ETV Bharat / state

ಮಾಜಿ ಶಾಸಕನ ವಿರುದ್ಧ ಮೂಲ ಬಿಜೆಪಿಗರಿಂದ ರಾತ್ರೋರಾತ್ರಿ ಪ್ರತಿಭಟನೆ

ಮಾಜಿ ಶಾಸಕ ಮುನಿರತ್ನ ಅವರ ವಿರುದ್ಧ ಮೂಲ ಬಿಜೆಪಿಗರು ಆರ್.​ಆರ್​ ನಗರ ಪೊಲೀಸ್ ಠಾಣೆ ಮುಂಭಾಗ ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ.

Overnight protest
ಮೂಲ ಬಿಜೆಪಿಗರಿಂದ ರಾತ್ರೋ ರಾತ್ರಿ ಪ್ರತಿಭಟನೆ
author img

By

Published : Sep 1, 2020, 9:23 AM IST

Updated : Sep 1, 2020, 9:46 AM IST

ಬೆಂಗಳೂರು: ಕಳೆದ ರಾತ್ರಿ ಮಾಜಿ ಶಾಸಕ ಮುನಿರತ್ನ ಅವರ ವಿರುದ್ಧ ಮೂಲ ಬಿಜೆಪಿಗರು ಆರ್.​ಆರ್​ ನಗರ ಪೊಲೀಸ್ ಠಾಣೆ ಮುಂಭಾಗ ತುಳಸಿ ಮುನಿರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಮೂಲ ಬಿಜೆಪಿಗರಿಂದ ರಾತ್ರೋರಾತ್ರಿ ಪ್ರತಿಭಟನೆ

ಮಾಜಿ ಶಾಸಕ ಮುನಿರತ್ನ ಇತ್ತೀಚೆಗೆ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದರ ಬಗ್ಗೆ ಬಿಜೆಪಿಯ ಕಾರ್ಯಕರ್ತ ಬದ್ರಿನಾಥ್ ಪರೋಕ್ಷವಾಗಿ ಕಮೆಂಟ್ ಮಾಡಿದ್ದರು. ಬದ್ರಿನಾಥ್ ಕಾಮೆಂಟ್ ಮಾಡಿದ ಕಾರಣ ಆರ್.​ಆರ್​ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸರು ನಿನ್ನೆ ಬದ್ರಿನಾಥ್ ಮೇಲೆ ಎಫ್​ಐಆರ್ ದಾಖಲಿಸಿ ಬಂಧಿಸಿದ್ರು. ಬದ್ರಿನಾಥ್ ಬಂಧನ ಖಂಡಿಸಿ ನೂರಾರು ಮೂಲ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ‌ ನಡೆಸಿದ್ದಾರೆ.

ಪ್ರತಿಭಟನೆ ಹೊಣೆ ಹೊತ್ತ ತುಳಸಿ ಮುನಿರಾಜ್ ಮಾತನಾಡಿ, ಅನರ್ಹ ಶಾಸಕನ ಹಗರಣವನ್ನು ಹೊರ ತರುವ‌ ವಿಚಾರದ ಬಗ್ಗೆ ಫೇಸ್​​ಬುಕ್​​ನಲ್ಲಿ ಬರೆದಿದ್ದಾರೆ. ಈ ಕಾರಣಕ್ಕೆ ಹಿರಿಯ ನಾಗರಿಕ ಅನ್ನೋ ವಿಚಾರವನ್ನು ಗಮನಿಸದೆ ಬಂಧಿಸಿದ್ದಾರೆ. ಬದ್ರಿನಾಥ್ ಕಾಮೆಂಟ್ ಮಾಡಿದ್ದಕ್ಕೆ ಮಾಜಿ ಶಾಸಕ ಮುನಿರತ್ನ ಅಭಿಮಾನಿ ಥ್ರೆಟ್ ಕಾಲ್ ಮಾಡಿದ್ದಾನೆ. ಈ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ. ಫೇಸ್​​ಬುಕ್​ನಲ್ಲಿ‌ ಅಭಿಪ್ರಾಯ ಹಂಚಿಕೊಳ್ಳುವ ಹಕ್ಕು ಇದೆ.‌ ಬದ್ರಿನಾಥ್ ಅವರನ್ನು ಬಿಡುಗಡೆ‌ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ನಡೆಸುವುದಾಗಿ‌ ಎಚ್ಚರಿಕೆ ನೀಡಿದ್ದಾರೆ.

Last Updated : Sep 1, 2020, 9:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.