ಬೆಂಗಳೂರು : ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಹಿನ್ನೆಲೆ ಕರೆಯಲಾಗಿದ್ದ ಪ್ರತಿಪಕ್ಷ ನಾಯಕರ ಸಭೆಯಲ್ಲಿ, ಸಿದ್ದರಾಮಯ್ಯ ಅವರು ಹಾಸ್ಯ ಚಟಾಕಿ ಹಾರಿಸುವ ಮೂಲಕ ಎಲ್ಲರೂ ನಗೆಗಡಲಲ್ಲಿ ತೇಲುವಂತೆ ಮಾಡಿದರು.
ಇದನ್ನೂ ಓದಿ: ನಾಳೆಯಿಂದ ಅಧಿವೇಶನ: ಸಿದ್ದರಾಮಯ್ಯ ನಿವಾಸದಲ್ಲಿ ಉಭಯ ಸದನಗಳ ಕಾಂಗ್ರೆಸ್ ನಾಯಕರ ಸಭೆ
ಸಭೆ ಆರಂಭದ ವೇಳೆ, ಎಲ್ಲರೂ ಮಾಸ್ಕ್ ತೆಗೆದು ಕೂತಿದ್ದರು. ಆದರೆ, ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮಾತ್ರ ಮಾಸ್ಕ್ ತೆಗೆದಿರಲಿಲ್ಲ. ಈ ವೇಳೆ ಮಾಸ್ಕ್ ತೆಗೆಯುವಂತೆ ಮಾಧ್ಯಮ ಪ್ರತಿನಿಧಿಗಳು ಮನವಿ ಮಾಡಿದರು. ಖರ್ಗೆ ಮಾಸ್ಕ್ ತೆಗೆಯಲು ಮುಂದಾದಾಗ ಹಾಸ್ಯ ಚಟಾಕಿ ಹಾರಿಸಿದ ಸಿದ್ದರಾಮಯ್ಯ, ಮಾಸ್ಕ್ ತೆಗೆಯದೆ ಇದ್ದರೂ ಅವರು ಖರ್ಗೆ ಅಂತ ಎಲ್ಲರಿಗೂ ಗೊತ್ತಾಗುತ್ತೆ ಅಂದ್ರು. ಸಿದ್ದರಾಮಯ್ಯ ಅವರ ಮಾತಿಗೆ ಸಭೆಯಲ್ಲಿದ್ದವರು ನಗೆಗಡಲಲ್ಲಿ ತೇಲಿದರು.