ಬೆಂಗಳೂರು : ವಿಧಾನಪರಿಷತ್ನ 3ನೇ ದಿನದ ಕಲಾಪ ಆರಂಭಗೊಳ್ಳುತ್ತಿದ್ದಂತೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಅಭಿವೃದ್ಧಿ ವಿಚಾರದ ಚರ್ಚೆಗೆ ನಿಯಮ 59ರ ಅಡಿಯಲ್ಲಿ ಅವಕಾಶ ನೀಡುವಂತೆ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ನಿಳುವಳಿ ಸೂಚನೆ ಮಂಡಿಸಿದರು.
ಪ್ರಶ್ನೋತ್ತರ ಕಲಾಪಕ್ಕೂ ಮುನ್ನ ಎಸ್ ಆರ್ ಪಾಟೀಲ್ ನಿಳುವಳಿ ಸೂಚನೆ ಮಂಡಿಸಿದರು. ಶಿಕ್ಷಣ, ಸಾಮಾಜಿಕ, ಆರ್ಥಿಕವಾಗಿ ಕಲ್ಯಾಣ ಕರ್ನಾಟಕ ಹಿಂದುಳಿದಿದೆ. ಇದು ಬಹಳ ಗಂಭೀರ ಸಮಸ್ಯೆ. ಆರ್ಟಿಕಲ್ 371ಜೆ ಜಾರಿ ಬಗ್ಗೆ ಬೇರೆ ವಿಚಾರಗಳನ್ನ ಬದಿಗಿಟ್ಟು ಚರ್ಚೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.
ಪ್ರತಿಪಕ್ಷ ನಾಯಕರು ಮಂಡಿಸಿದ ನಿಳುವಳಿ ಸೂಚನೆಯನ್ನು ಪರಿಗಣಿಸಿದ ಸಭಾಪತಿಗಳು ನಿಯಮ 59ರಡಿ ಬದಲು ನಿಯಮ 69ರಡಿ ಚರ್ಚೆಗೆ ಅವಕಾಶ ಮಾಡಿ ಕೊಡುತ್ತೇವೆ. ಮಧ್ಯಾಹ್ನ ಸಮಯ ನಿಗದಿಪಡಿಸಲಾಗುತ್ತದೆ ಎಂದು ರೂಲಿಂಗ್ ನೀಡಿದರು.
ಆನಂದ್ ಸಿಂಗ್ ಹಾಜರ್ : ವಿಧಾನಪರಿಷತ್ ಕಲಾಪದ ಮೊದಲೆರಡು ದಿನ ಪರಿಷತ್ನತ್ತ ತಲೆ ಹಾಕದ ಸಚಿವ ಆನಂದ್ ಸಿಂಗ್ 3ನೇ ದಿನವಾದ ಇಂದು ಸದನದಲ್ಲಿ ಕಾಣಿಸಿದರು. ಕೊನೆಯ ಸಾಲಿನಲ್ಲಿ ಕುಳಿತು ಕಲಾಪದಲ್ಲಿ ಭಾಗಿಯಾದರು.
ಓದಿ: ತಾಳಗುಪ್ಪ-ಹೊನ್ನಾವರ ಮಾರ್ಗ ಆರಂಭ ; ಆದ್ಯತೆ ಮೇಲೆ ರೈಲ್ವೆ ಯೋಜನೆಗಳ ಪರಿಗಣನೆ - ಸಚಿವ ವಿ ಸೋಮಣ್ಣ