ETV Bharat / state

ಸಂಘದ ಶೋಭಾ, ಎಂಜಿನಿಯರ್ ಖೂಬಾ, ದಲಿತರ ಧ್ವನಿ ಹಾಗು ಉದ್ಯಮಿಗೂ ಕೇಂದ್ರದಲ್ಲಿ ಸ್ಥಾನ! - Central government cabinet explanation

ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯದ ನಾಲ್ವರಿಗೆ ಮಂತ್ರಿ ಸ್ಥಾನ ಅರಸಿಕೊಂಡು ಬಂದಿದೆ. ಶೋಭಾ ಕರಂದ್ಲಾಜೆ, ಎ. ನಾರಾಯಣ ಸ್ವಾಮಿ, ರಾಜೀವ್ ಚಂದ್ರಶೇಖರ್‌ ಹಾಗು ಭಗವಂತ ಖೂಬಾ ಅವರನ್ನು ಪ್ರಧಾನಿ ಮೋದಿ ತಮ್ಮ ಕ್ಯಾಬಿನೆಟ್‌ ಸೇರಿಸಿಕೊಂಡಿದ್ದಾರೆ.

OUR FROM KARNTAKA TO TAKE OATH AS CABINET MINISTERS
ಮೋದಿ ಸಂಪುಟ ಸೇರಿದ ನಾಲ್ವರು ಕನ್ನಡಿಗರು
author img

By

Published : Jul 7, 2021, 5:45 PM IST

ಬೆಂಗಳೂರು: ರಾಜ್ಯದ ನಾಲ್ವರು ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ. ಸದಾನಂದಗೌಡರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಶೋಭಾ ಕರಂದ್ಲಾಜೆ, ಸುರೇಶ್ ಅಂಗಡಿ ನಿಧನದಿಂದ ತೆರವಾದ ಸ್ಥಾನಕ್ಕೆ ಭಗವಂತ ಖೂಬಾರನ್ನು ನೇಮಿಸಲಾಗಿದೆ. ರಾಜ್ಯಕ್ಕೆ ಹೆಚ್ಚುವರಿಯಾಗಿ ನಾರಾಯಣಸ್ವಾಮಿ ಮತ್ತು ರಾಜೀವ್ ಚಂದ್ರಶೇಖರ್‌ಗೆ ಅವಕಾಶ ನೀಡಲಾಗಿದೆ.

ಸಂಘ ಪರಿವಾರದಿಂದ ಬಂದ ಶೋಭಾ ಕರಂದ್ಲಾಜೆ:

1966 ರ ಅಕ್ಟೋಬರ್ 23 ರಂದು ಉಡುಪಿ ಜಿಲ್ಲೆಯ ಪುತ್ತೂರಿನಲ್ಲಿ ಮೋನಪ್ಪಗೌಡ, ಪೂವಕ್ಕ ದಂಪತಿ ಪುತ್ರಿಯಾಗಿ ಜನಿಸಿದ ಶೋಭಾ ಕರಂದ್ಲಾಜೆ ಆರ್​ಎಸ್​ಎಸ್​ನಿಂದ ಪ್ರಭಾವಿತರಾಗಿ ಸಂಘ ಪರಿವಾರ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದರು.1994 ರಲ್ಲೇ ರಾಜಕೀಯ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದರೂ, 2004 ರಲ್ಲಿ ವಿಧಾನ ಪರಿಷತ್ ಗೆ ಆಯ್ಕೆಯಾಗುವ ಮೂಲಕ ಚುನಾವಣಾ ರಾಜಕೀಯ ಪ್ರವೇಶ ಮಾಡಿದರು.

2008 ರಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಯಡಿಯೂರಪ್ಪ ಸಂಪುಟದಲ್ಲಿ ಸಚಿವೆಯಾಗಿ ಕೆಲಸ ಮಾಡಿದರು. 2008 ರಲ್ಲಿ ಮೊದಲ ಬಾರಿ ಸಚಿವ ಸ್ಥಾನ ಸಿಕ್ಕಾಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಉತ್ತಮವಾಗಿ ಕೆಲಸ ಮಾಡಿ ಹೆಸರು ಪಡೆದಿದ್ದರು. ಆದರೆ 2009 ರಲ್ಲಿ ಅಂದು ಬದಲಾದ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಶೋಭಾ ಕರಂದ್ಲಾಜೆಯನ್ನು ಸಂಪುಟದಿಂದ ಕೈಬಿಡಲಾಯಿತು.

ಇದನ್ನೂ ಓದಿ: ಕರಂದ್ಲಾಜೆ, ಖೂಬಾ, ನಾರಾಯಣಸ್ವಾಮಿ ಸೇರಿ ನಾಲ್ವರಿಗೆ ಕೇಂದ್ರ ಸಚಿವ ಸ್ಥಾನ

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ವರ್ಷದಲ್ಲೇ ಮತ್ತೆ ಯಡಿಯೂರಪ್ಪ ಸಂಪುಟಕ್ಕೆ ಸೇರ್ಪಡೆಯಾದ ಶೋಭಾ ಕರಂದ್ಲಾಜೆ ಇಂಧನ ಇಲಾಖೆ ಸಚಿವೆಯಾಗಿ ಕೆಲಸ ಮಾಡಿದರು. ನಂತರ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕೆಜೆಪಿ ಕಟ್ಟಿದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಗುಡ್ ಬೈ ಹೇಳಿ ಬಿಎಸ್​ವೈ ಹಿಂದೆ ನಡೆದಿದ್ದರು. ನಂತರ ಕೆಜೆಪಿಯಿಂದ ಸೋತರೂ ಕೂಡ ಯಡಿಯೂರಪ್ಪ ಜೊತೆಯಲ್ಲಿಯೇ ಬಿಜೆಪಿಗೆ ಮರಳಿ 2014 ರಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಮೊದಲ ಬಾರಿ ಸಂಸದರಾಗಿ ಆಯ್ಕೆಯಾದರು. 2019 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿಯೂ ಮರು ಆಯ್ಕೆಯಾಗಿದ್ದಾರೆ. ಸಂಸದೆಯಾದ ಬಳಿಕ ಇವರು ಮಹಿಳಾ ಸಬಲೀಕರಣ ಸಮಿತಿ ಸದಸ್ಯೆ, ರಕ್ಷಣಾ ಸ್ಥಾಯಿ ಸಮಿತಿ ಸದಸ್ಯೆ ಮತ್ತು ಸಲಹಾ ಸಮಿತಿ ಸದಸ್ಯೆ, ಜಮೀನು ಸ್ವಾಧೀನದಲ್ಲಿ ನ್ಯಾಯೋಚಿತ ಪರಿಹಾರ ಮತ್ತು ಪಾರದರ್ಶಕತೆ ಜಂಟಿ ಸಮಿತಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ.

ಎಂಜಿನಿಯರ್​ ಆಗಿದ್ದ ಭಗವಂತ ಖೂಬಾ:

1967 ರ ಜೂನ್ 1 ರಂದು ಗುರುಬಸಪ್ಪ ಖೂಬಾ ಮತ್ತು ಶೀಲಾ ಖೂಬಾ ದಂಪತಿ ಪುತ್ರನಾಗಿ ಬೀದರ್ ಜಿಲ್ಲೆ ಔರಾದ್ ನಲ್ಲಿ ಜನಿಸಿದ ಭಗವಂತ ಖೂಬಾ, ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದು ತುಮಕೂರಿನ ಸಿದ್ಧಗಂಗಾ ಇನ್ಸಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ತಮ್ಮ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

2014 ರ ಚುನಾವಣೆಯಲ್ಲಿ ಮಾಜಿ ಸಿಎಂ ಧರಂಸಿಂಗ್ ವಿರುದ್ಧ ಗೆಲುವು ಪಡೆದು ಮೊದಲ ಬಾರಿ ಸಂಸತ್ ಪ್ರವೇಶ ಮಾಡಿದರು.

2019 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿಯೂ ಮರು ಆಯ್ಕೆ ಆಗಿ ಎರಡನೇ ಬಾರಿ ಸಂಸತ್ ಸದಸ್ಯರಾಗಿದ್ದಾರೆ. ಆಹಾರ, ಗ್ರಾಹಕ ವ್ಯವಹಾರ ಮತ್ತು ಪಡಿತರ ಸರಬರಾಜು ಸ್ಥಾಯಿ ಸಮಿತಿ ಸದಸ್ಯ, ಲೋಕಸಭೆ ಸದಸ್ಯರಿಗೆ ಕಂಪ್ಯೂಟರ್ ನೀಡಲು ಪರಾಮರ್ಶೆ ಸಮಿತಿ ಸದಸ್ಯರಾಗಿದ್ದರು. ರೈಲ್ವೆ ಖಾತೆ ಸಲಹಾ ಸಮಿತಿ ಸದಸ್ಯರಾಗಿ ಕೆಲಸ, ಯೋಜನೆ ಮತ್ತು ಆರ್ಕಿಟೆಕ್ಚರ್ ಶಿಕ್ಷಣ ಪರಿಷತ್ತಿನ ಸದಸ್ಯರಾಗಿ ಕೆಲಸ ಮಾಡಿದ್ದಾರೆ.

ಮೊದಲ ಅವಧಿಯಲ್ಲೇ ಕೇಂದ್ರ ಸಂಪುಟ ಸೇರಿದ ಎ.ನಾರಾಯಣಸ್ವಾಮಿ:

1957 ಮೇ 16 ರಂದು ಅಬ್ಬಯ್ಯ ಪುತ್ರನಾಗಿ ಆನೇಕಲ್​ನಲ್ಲಿ ಜನಸಿದ ಎ.ನಾರಾಯಣ ಸ್ವಾಮಿ ಅವರ ಪೂರ್ಣ ಹೆಸರು ಅಬ್ಬಯ್ಯ ನಾರಾಯಣಸ್ವಾಮಿ. ಹಲವು ಬಾರಿ ಬಿಜೆಪಿಯಿಂದ ಆನೇಕಲ್ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆನೆಕಲ್ ಶಾಸಕರಾಗಿದ್ದ ನಾರಾಯಣಸ್ವಾಮಿ 2010 ರಲ್ಲಿ ರಾಜ್ಯ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದರು.

ಇದನ್ನೂ ಓದಿ: ಮೋದಿ ಕ್ಯಾಬಿನೆಟ್​: 13 ವಕೀಲರು, 6 ವೈದ್ಯರು, 5 ಇಂಜಿನಿಯರ್ ಸೇರಿ ಉನ್ನತ ಶಿಕ್ಷಣ ಮುಗಿಸಿದವರಿಗೆ ಮಣೆ!

2019 ರಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದು, ಸಂಘಟನಾತ್ಮಕ ಚಟುವಟಿಕೆಯನ್ನು ಪರಿಗಣಿಸಿ ದಲಿತ ಸಮುದಾಯ ನಾಯಕರಾಗಿರುವ ನಾರಾಯಣಸ್ವಾಮಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಚಿತ್ರದುರ್ಗದಿಂದ ಸಂಸದರಾಗಿ ಆಯ್ಕೆಯಾದ ಎ.ನಾರಾಯಣಸ್ವಾಮಿ ಮೊದಲ ಅವಧಿಯಲ್ಲೇ ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.

ಕೇಂದ್ರ ಸಂಪುಟ ಸೇರಿದ ಉದ್ಯಮಿ ರಾಜೀವ್ ಚಂದ್ರಶೇಖರ್:

ಉದ್ಯಮಿ ರಾಜೀವ್ ಚಂದ್ರಶೇಖರ್ 1964 ರ ಮೇ 31 ರಂದು ಗುಜರಾತ್ ನ ಅಹಮದಾಬಾದ್​ನಲ್ಲಿ ಏರ್ ಕಮಾಂಡರ್ ಎಂ.ಕೆ ಚಂದ್ರಶೇಖರ ಅವರ ಪುತ್ರನಾಗಿ ಜನಿಸಿದ್ದು, 2006 ರಿಂದ 2018 ರವರೆಗೆ ಎರಡು ಅವಧಿಗೆ ಕರ್ನಾಟಕದಿಂದ ಸ್ವತಂತ್ರ ಸದಸ್ಯರಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿ, ಬಿಜೆಪಿ ನೇತೃತ್ವದ ಒಕ್ಕೂಟದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಕೇರಳ ವಿಭಾಗದ ಉಪಾಧ್ಯಕ್ಷರಾಗಿ, ಹಣಕಾಸು ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರಾಗಿ, ಸಾರ್ವಜನಿಕ ಖಾತೆಗಳ ಸಮಿತಿಯ (ಪಿಎಸಿ) ಸದಸ್ಯರಾಗಿ, ದತ್ತಾಂಶ ಸಂರಕ್ಷಣಾ ಮಸೂದೆ, 2019 ರ ಜಂಟಿ ಸಮಿತಿಯ ಸದಸ್ಯರಾಗಿ ಮತ್ತು ಸಂವಹನ ಸಚಿವಾಲಯದ MoE ಮತ್ತು IT ಕುರಿತು ಸಮಾಲೋಚನಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

ಚಂದ್ರಶೇಖರ್ ಅವರು ಸಂಸತ್ತಿನ ಸದಸ್ಯರಾಗಿ, ರಕ್ಷಣಾ ಸ್ಥಾಯಿ ಸಮಿತಿ, ಹಣಕಾಸು ಸಲಹಾ ಸಮಿತಿ, ರಾಷ್ಟ್ರೀಯ ಕೆಡೆಟ್ ದಳದ ಕೇಂದ್ರ ಸಲಹಾ ಸಮಿತಿ, ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮಾನಿಟರಿಂಗ್ ಸಮಿತಿಯ ಸಹ-ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಮೂರನೇ ಬಾರಿಗೆ 2018 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಸದನದ ವಿವಿಧ ಸಮಿತಿಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಕಾರ್ಯನಿರ್ವಹಣೆ ಮಾಡಿದ್ದು, ಇದೀಗ ಮೋದಿ ಸಂಪುಟದಲ್ಲಿ ಅವಕಾಶ ಪಡೆಯುವಲ್ಲಿ ಸಫಲರಾಗಿದ್ದಾರೆ.

ಇದನ್ನೂ ಓದಿ: ಮೋದಿ ಸಂಪುಟದಲ್ಲಿ 43 ಮಂದಿಗೆ ಮಂತ್ರಿಗಿರಿ: ಕರ್ನಾಟಕದ ನಾಲ್ವರು ಸೇರಿ ಇಲ್ಲಿದೆ ಹೊಸ ಸಚಿವರ ಪಟ್ಟಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.