ಬೆಂಗಳೂರು: ಒಟಿಟಿ ಮೂಲಕ ಸಿನಿಮಾ ರಿಲೀಸ್ ಮಾಡುವುದು ಚಿತ್ರರಂಗಕ್ಕೆ ಹೊಡೆತ ಅಂತ ಹೇಳೋಕೆ ಆಗಲ್ಲ. ಅದು ನಿರ್ಮಾಪಕರಿಗೆ ಬೋನಸ್ ಇದ್ದಂತೆ ಎಂದು ನಟ ಶಿವರಾಜಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಕಳೆದ ಐದು ತಿಂಗಳಿನಿಂದ ಸಿನಿ ರಂಗ ಸಂಕಷ್ಟ ಎದುರಿಸುತ್ತಿದೆ. ಇನ್ನೊಂದು ಕಡೆ ಒಟಿಟಿ ಮೂಲಕ ಉತ್ತಮ ಸಂಪಾದನೆ ಕೂಡಾ ಆಗಿದೆ. ಡಬ್ಬಿಂಗ್ ಚಿತ್ರಗಳು ಕೂಡಾ ಸಮಸ್ಯೆ ಆಗಿಲ್ಲ. ಬೇರೆ ಭಾಷೆಯ ಚಿತ್ರಗಳ ಜೊತೆ ಕನ್ನಡ ಚಿತ್ರಗಳು ಒಳ್ಳೆಯ ಸ್ಪರ್ಧೆ ನೀಡುತ್ತಿವೆ ಎಂದು ಹೇಳಿದರು.
ಚಿತ್ರಮಂದಿರಗಳನ್ನು ಬಿಡಲ್ಲ: ನಾವೂ ಕೇವಲ ಒಟಿಟಿ ಅವಲಂಭಿಸುವುದಿಲ್ಲ. ಯಾವುದೇ ಕಾರಣಕ್ಕೂ ಚಿತ್ರಮಂದಿರ ಬಿಡುವುದಿಲ್ಲ. ಅವುಗಳಿಗೆ ಯಾವೆಲ್ಲ ಭದ್ರತೆಗಳನ್ನು ಕಲ್ಪಿಸಬೇಕು ಆ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಈಚೆಗೆ ಕನ್ನಡ ಸೇರಿದಂತೆ ಹಿಂದಿ, ತೆಲುಗು ತಮಿಳು ಭಾಷೆಯ ಚಿತ್ರಗಳು ಒಟಿಟಿ ವೇದಿಕೆ ಅಡಿ ಜನರನ್ನು ತಲುಪಿವೆ. ಕೆಲವು ನಿರ್ಮಾಪಕರು ಇದರಿಂದ ಆದಾಯವನ್ನು ಗಳಿಸಲು ಸಾಧ್ಯವಾಗಿತ್ತು. ಆದರೆ, ಈ ಸಂಬಂಧ ಸ್ಯಾಂಡಲ್ ವುಡ್ನಲ್ಲಿ ಅಪಸ್ವರ ಕೇಳಿ ಬಂದಿದ್ದು, ನಿಜ.