ಬೆಂಗಳೂರು: ಸೀಲ್ಡೌನ್ ಲೆಕ್ಕಿಸದ ಪಾದರಾಯನಪುರ ನಿವಾಸಿಗಳು ರೈಲ್ವೆ ಹಳಿ ದಾಟಿ, ಕಾಂಪೌಂಡ್ ಹಾರುತ್ತಿದ್ದು, ಅಕ್ಕಪಕ್ಕದ ವಾರ್ಡ್ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಪಾದರಾಯನಪುರ ಬಳಿ ಈಗಾಗಲೇ ಸುಮಾರು 50 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಹೀಗಾಗಿ ರಾಂಡಂ ಪರೀಕ್ಷೆ ನಡೆಸಲು ಬಿಬಿಎಂಪಿ ಹಾಗೂ ಆರೊಗ್ಯಾಧಿಕಾರಿಗಳು ಮುಂದಾಗಿದ್ದಾರೆ. ಸದ್ಯ ಪಾದರಾಯನಪುರ ಸೀಲೌಡೌನ್ ಆಗಿದ್ದರೂ ಜನ ಮಾತ್ರ ಓಡಾಟ ನಿಲ್ಲಿಸಿಲ್ಲ. ಪೊಲೀಸ್ ಅಧಿಕಾರಿಗಳು ರಸ್ತೆಯ ಗಲ್ಲಿ ಗಲ್ಲಿಗಳಲ್ಲಿ ಬ್ಯಾರಿಕೇಡ್ ಹಾಕಿ ಜನರ ಓಡಾಟಕ್ಕೆ ಕಡಿವಾಣ ಹಾಕಿದ್ದಾರೆ. ಹೀಗಾಗಿ ಪೊಲೀಸರ ಕಣ್ತಪ್ಪಿಸಿ ರೈಲ್ವೆ ಹಳಿ ದಾಟಿ ಜನ ಓಡಾಡುತ್ತಿದ್ದಾರೆ.
ಈ ಹಿಂದೆ ಪಾದರಾಯನಪುರ ಬಳಿ ಕೊರೊನಾ ಕೇಸ್ ಪತ್ತೆಯಾದಾಗ ಕೊರೊನಾ ಸೋಂಕಿತರ ಜೊತೆ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲು ತೆರಳಿದ ಬಿಬಿಎಂಪಿ ಹಾಗೂ ಆರೋಗ್ಯಧಿಕಾರಿಗಳು ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದರು.