ETV Bharat / state

ಪಾರ್ಶ್ವವಾಯು ಪೀಡಿತ ಪತ್ನಿ ಸಾಕಲಾರದೇ ನೀರಿನ ಸಂಪ್​ಗೆ ತಳ್ಳಿ ಕೊಂದ ಪತಿ - ಈಟಿವಿ ಭಾರತ ಕನ್ನಡ

ಪಾರ್ಶ್ವವಾಯುನಿಂದ ಬಳಲುತ್ತಿದ್ದ ಪತ್ನಿಯನ್ನು ಗಂಡನೊಬ್ಬ ತಾನು ಕೆಲಸ ಮಾಡುತ್ತಿದ್ದ ಕಟ್ಟಡದಲ್ಲಿನ ನೀರಿನ ಸಂಪ್​ಗೆ ತಳ್ಳಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

paralytic-wife-killed-by-husband-in-bengaluru
ಪಾರ್ಶ್ವವಾಯು ಪೀಡಿತ ಪತ್ನಿಯನ್ನು ಸಾಕಲಾರದೆ ನೀರಿನ ಸಂಪ್​ಗೆ ತಳ್ಳಿ ಕೊಂದ ಪತಿ
author img

By

Published : Dec 5, 2022, 6:28 PM IST

ಬೆಂಗಳೂರು: ಪಾರ್ಶ್ವವಾಯುನಿಂದ ಕೈ ಕಾಲು ಸ್ವಾಧೀನ ಕಳೆದುಕೊಂಡು ಬಳಲುತ್ತಿದ್ದ ಪತ್ನಿಯನ್ನು ನಿರ್ಮಾಣ ಹಂತದಲ್ಲಿನ ಕಟ್ಟಡದ ಸಂಪ್‌ಗೆ ತಳ್ಳಿ ಪತಿಯೇ ಕೊಲೆ ಮಾಡಿರುವ ದಾರುಣ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಿವಮ್ಮ (50) ಕೊಲೆಗೀಡಾದ ಮಹಿಳೆಯಾಗಿದ್ದು, ಅವರ ಪತಿ ಶಂಕರಪ್ಪ (60) ಕೊಲೆ ಮಾಡಿದ ಆರೋಪಿ.

ಆರೋಪಿ ಶಂಕರಪ್ಪ ವಾಚ್‌ಮ್ಯಾನ್‌ ಕೆಲಸ ಮಾಡುತ್ತಿದ್ದರು. ಕಳೆದ ಎರಡು ವರ್ಷಗಳ ಈತನ ಹೆಂಡತಿ ಶಿವಮ್ಮ ಪಾರ್ಶ್ವವಾಯುವಿಗೆ ತುತ್ತಾಗಿ ಕೈ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದರು. ಅವರ ದಿನನಿತ್ಯ ಕಾರ್ಯಗಳನ್ನು ಮಾಡಿಸುವುದು ಹಾಗೂ ಅವರ ಕಾಳಜಿಯನ್ನು ಗಂಡನೇ ಮಾಡುತ್ತಿದ್ದ. ದುಡಿಮೆಯ ಜೊತೆಗೆ ತನ್ನ ಪತ್ನಿ ನೋಡಿಕೊಳ್ಳುವ ಜವಾಬ್ದಾರಿಯಿಂದ ಬೇಸರಗೊಂಡಿದ್ದ ಶಂಕರಪ್ಪ ಭಾನುವಾರ ಮಧ್ಯಾಹ್ನ ಪತ್ನಿಯನ್ನು ತಾನು ಕೆಲಸ ಮಾಡುತ್ತಿದ್ದ ಕಟ್ಟಡದ ನೀರಿನ ಸಂಪ್‌ಗೆ ತಳ್ಳಿ ಕೊಲೆ ಮಾಡಿದ್ದಾನೆ.

ಎಂದಿನಂತೆ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಕಾರ್ಮಿಕರು ಬಂದಾಗ ಮೃತದೇಹ ಪತ್ತೆಯಾಗಿದೆ. ಸದ್ಯ ಶಂಕರಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ : ಗಂಡನ ಕೊಲೆ ಮಾಡಿಸಿ ಹಸು ತುಳಿದು ಮೃತಪಟ್ಟನೆಂದು ಕಥೆ ಕಟ್ಟಿದ ಪತ್ನಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.