ಆನೇಕಲ್: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಗೆ ಜೈಲಾಧಿಕಾರಿಗಳು ಊಟದ ವ್ಯವಸ್ಥೆ ಕಲ್ಪಿಸುತ್ತಿರುವುದಾಗಿ ಮಾಹಿತಿ ತಿಳಿದುಬಂದಿದೆ.
ನಟಿಯರಿಗೆ ಜೈಲೂಟ ರುಚಿಸದಿದ್ದಕ್ಕೆ ಮನೆ ಊಟಕ್ಕೆ ಅವಕಾಶ ನೀಡಲಾಗಿದೆ ಎಂದು ಜೈಲಾಧಿಕಾರಿಗಳು ಸಬೂಬು ನೀಡಿದ್ದಾರೆ. ಜೈಲು ಸಿಬ್ಬಂದಿಯೊಬ್ಬರ ಮನೆಯಿಂದ ನಿತ್ಯ ರುಚಿ ರುಚಿಯಾದ ಊಟ ತಿಂಡಿ ಸರಬರಾಜು ಮಾಡಲಾಗುತ್ತಿದೆ ಎಂದು ಜೈಲಿನ ಮೂಲಗಳ ಪ್ರಕಾರ ಮಾಹಿತಿ ತಿಳಿದುಬಂದಿದೆ.
ಜೈಲಿನಲ್ಲಿ ಇರುವ ಬೇರೆ ಆರೋಪಿಗಳಿಗೂ ಮನೆಯಿಂದ ಊಟ ತರಿಸಿಕೊಳ್ಳುವ ವ್ಯವಸ್ಥೆ ಇದೆ ಆದರೆ ಇಲ್ಲಿ ಜೈಲಿನ ಸಿಬ್ಬಂದಿಯೇ ಊಟವನ್ನು ನಟಿಮಣಿಯರಿಗೆ ತಂದು ಕೊಡುತ್ತಿರುವುದರಿಂದ ಸಾಮಾನ್ಯರಿಗೆ ಒಂದು ಕಾನೂನು ಸೆಲೆಬ್ರಿಟಿಗಳಿಗೆ ಒಂದು ಕಾನೂನಾ? ಅನ್ನೋ ಪ್ರಶ್ನೆ ಉದ್ಭವಿಸಿದೆ.