ಬೆಂಗಳೂರು: ಮಾಜಿ ಡಿಸಿಎಂ ಡಾ ಜಿ. ಪರಮೇಶ್ವರ್ ಅವರ ಪಿ.ಎ. ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನಭಾರತಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆಗೆ ಸಹಕರಿಸುತ್ತಿಲ್ಲ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಮಾಜಿ ಡಿಸಿಎಂ ಮನೆಗೆ ಮೇಲೆ ಐಟಿ ಇಲಾಖೆ ದಾಳಿ ನಡೆಸಲಾಗಿತ್ತು. ಈ ವೇಳೆ ಪರಂ ಆಪ್ತ ರಮೇಶ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಹೀಗಾಗಿ ರಮೇಶ್ ಐಟಿ ವಿಚಾರಣೆಗೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್ನೋಟ್ ಬರೆದಿಟ್ಟು ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.
ಹೀಗಾಗಿ ತನಿಖೆ ಕೈಗೊಂಡ ಜ್ಞಾನಭಾರತಿ ಪೊಲೀಸರು ಪ್ರಕರಣ ಹಿನ್ನಲೆ ರಮೇಶ್ ಆಪ್ತರು ಮಾಜಿ ಡಿಸಿಎಂ ಪರಮೇಶ್ವರ್ ಕೆಲ ಆಪ್ತರನ್ನ ತನಿಖೆಗೆ ಒಳಪಡಿಸಿದ್ರು. ಹಾಗೆಯೇ ರಮೇಶ್ ಮನೆಗೆ ಐಟಿ ಅಧಿಕಾರಿಗಳು ತೆರಳುವ ದೃಶ್ಯ ವೈರಲ್ಲಾಗಿತ್ತು. ನಂತರ ಐಟಿ ಇಲಾಖೆಗೆ ಜ್ಞಾನಭಾರತಿ ಪೊಲೀಸರು ನೋಟಿಸ್ ಜಾರಿ ಮಾಡಿ ರಮೇಶ್ ನಿವಾಸಕ್ಕೆ ಯಾಕೆ ತೆರಳಿದ್ರಿ? ಆ ಸಮಯದಲ್ಲಿ ರಮೇಶ್ ನಿವಾಸದಲ್ಲಿ ನಡೆದಿದ್ದಾದ್ರು ಏನು..? ಇದಕ್ಕೆ ಸಮರ್ಪಕ ಉತ್ತರ ನೀಡಿ ಎಂದು ಕೇಳಿದ್ದರು. ನೋಟಿಸ್ ನೀಡಿ ಹತ್ತು ದಿನ ಕಳೆದ್ರು ಐಟಿ ಉತ್ತರ ನೀಡದೆ ಇರುವುದು ತನಿಖೆಗೆ ಕೊಂಚ ಹಿನ್ನೆಡೆಯಾಗಿದೆ.