ETV Bharat / state

ನಮ್ಮ ಮೆಟ್ರೋ ಫಸ್ಟ್ ಡೇ 91 ಟ್ರಿಪ್: 3 ಸಾವಿರಕ್ಕೂ ಹೆಚ್ಚು ಜನರ ಓಡಾಟ - Metro traffic

ನಮ್ಮ ಮೆಟ್ರೋ ರೈಲು ಸಂಚರಿಸಲು ಬಿಎಂಆರ್​​ಸಿಎಲ್ ತಯಾರಿ ನಡೆಸಿ, ಕೆಲ ರೂಲ್ಸ್ ಹಾಕಿ ಇಂದಿನಿಂದ ಮೆಟ್ರೋ ಓಡಾಟಕ್ಕೆ ಅನುವು ಮಾಡಿಕೊಟ್ಟಿತ್ತು. ಮೊದಲ ದಿನವೇ 3770 ಜನರು ಪ್ರಯಾಣಿಸಿ, 1.25 ಲಕ್ಷ ಆದಾಯ ಬಂದಿದೆ.

ಮೆಟ್ರೋ ಸಂಚಾರ
ಮೆಟ್ರೋ ಸಂಚಾರ
author img

By

Published : Sep 7, 2020, 10:27 PM IST

ಬೆಂಗಳೂರು: ಇಂದಿನಿಂದ ಬೆಂಗಳೂರಿನಲ್ಲಿ ಅಧಿಕೃತವಾಗಿ ಮೆಟ್ರೋ ರೈಲು ಓಡಾಟ ಆರಂಭಿಸಿದ್ದು ಜನರು ಧನಾತ್ಮಕವಾಗಿ ಸ್ಪಂದಿಸಿದ್ದಾರೆ.

ಬೆಳಗ್ಗೆ ಸಂಜೆಗಷ್ಟೇ ನಿಗದಿ ಮಾಡಿದ್ದ ವೇಳೆ ಒಟ್ಟು 91 ಟ್ರಿಪ್ ಮೆಟ್ರೋ ಸಂಚರಿಸಿದೆ. ಇಂದು 1.25 ಲಕ್ಷ ಆದಾಯ ಬಂದಿದೆ. ಇತ್ತ ಟಿಕೆಟ್ ಕಾಯಿನ್ ಸದ್ಯದ ಮಟ್ಟಿಗೆ ನಿಷೇಧವಾಗಿರುವ ಕಾರಣ ಮೆಟ್ರೋ ಕಾರ್ಡ್​ ಬಳಕೆಗೆ ಅನುವು ಮಾಡಿಕೊಟ್ಟಿದ್ದು, ಕಾರ್ಡ್ ಇದ್ದವರಷ್ಟೇ ಸಂಚಾರ ಮಾಡಿದ್ದಾರೆ.

ಮೆಟ್ರೋ ಸಂಚಾರಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರೈಲು ಸಂಚರಿಸಲು ಬಿಎಂಆರ್​​ಸಿಎಲ್ ತಯಾರಿ ನಡೆಸಿ, ಜೊತೆಗೆ ಎಸ್​​ಒಪಿಯನ್ನ ಜಾರಿ ಮಾಡಿತು.‌ ಪ್ರಯಾಣಿಕರಿಗೆ ಕೆಲ ರೂಲ್ಸ್ ಹಾಕಿ ಇಂದಿನಿಂದ ಮೆಟ್ರೋ ಓಡಾಟಕ್ಕೆ ಅನುವು ಮಾಡಿಕೊಟ್ಟಿತ್ತು.

ಕೊರೊನಾ ಕಾರಣಕ್ಕೆ ಮಾರ್ಚ್ 22 ರಿಂದ ಓಡಾಟವನ್ನ ರದ್ದುಪಡಿಸಲಾಗಿತ್ತು. ಇದೀಗ ಅನ್ಲಾಕ್ 4 ರ ಅನ್ವಯ ಇಂದಿನಿಂದ ಹಂತ ಹಂತವಾಗಿ ಮೆಟ್ರೋ ರೈಲು ಓಡಿಸಲು ಫ್ಲಾನ್ ರೂಪಿಸಿಲಾಗಿದೆ. ಮೊದಲಿಗೆ ನೇರಳೆ ಮಾರ್ಗದಲ್ಲಿ ಹೊರಟ ಮೆಟ್ರೋದಲ್ಲಿ ಮೊದಲ ದಿನ 3770 ಜನರು ಪ್ರಯಾಣಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.