ETV Bharat / state

ಪ್ರಯಾಣಿಕರಿಲ್ಲದೆ ಬಿಎಂಟಿಸಿ ಬಸ್​ಗಳು ಖಾಲಿ ಖಾಲಿ​​: ಫಸ್ಟ್ ಸ್ಟೇಜ್​ಗೂ ಬೇಕಂತೆ 70 ರೂ. ಪಾಸ್​​! - latest mtc news

ಕಳೆದೊಂದು ವಾರದಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿರುವುದನ್ನು‌ ಗಮನಿಸಿರುವ ಸಾರ್ವಜನಿಕರು, ಸಾರಿಗೆ ಸೇವೆ ಬಳಕೆಯಿಂದ ದೂರ ಉಳಿದಿದ್ದಾರೆ. ‌ಮೆಜೆಸ್ಟಿಕ್​ನ ಬಿಎಂಟಿಸಿ ನಿಲ್ದಾಣದಲ್ಲಿ ಬೆರಳೆಣಿಕೆಯಷ್ಟು ಪ್ರಯಾಣಿಕರು ಮಾತ್ರ ಇದ್ದು, ಹಲವು ಬಸ್​ಗಳು ಖಾಲಿ ಖಾಲಿಯಾಗಿವೆ.‌

BMTC
ಯಾಣಿಕರಿಲ್ಲದೆ ಬಣಗುಡುತ್ತಿವೆ ಬಿಎಂಟಿಸಿ ಬಸ್​​
author img

By

Published : May 20, 2020, 1:04 PM IST

ಬೆಂಗಳೂರು: ರಾಜ್ಯದಲ್ಲಿ ನಾಲ್ಕನೇ ಹಂತದ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಈ ಹಂತದಲ್ಲಿ ರಾಜ್ಯ ಸರ್ಕಾರ ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿ ಬಸ್​ ಸಂಚಾರಕ್ಕೆ ಅವಕಾಶ ನೀಡಿದೆ. ಆದರೆ ಜನರು ಮಾತ್ರ ಸಾರಿಗೆ ಸೇವೆ ಬಳಸಿಕೊಳ್ಳಲು ಮುಂದಾಗುತ್ತಿಲ್ಲ.

ಕಳೆದೊಂದು ವಾರದಿಂದ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಆಗುತ್ತಿರುವುದನ್ನು‌ ಗಮನಿಸಿರುವ ಸಾರ್ವಜನಿಕರು, ಸಾರಿಗೆ ಸೇವೆ ಬಳಕೆಯಿಂದ ದೂರ ಉಳಿದಿದ್ದಾರೆ. ‌ಮೆಜೆಸ್ಟಿಕ್​ನ ಬಿಎಂಟಿಸಿ ನಿಲ್ದಾಣದಲ್ಲಿ ಬೆರಳೆಣಿಕೆಯಷ್ಟು ಪ್ರಯಾಣಿಕರು ಮಾತ್ರ ಇದ್ದು, ಹಲವು ಬಸ್​ಗಳು ಖಾಲಿ ಖಾಲಿಯಾಗಿವೆ.‌

ಯಾಣಿಕರಿಲ್ಲದೆ ಭಣಗುಡುತ್ತಿವೆ ಬಿಎಂಟಿಸಿ ಬಸ್​ಗಳು​​

ಬಿಎಂಟಿಸಿ ಟಿಕೆಟ್ ನೀತಿಗೆ ಜನರ ಆಕ್ರೋಶ:

ಟಿಕೆಟ್ ವಿತರಣೆಗೆ ಗೇಟ್ ಪಾಸ್ ನೀಡಿರುವ ಬಿಎಂಟಿಸಿ ನಿಗಮ, ಇದೀಗ ಪಾಸ್ ಇದ್ದವರಿಗೆ ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಿದೆ.

ಫಸ್ಟ್ ಸ್ಟೇಜ್​​ಗೆ ಹೋಗುವವಗೂ ಕೂಡ 70 ರೂ. ಪಾಸ್ ತೆಗೆದುಕೊಂಡೇ ಹೋಗಬೇಕಾಗಿದೆ. ಇದರಿಂದ ಪ್ರಯಾಣಿಕರು ಹೆಚ್ಚು ದರ ತೆರಬೇಕಾಗಿದೆ. ಹೀಗಾಗಿ ಬಸ್​​ ಹತ್ತುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಕೊರೊನಾ ಸಂಕಷ್ಟದಲ್ಲಿ ಹೆಚ್ಚುವರಿ ಹಣ ವಸೂಲಿಗೆ ಇಳಿದಿರುವ ಬಿಎಂಟಿಸಿ ನೀತಿಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.