ದೇವನಹಳ್ಳಿ: ಬೆಳೆಗಳನ್ನು ರೈತರು ನೇರವಾಗಿ ಮಾರಾಟ ಮಾಡಲು ಎಲ್ಲಾ ತೋಟಗಾರಿಕೆ ಇಲಾಖೆಯ ಉದ್ಯಾನವನ ಸೇರಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬಡಾವಣೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಉದ್ಯಾನವನಗಳಲ್ಲಿ ಶೀಘ್ರವಾಗಿ ಸಾವಯವ ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು ಎಂದು ತೋಟಗಾರಿಕೆ ಇಲಾಖೆ ಸಚಿವ ಆರ್. ಶಂಕರ್ ತಿಳಿಸಿದ್ದಾರೆ.
ಓದಿ: ಹುಬ್ಬಳ್ಳಿಯಲ್ಲಿ 'ರಾಬರ್ಟ್' ಪ್ರಿ ರಿಲೀಸ್ ಕಾರ್ಯಕ್ರಮ : ನೇರಪ್ರಸಾರ
ದೇವನಹಳ್ಳಿ ಪಟ್ಟಣದಲ್ಲಿ ಸ್ವದೇಶಿ ಜಾಗರಣ ಮಂಚ್ ವತಿಯಿಂದ ಆಯೋಜಿಸಲಾಗಿದ್ದ, ಸಾವಯವ ಉತ್ಪನ್ನಗಳ ಮಾರಾಟ ಸಂತೆಯನ್ನು ಉದ್ಘಾಟಿಸಿ ಮಾತನಾಡಿದರು. ತೋಟಗಾರಿಕೆ ಬೆಳೆಗಳಿಗೆ ಸೂಕ್ತ ವೇದಿಕೆ ಹಾಗೂ ಸ್ಥಳಾವಕಾಶವಿಲ್ಲದಿರುವ ಕಾರಣ, ರೈತರು ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿರುವುದನ್ನು ಅರಿತು, ಸರ್ಕಾರ ಸಾವಯವ ಮಾರಾಟ ಮಳಿಗೆಗಳನ್ನು ತೆರೆಯಲು ಮುಂದಾಗಿದೆ ಎಂದು ಹೇಳಿದರು.
ಬಳಿಕ ಸಚಿವರು ದೇವನಹಳ್ಳಿ ತಾಲ್ಲೂಕಿನ ಪೂಜೇನಹಳ್ಳಿಯಲ್ಲಿ ರೈತರ ಬೆಳೆಗಳ ಸಂರಕ್ಷಣೆಗಾಗಿ ನಿರ್ಮಾಣವಾಗುತ್ತಿರುವ ಶೈತ್ಯ ಘಟಕಕ್ಕೆ ಭೇಟಿ ನೀಡಿ, ನಿರ್ಮಾಣ ಪ್ರಕ್ರಿಯೆಯ ಹಂತವನ್ನು ಪರಿಶೀಲಿಸಿದರು.