ETV Bharat / state

ಪಾದರಾಯನಪುರ ರಸ್ತೆ ಅಗಲೀಕರಣ ಯೋಜನೆ ಶೀಘ್ರ ಜಾರಿ: ಸಚಿವ ವಿ.ಸೋಮಣ್ಣ - ETV Bharath Karnataka

ಪಾದರಾಯನಪುರ ರಸ್ತೆ ಅಗಲೀಕರಣ ಯೋಜನೆ ಸಂಬಂಧ ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್, ಪೊಲೀಸ್ ಇಲಾಖೆ, ಬಿಬಿಎಂಪಿ ಅಧಿಕಾರಿಗಳ ಜೊತೆ ಸಚಿವ ವಿ ಸೋಮಣ್ಣ ಸಭೆ ನಡೆಸಿದರು.

v-somanna
ವಿ ಸೋಮಣ್ಣ
author img

By

Published : Dec 5, 2022, 2:05 PM IST

ಬೆಂಗಳೂರು: ಪಾದರಾಯನಪುರ ರಸ್ತೆ ವಿಸ್ತರಣೆ ಯೋಜನೆ ಶೀಘ್ರದಲ್ಲಿ ಅನುಷ್ಠಾನಗೊಳ್ಳಲಿದೆ ಎಂದು ಮೂಲಸೌಕರ್ಯ ಸಚಿವ ವಿ.ಸೋಮಣ್ಣ ತಿಳಿಸಿದರು. ಇಂದು ವಿಧಾನಸೌಧದಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್, ಪೊಲೀಸ್ ಇಲಾಖೆ, ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪಾದರಾಯನಪುರ ರಸ್ತೆ ಅಗಲೀಕರಣ ಸಂಬಂಧ ಸಭೆ ನಡೆಸಲಾಗಿದೆ. ಬಡವರು ವಾಸಿಸುವ ಆ ಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಆಗಲು ರಸ್ತೆಗಳು ಅಗತ್ಯತೆ ಇದೆ.

1.85 ಕಿ.ಮೀ ವಿಸ್ತರಣೆ ಮಾಡಬೇಕಿದೆ. ಸಿರ್ಸಿ ವೃತ್ತದಿಂದ ವಿಜಯನಗರ ಪೈಪ್ ಲೈನ್ ವರೆಗಿನ ರಸ್ತೆ ಅಗಲೀಕರಣದ ಈ ಯೋಜನೆಗೆ 1,63,190 ಚ.ಅಡಿ ಅಗಲೀಕರಣಕ್ಕೆ ಜಾಗ ಬೇಕಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಈಗಿನ ದರದಂತೆ 140 ಕೋಟಿ ರೂ. ಪರಿಹಾರ ಹಣ ನೀಡಿ 140 ಖಾಸಗಿ ಆಸ್ತಿಗಳನ್ನು ಸ್ವಾಧೀನ ಪಡಿಸಲಾಗುವುದು. ಯೋಜನೆಗೆ ಒಟ್ಟು 223 ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗುವುದು ಎಂದರು.

ಪಾದರಾಯನಪುರ ರಸ್ತೆ ಅಗಲೀಕರಣ ಯೋಜನೆ ಶೀಘ್ರ ಜಾರಿ: ಸಚಿವ ವಿ.ಸೋಮಣ್ಣ

ಈ ಯೋಜನೆಯಡಿ ಪೊಲೀಸ್ ಗ್ರೌಂಡ್​ನಲ್ಲಿ ಅಂಡರ್ ಪಾಸ್ ನಿರ್ಮಿಸಲಾಗುತ್ತದೆ. ಮೇಲ್ಸೇತುವೆ ಮಾಡಲು 600 ಕೋಟಿ ರೂ. ಬೇಕಾಗುತ್ತದೆ. ಆದರೆ ಮೇಲ್ಸೇತುವೆ ಇಲ್ಲದೇ ಈಗ ನಾವು 230 ಕೋಟಿ ರೂ.ನಲ್ಲಿ ಇಡೀ ಯೋಜನೆಯನ್ನು ಪೂರ್ಣಗೊಳಿಸಲಿದ್ದೇವೆ. ಯೋಜನೆ ಅನುಷ್ಠಾನಕ್ಕೆ ಬಗ್ಗೆ ಸಿಎಂಗೆ ಮನವಿ ಸಲ್ಲಿಸುತ್ತೇವೆ.

ಈ ಯೋಜನೆಗಾಗಿ ಬಿಬಿಎಂಪಿ, ಕೆಪಿಟಿಸಿಎಲ್, ಪೊಲೀಸ್ ಇಲಾಖೆ, ಖಾಸಗಿ ವ್ಯಕ್ತಿಗಳ ಭೂಮಿ ಕೊಡಬೇಕಾಗುತ್ತದೆ. ಜೆ.ಜೆ.ನಗರ ಪೊಲೀಸ್ ಠಾಣೆ ಯೋಜನೆಗಾಗಿ ತೆರವು ಮಾಡಲಾಗುವುದು. ಅದನ್ನು ಬೇರೆ ಕಡೆ ನಿರ್ಮಿಸಲಾಗುತ್ತದೆ‌ ಎಂದು ವಿವರಿಸಿದ್ದಾರೆ. ಶಾಸಕ ಜಮೀರ್ ಅಹಮ್ಮದ್ ಖಾನ್ ನಮಗಿಂತ ವೇಗದಲ್ಲಿದ್ದಾರೆ. ತುಂಬಾ ವರ್ಷದಿಂದ ನನೆಗುದುಗೆ ಬಿದ್ದಿರುವ ಈ ಯೋಜನೆ ಸಾಕಾರಗೊಳ್ಳಲಿದೆ. ಜನರೂ ಈ ಯೋಜನೆ ಅನುಷ್ಟಾನಕ್ಕಾಗಿ ಆಗ್ರಹಿಸುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ರಾಯಚೂರಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ನೂಕಾಟ-ತಳ್ಳಾಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.