ETV Bharat / state

ರಮೇಶ್ ಆತ್ಮಹತ್ಯೆ ಪ್ರಕರಣ: ಪೊಲೀಸರಿಂದ ಪರಮೇಶ್ವರ್​​​ ಕಾರು ಚಾಲಕನ ವಿಚಾರಣೆ - parameshwar PA suicide case

ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರ ಪಿಎ ರಮೇಶ್​ ಆತ್ಮಹತ್ಯೆ ಪ್ರಕರಣ ತನಿಖೆಯು ನಗರದ ಜ್ಞಾನ ಭಾರತಿ ಠಾಣೆ ಇನ್ಸ್​ಪೆಕ್ಟರ್ ಶಿವ ರೆಡ್ಡಿ ನೇತೃತ್ವದಲ್ಲಿ ನಡೆಯುತ್ತಿದೆ.

ಪಿಎ ರಮೇಶ್ ಆತ್ಮಹತ್ಯೆ ಪ್ರಕರಣ
author img

By

Published : Oct 13, 2019, 1:20 PM IST

ಬೆಂಗಳೂರು: ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರ ಆಪ್ತ ಕಾರ್ಯದರ್ಶಿ ರಮೇಶ್​ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಜ್ಞಾನ ಭಾರತಿ ಪೊಲೀಸರು ತನಿಖೆ ಆರಂಭಿಸಿದ್ದಾರೆ‌.

ಇನ್ಸ್​ಪೆಕ್ಟರ್ ಶಿವರೆಡ್ಡಿ ನೇತೃತ್ವದಲ್ಲಿ ಪರಮೇಶ್ವರ್ ಅವರ ಕಾರು ಚಾಲಕ ಅನಿಲ್ ಎಂಬುವರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅನಿಲ್ ಹಾಗೂ ಮೃತ ರಮೇಶ್ ಉತ್ತಮ ಸ್ನೇಹಿತರಾಗಿದ್ದರು. ಹಾಗೆಯೇ ಇಬ್ಬರೂ ಪರಮೇಶ್ವರ್ ಬಳಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅನಿಲ್ ಅವರಿಂದ ರಮೇಶ್ ಕುರಿತು ಮಾಹಿತಿ ಹಾಗೂ ಸ್ನೇಹಿತರು, ಅಪ್ತವಲಯದಲ್ಲಿ ರಮೇಶ್​ ಹೇಗಿದ್ದರು ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲದೆ ರಮೇಶ್ ಕೊನೆಯ ಬಾರಿಗೆ ಕರೆ ಮಾಡಿದ್ದವರ ವಿವರಕ್ಕಾಗಿ ಸರ್ವೀಸ್ ಪ್ರೊವೈಡರ್​​ಗೆ ಜ್ಞಾನ ಭಾರತಿ ಪೊಲೀಸರು ಪತ್ರ ಬರೆದಿದ್ದಾರೆ. ರಮೇಶ್ ಕೊನೆಯ ಬಾರಿಗೆ ಯಾರೊಂದಿಗೆ ಮಾತನಾಡಿದ್ದರು ಎಂಬ ಬಗ್ಗೆ ವಿವರ ನಾಳೆ ಪೊಲೀಸರ ಕೈಗೆ ಸಿಗಲಿದೆ ಎಂದು ಹೇಳಲಾಗುತ್ತಿದೆ.

Intro: ಪಿ ಎ ರಮೇಶ್ ಆತ್ಮಹತ್ಯೆ ಪ್ರಕರಣ
ಪರಮೇಶ್ವರ್ ಕಾರು ಚಾಲಕ ಅನಿಲ್ ರಿಂದ ಮಾಹಿತಿ ಸಂಗ್ರಹ

ಪರಮೇಶ್ವರ್ ಪಿಎ ಆತ್ಮಹತ್ಯೆ ಪ್ರಕರಣಕ್ಕೆ ಸಂಭದಿಸಿದಂತೆ
ಜ್ಞಾನ ಭಾರತಿ ಪೊಲೀಸ್ರು ಪ್ರಕರಣದ ತನಿಖೆ ಆರಂಭ ಗೊಳಿಸಿದ್ದಾರೆ‌. ಜ್ನಾನಭಾರತಿ ಇನ್ಸ್ಪೆಕ್ಟರ್ ಶಿವರೆಡ್ಡಿ ನೇತೃತ್ವದಲ್ಲಿ ಪರಮೇಶ್ವರ್ ಕಾರು ಚಾಲಕ ಅನಿಲ್ ರಿಂದ ಮಾಹಿತಿ ಸಂಗ್ರಹ ಮಾಡ್ತಿದ್ದಾರೆ.

ಅನಿಲ್ ರಮೇಶ್ ಗೆ ಉತ್ತಮ ಸ್ನೇಹಿತನಾಗಿದ್ದ ಹಾಗೆ ಇಬ್ಬರು ಪರಮೇಶ್ವರ್ ಬಳಿ ಕಾರ್ಯ ನಿರ್ವಹಿಸ್ತಾ ಇದ್ರು ಈ ಹಿನ್ನಲೆ ಅನಿಲ್ ರಿಂದ ರಮೇಶ್ ಕುರಿತು ಮಾಹಿತಿ ಹಾಗೆ ಸ್ನೇಹಿತರು ಅಪ್ತವಲಯದಲ್ಲಿ ರಮೇಶ ಹೇಗಿದ್ದ ಅನ್ನೋದ್ರ ಬಗ್ಗೆ ಅನಿಲರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಅಲ್ಲದೆ ರಮೇಶ್ ಕೊನೆ ಬಾರಿಗೆ ಕರೆ ಮಾಡಿದ್ದವರ ವಿವರಕ್ಕಾಗಿ ಸರ್ವೀಸ್ ಪ್ರೊವೈಡರ್ ಗೆ ಜ್ಞಾನ ಭಾರತಿ ಪೊಲೀಸ್ರು ಪತ್ರ ಬರೆದಿದ್ದು
ನಾಳೆ ರಮೇಶ್ ಕಡೆಯ ಬಾರಿಗೆ ಮಾತನಾಡಿರುವವರ ಸಂಪೂರ್ಣ ಮಾಹಿತಿ ಪೊಲೀಸ್ರ ಕೈಗೆ ಸಿಗಲಿದೆ Body:KN_BNG_05_RMAESH_7204498Conclusion:KN_BNG_05_RMAESH_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.