಮ ಬ್ಯಾಗ್‌ನ ಬಸ್ನಲ್ಲೇ ಬಿಟ್ಟು ಹೋಗಿದ್ದಾರೆ.
ಈ ಬ್ಯಾಗ್ನಲ್ಲಿ 1,66,000 ರೂ. ಮೌಲ್ಯದ ಸಾಮಗ್ರಿಗಳಿದ್ದು, ಇದನ್ನು ಬಸ್ನ ಸಿಬ್ಬಂದಿ ಮಾಲೀಕರಿಗೆ ಒಪ್ಪಿಸಿದ್ದಾರೆ. ಐ-ಪೋನ್ 11, ಒನ್ ಪ್ಲಸ್ ಸೇರಿದಂತೆ ನಾಲ್ಕೈದು ಮೊಬೈಲ್, ವಾಲೆಟ್, ಟೀ-ಶರ್ಟ್ನ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಓದಿ:ವಿಧಾನ ಪರಿಷತ್ನಲ್ಲಿ ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ
ಬಸ್ ನಂಬರ್ ಕೆಎ57 ಎಫ್ 140ನಲ್ಲಿ ಸೈಯದ್ ಮಹಮ್ಮದ್ ಎಂಬುವರು ಬ್ಯಾಗ್ ಬಿಟ್ಟು ಹೋಗಿದ್ರು. ಬಸ್ನ ಡ್ರೈವರ್, ಕಂಡಕ್ಟರ್ ಸೋಮಶೇಖರ್ ಹಾಗೂ ಬಸವಲಿಂಗಯ್ಯ ಅವರು ಮಾಲೀಕರಿಗೆ ಬ್ಯಾಗ್ ತಲುಪಿಸಿದ್ದಾರೆ. ಈ ಒಳ್ಳೆಯ ಕಾರ್ಯಕ್ಕೆ ಸಿಬ್ಬಂದಿಗೆ ಬಿಎಂಟಿಸಿ ಅಭಿನಂದನೆ ಸಲ್ಲಿಸಿದೆ.