ETV Bharat / state

ನಾಳೆ ವಿಪಕ್ಷಗಳ ಒಕ್ಕೂಟದ ಮಹಾಮೈತ್ರಿ ಸಭೆ: ಪ್ರಮುಖವಾಗಿ ಆರು ಅಂಶಗಳ ಬಗ್ಗೆ ಚರ್ಚೆ ಸಾಧ್ಯತೆ! - ಈಟಿವಿ ಭಾರತ್​ ಕನ್ನಡ ನ್ಯೂಸ್

ಲೋಕಸಭೆ ಚುನಾವಣೆ ಸಂಬಂಧ ಕಾರ್ಯತಂತ್ರ ರೂಪಿಸಲು ನಾಳೆ ವಿಪಕ್ಷಗಳ ಮಹತ್ವದ ಸಭೆ ನಡೆಯಲಿದೆ.

ಮಹಾಘಟಬಂಧನ್​
ಮಹಾಘಟಬಂಧನ್​
author img

By

Published : Jul 17, 2023, 9:20 PM IST

Updated : Jul 17, 2023, 9:34 PM IST

ಬೆಂಗಳೂರು : ಕಾಂಗ್ರೆಸ್ ಸಮ್ಮುಖದಲ್ಲಿ ಬೆಂಗಳೂರಿನ ಖಾಸಗಿ ಹೊಟೇಲ್​ನಲ್ಲಿ ನಡೆಯುತ್ತಿರುವ ವಿಪಕ್ಷಗಳ ಒಕ್ಕೂಟದ ಎರಡನೇ ಮಹಾಘಟಬಂಧನ್​ ಸಭೆಗೆ 24 ಪಕ್ಷದ 46ಕ್ಕೂ ಅಧಿಕ ನಾಯಕರು ಆಗಮಿಸಿದ್ದಾರೆ. ನಾಳೆ ಲೋಕಸಭೆ ಚುನಾವಣೆ ಸಂಬಂಧ ಕಾರ್ಯತಂತ್ರ ರೂಪಿಸಲು ಮಹತ್ವದ ಸಭೆ ನಡೆಯಲಿದೆ. ಸಭೆಯಲ್ಲಿ ಪ್ರಮುಖವಾಗಿ ಆರು ಅಂಶಗಳ ಬಗ್ಗೆ ಚರ್ಚೆ ನಡೆಯಲಿದೆ.

ಸೋಮವಾರದಿಂದ 2 ದಿನಗಳ ಕಾಲ ನಡೆಯುತ್ತಿರುವ ಮಹತ್ವದ ಸಭೆಯಲ್ಲಿ 24 ಪಕ್ಷದ 46ಕ್ಕೂ ಹೆಚ್ಚು ನಾಯಕರು ಭಾಗಿಯಾಗಿದ್ದಾರೆ. ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತಮಿಳುನಾಡು ಸಿಎಂ ಸ್ಟಾಲಿನ್, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್, ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ಬಿಹಾರ ಸಿಎಂ ನಿತೀಶ್ ಕುಮಾರ್, ಬಿಹಾರ ಡಿಸಿಎಂ ತೇಜಸ್ವಿ ಯಾದವ್, ಲಾಲೂ ಪ್ರಸಾದ್ ಯಾದವ್, ಅಖಿಲೇಶ್ ಯಾದವ್, ಸೀತಾರಾಮ್ ಯಚೂರಿ, ಡಿ.ರಾಜ, ವೈಕೋ, ಮೆಹಬೂಬಾ ಮುಫ್ತಿ ಸೇರಿದಂತೆ 46ಕ್ಕೂ ಅಧಿಕ ನಾಯಕರು ಪಾಲ್ಗೊಂಡಿದ್ದಾರೆ.

ಆರು ಅಂಶಗಳ ಬಗ್ಗೆ ಚರ್ಚೆ : ನಾಳೆ ಬೆಳಗ್ಗೆ ಮೈತ್ರಿಕೂಟದ ನಾಯಕರ ಸಭೆ ನಡೆಯಲಿದ್ದ, 11 ಗಂಟೆಗೆ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾವಿಕ ಭಾಷಣ ಮಾಡಲಿದ್ದಾರೆ. ಬೆಳಗ್ಗೆ 11:10 ರಿಂದ ಸಭೆಯಲ್ಲಿ ಆರು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಸಭೆಯ 6 ಅಂಶಗಳ ಬಗ್ಗೆ ಸುದೀರ್ಘ ಮಾತುಕತೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಊಟದ ವಿರಾಮ ಇರಲಿದ್ದು, ಊಟದ ವಿರಾಮದ ಬಳಿಕ ಸಭೆ ಮುಂದುವರಿಯಲಿದೆ. ಮಧ್ಯಾಹ್ನ 2.30ಕ್ಕೆ ಉಪಸಮಿತಿಗಳ ರಚನೆ ಮಾಡಲಾಗುವುದು. ಮೈತ್ರಿಕೂಟದ ಕಾರ್ಯದರ್ಶಿ ಆಯ್ಕೆ ಮಾಡಲಾಗುವುದು.‌ 3 ಗಂಟೆಗೆ ಮೈತ್ರಿಕೂಟದ ಸಭೆ ಮುಕ್ತಾಯವಾಗಲಿದೆ.

  • ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳು ರೂಪಿಸಲು ಉಪಸಮಿತಿ ರಚನೆ ಬಗ್ಗೆ ಚರ್ಚೆ ನಡೆಯಲಿದ್ದು, ಇದು ಮುಂದಿನ ಲೋಕಸಭಾ ಚುನಾವಣೆಗೆ ವಿಪಕ್ಷ ಮೈತ್ರಿಕೂಟಗಳ ಸೇತುವೆಯಾಗಿದೆ. ಮೈತ್ರಿಕೂಟದ ಬೆಳವಣಿಗೆಗಳ ಬಗ್ಗೆ ಪರಸ್ಪರ ಸಂವಹನ ನಡೆಸುವ ಕೆಲಸ ಮಾಡಲಿದೆ.
  • ಮೈತ್ರಿಕೂಟದ ಜಂಟಿ ಕಾರ್ಯಕ್ರಮಗಳ ಆಯೋಜನೆ ಉಪಸಮಿತಿ ರಚನೆ ಬಗ್ಗೆ ಚರ್ಚೆ ನಡೆಯಲಿದೆ. ದೇಶಾದ್ಯಂತ ಎಲ್ಲಿ ಬೃಹತ್ ರ್ಯಾಲಿಗಳ ಆಯೋಜನೆ, ಸಮಾವೇಶಗಳು ಎಲ್ಲಿ ಮಾಡಬೇಕು, ಕೇಂದ್ರ ಸರ್ಕಾರದ ವಿರುದ್ಧ ಯಾವ ರೀತಿ ಜನಾಂದೋಲನ ಮಾಡಬೇಕು, ಈ ಎಲ್ಲ ಕಾರ್ಯಕ್ರಮಗಳನ್ನು ರೂಪಿಸುವ ಜವಬ್ದಾರಿ ಈ ಸಮಿತಿ ನಿರ್ವಹಣೆ ಮಾಡಲಿದೆ.
  • ವಿಪಕ್ಷಗಳ ಒಕ್ಕೂಟಗಳ ನಡುವೆ ಸೀಟು ಹಂಚಿಕೆ ಬಗ್ಗೆ ಗಂಭೀರ ಮಾತುಕತೆ ನಡೆಯಲಿದೆ. ಯಾವ ರಾಜ್ಯದಲ್ಲಿ ಯಾವ ಪಕ್ಷ ಪ್ರಬಲವಾಗಿ ಇದೆಯೋ ಆ ಪಕ್ಷಕ್ಕೆ ಹೆಚ್ಚಿನ ಮನ್ನಣೆ ಸಿಗಬೇಕು. ಈ ಸಂದರ್ಭದಲ್ಲಿ ತಮ್ಮ ತಮ್ಮ ರಾಜ್ಯಗಳಲ್ಲಿನ ರಾಜಕೀಯ ಸ್ಥಿತಿಗತಿಗಳ ಬಗ್ಗೆ ನಾಯಕರು ವಿವರಣೆ ನೀಡಲಿದ್ದಾರೆ.
  • ಇವಿಎಂ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಗುವುದು. ಚರ್ಚೆಯ ಬಳಿಕ ಚುನಾವಣಾ ಆಯೋಗಕ್ಕೆ ಒಂದಷ್ಟು ಸಲಹೆಗಳನ್ನು ನೀಡಲಾಗುವುದು.
  • ವಿಪಕ್ಷಗಳ ಮೈತ್ರಿಕೂಟಕ್ಕೆ ಇಡಬೇಕಾದ ಹೆಸರಿನ ಬಗ್ಗೆ ಮಾತುಕತೆ ನಡೆಯಲಿದೆ. ಎಲ್ಲರಿಗೂ ಒಮ್ಮತ ಮೂಡುವ ಹೆಸರನ್ನು ಸಭೆಯಲ್ಲಿ ಚರ್ಚೆ ನಡೆಸಲಾಗುವುದು.
  • ಬಳಿಕ ಮೈತ್ರಿಕೂಟ ಮುನ್ನೆಡಸಲು ಸಂಚಾಲಕರನ್ನು ನೇಮಕ‌ ಮಾಡಲಾಗುವುದು.

ಈ ಆರು ಪ್ರಮುಖ ವಿಚಾರಗಳು ಚರ್ಚೆ ಆಗಲಿವೆ ಎಂದು ಮೂಲಗಳ ಮಾಹಿತಿ ನೀಡಿದೆ. ನಾಳೆ ಸಂಜೆ 4 ಗಂಟೆಗೆ ಮೈತ್ರಿಕೂಟದ ಪ್ರಮುಖ ನಾಯಕರಿಂದ ಸುದ್ದಿಗೋಷ್ಠಿ ನಡೆಯಲಿದೆ. ಸುದ್ದಿಗೋಷ್ಟಿಯಲ್ಲಿ ಮೈತ್ರಿಕೂಟದ ಸಭೆಯ ನಿರ್ಣಯಗಳ ಬಗ್ಗೆ ಘೋಷಣೆ ಮಾಡಲಿದ್ದಾರೆ.

ಇದನ್ನೂ ಓದಿ : ಮಹಾ ಘಟಬಂಧನ್ ನಾಯಕರ ಔತಣಕೂಟ ಆರಂಭ.. 40ಕ್ಕೂ ಹೆಚ್ಚು ನಾಯಕರು ಭಾಗಿ

Last Updated : Jul 17, 2023, 9:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.