ETV Bharat / state

ಪರಿಷತ್ ಗಲಾಟೆ.. ತನಿಖೆಗಾಗಿ ಮರಿತಿಬ್ಬೇಗೌಡ ನೇತೃತ್ವದ ಸದನ‌ ಸಮಿತಿ ರಚನೆ - maritibbe gowda committee

ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರಿಂದ ಸಹ ಲಿಖಿತ ದೂರು ಮತ್ತು ಪ್ರತಿ ದೂರುಗಳು ಸ್ವೀಕೃತಗೊಂಡಿದೆ. ಈ ಹಿನ್ನೆಲೆ ಅಂದು ನಡೆದ ಅಹಿತಕರ ಘಟನೆಗೆ ಕಾರಣಕರ್ತರಾದ ಸದನದ ಸದಸ್ಯರು, ವಿಧಾನ ಪರಿಷತ್ತಿನ ಅಧಿಕಾರಿ/ಸಿಬ್ಬಂದಿ, ಸಚಿವರು ಮತ್ತು ಇತರರ ಮೇಲೆ ಸೂಕ್ತ ಕ್ರಮ ಕೈಗೊಂಡು ಸದನದ ಹಾಗೂ ಪೀಠದ ಗೌರವವನ್ನು ಎತ್ತಿ ಹಿಡಿಯಬೇಕೆಂದು ಮನವಿ ಮಾಡಲಾಗಿದೆ..

parishat-riot-maritibbegowda-led-house-committee-for-investigation
ತನಿಖೆಗಾಗಿ ಮರಿತಿಬ್ಬೇಗೌಡ ನೇತೃತ್ವದ ಸದನ‌ ಸಮಿತಿ ರಚನೆ
author img

By

Published : Jan 4, 2021, 6:54 PM IST

ಬೆಂಗಳೂರು : ವಿಧಾನ ಪರಿಷತ್ ಗಲಾಟೆ ಸಂಬಂಧ ತನಿಖೆ‌ ನಡೆಸಲು ಸದನ‌ ಸಮಿತಿ ರಚಿಸಿ ಆದೇಶ ಹೊರಡಿಸಲಾಗಿದೆ. ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಅಧ್ಯಕ್ಷತೆಯ ಈ ಸದನ ಸಮಿತಿಯಲ್ಲಿ ಪರಿಷತ್ ಸದಸ್ಯರಾದ ಬಿ ಕೆ ಹರಿಪ್ರಸಾದ್, ಹೆಚ್ ವಿಶ್ವನಾಥ್, ಆರ್ ಬಿ ತಿಮ್ಮಾಪೂರ ಹಾಗೂ ಆರ್‌ ವಿ ಸಂಕನೂರ ಸದಸ್ಯರಾಗಿರಲಿದ್ದಾರೆ.

ಸದನ‌ ಸಮಿತಿ ಡಿ.15ರಂದು ವಿಧಾನ ಪರಿಷತ್ ಸಭಾಂಗಣದಲ್ಲಿ ನಡೆದ ಅಹಿತಕರ ಘಟನೆ ಸಂಬಂಧ ನಿಯಮ ಹಾಗೂ ಕಾನೂನುಬಾಹಿರ ವರ್ತನೆಯ ಅಂಶಗಳ ಬಗ್ಗೆ ಪರಿಶೀಲಿಸುವುದರ ಜೊತೆಗೆ ಘಟನೆಗೆ ಕಾರಣಕರ್ತರಾದ ಪರಿಷತ್ ಸಚಿವಾಲಯದ ಅಧಿಕಾರಿ/ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಸದನದ ಸದಸ್ಯರು, ಸಚಿವರು ಹಾಗೂ ಇತರರು ತೆಗೆದುಕೊಳ್ಳಬೇಕಾದ‌ ಕ್ರಮಗಳ ಬಗ್ಗೆ ಪರಿಶೀಲಿಸಲಿಸಿ ವರದಿ ಸಲ್ಲಿಸಲಿದೆ. ವರದಿ ‌ನೀಡಲು 20 ದಿನಗಳ ಕಾಲಾವಕಾಶ ನೀಡಲಾಗಿದೆ.

ಆದೇಶದಲ್ಲಿ ಪರಿಷತ್ ಅಧಿವೇಶನದಲ್ಲಿ ಡಿ.15ರಂದು ಉಪ ಸಭಾಪತಿಯವರು ಕೋರಂ ಬೆಲ್ ಚಾಲನೆಯಲ್ಲಿರುವಾಗಲೇ ನಿಯಮಬಾಹಿರವಾಗಿ ಸಭಾಪತಿಯವರ ಪೀಠವನ್ನು ಅಲಂಕರಿಸಿರೋದು ಸೇರಿದಂತೆ ಆನಂತರದ ಬೆಳವಣಿಗೆಗಳಲ್ಲಿ ಸರ್ಕಾರ ಹಾಗೂ ವಿರೋಧ ಪಕ್ಷದ ಹಲವು ನಾಯಕರುಗಳು ನಡೆದುಕೊಂಡ ರೀತಿಯಿಂದ ಪೀಠ ಮತ್ತು ಈ ಸದನದ ಗೌರವ, ಘನತೆ ಮತ್ತು ಸಂಪ್ರದಾಯಕ್ಕೆ ಚ್ಯುತಿ ಉಂಟಾಗಿರುವುದರ ಕುರಿತು ಮಾಧ್ಯಮಗಳಲ್ಲಿಯೂ ಸಹ ವರದಿಯಾಗಿದೆ.

parishat-riot-maritibbegowda-led-house-committee-for-investigation
ಮರಿತಿಬ್ಬೇಗೌಡ ನೇತೃತ್ವದ ಸದನ‌ ಸಮಿತಿ ರಚನೆ ಮಾಡಿ ಆದೇಶ

ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರಿಂದ ಸಹ ಲಿಖಿತ ದೂರು ಮತ್ತು ಪ್ರತಿ ದೂರುಗಳು ಸ್ವೀಕೃತಗೊಂಡಿದೆ. ಈ ಹಿನ್ನೆಲೆ ಅಂದು ನಡೆದ ಅಹಿತಕರ ಘಟನೆಗೆ ಕಾರಣಕರ್ತರಾದ ಸದನದ ಸದಸ್ಯರು, ವಿಧಾನ ಪರಿಷತ್ತಿನ ಅಧಿಕಾರಿ/ಸಿಬ್ಬಂದಿ, ಸಚಿವರು ಮತ್ತು ಇತರರ ಮೇಲೆ ಸೂಕ್ತ ಕ್ರಮ ಕೈಗೊಂಡು ಸದನದ ಹಾಗೂ ಪೀಠದ ಗೌರವವನ್ನು ಎತ್ತಿ ಹಿಡಿಯಬೇಕೆಂದು ಮನವಿ ಮಾಡಲಾಗಿದೆ.

ಈ ಹಿಂದೆ ವಿಧಾನಸಭೆಯ ಸಭಾಂಗಣದಲ್ಲಿ ನಡೆದಿದ್ದ ಇಂಥ ಅಹಿತಕರ ಘಟನೆಗಳ ಬಗ್ಗೆ ಅಂದಿನ ಸಭಾಧ್ಯಕ್ಷರು ಸದನ ಸಮಿತಿ ರಚಿಸಿ ವರದಿ ಪಡೆದಿದ್ದರು. ಆ ಪೂರ್ವ ನಿದರ್ಶನಗಳನ್ನು ಗಣನೆಗೆ ತೆಗೆದುಕೊಂಡು ವಿಧಾನ ಪರಿಷತ್ತಿನ ಸದನದಲ್ಲಿ ನಡೆದ ಅಹಿತಕರ ಘಟನೆಯ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡಲು ಹಾಗೂ ಈ ಘಟನೆಗೆ ಕಾರಣಕರ್ತರಾದವರ ಮೇಲೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಶಿಫಾರಸು ಮಾಡಲು ಸದನ‌ ಸಮಿತಿಗೆ ಸೂಚಿಸಲಾಗಿದೆ.

ಇದನ್ನೂ ಓದಿ: ವಿಧಾನ ‌ಪರಿಷತ್​​ನಲ್ಲಿ ನಡೆದ ಗದ್ದಲಕ್ಕೆ ಸರ್ಕಾರವೇ ನೇರ ಹೊಣೆ : ಸಲೀಂ ಅಹ್ಮದ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.