ETV Bharat / state

ಚಿಕ್ಕಪೇಟೆ ಸ್ವಯಂಪ್ರೇರಿತ ಸೀಲ್ ​ಡೌನ್​ಗೆ ಕೆಲವೇ ಅಸೋಸಿಯೇಷನ್​ಗಳಿಂದ ಬೆಂಬಲ - Only a few association support

ಚಿಕ್ಕಪೇಟೆ ವಾರ್ಡ್ ಕಮಿಟಿ ನಿನ್ನೆಯಷ್ಟೇ ಸಭೆ ನಡೆಸಿ ಸೋಂಕು ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆ ಸ್ವಯಂಪ್ರೇರಿತವಾಗಿ ಒಂದು ವಾರ ಸಂಪೂರ್ಣವಾಗಿ ಬಂದ್ ಮಾಡಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆ ಹತ್ತು ಅಸೋಸಿಯೇಷನ್​ಗಳು ಬೆಂಬಲ ನೀಡಿ ಇಂದು ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿದೆ.

chickpet
ಚಿಕ್ಕಪೇಟೆ
author img

By

Published : Jun 22, 2020, 3:43 PM IST

ಬೆಂಗಳೂರು: ಚಿಕ್ಕಪೇಟೆ ವಾರ್ಡ್ ಕಮಿಟಿ ನಿನ್ನೆಯಷ್ಟೇ ಸಭೆ ನಡೆಸಿ ಸೋಂಕು ಹೆಚ್ಚಾಗಿ ಹರಡುತ್ತಿರುವ ಕಾರಣ ಸ್ವಯಂಪ್ರೇರಿತವಾಗಿ ಒಂದು ವಾರ ಸಂಪೂರ್ಣವಾಗಿ ಬಂದ್ ಮಾಡಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆ ಹತ್ತು ಅಸೋಸಿಯೇಷನ್​ಗಳು ಬೆಂಬಲ ನೀಡಿ ಇಂದು ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿವೆ. ಆದರೆ ಸ್ಟೀಲ್, ಗಾರ್ಮೆಂಟ್ಸ್ ಸೇರಿದಂತೆ ಕೆಲ ಅಂಗಡಿ ಮಳಿಗೆಗಳು ಬಂದ್ ಮಾಡಿಲ್ಲ ಎಂದು ವಾರ್ಡ್ ಕಾರ್ಪೋರೇಟರ್ ಪತಿ ಶಿವಕುಮಾರ್ ತಿಳಿಸಿದ್ದಾರೆ.

ಸೀಲ್ ಡೌನ್​ಗೆ ಬೆಂಬಲ ಸೂಚಿಸಿರುವ ಅಸೋಸಿಯೇಷನ್​ಗಳು

ಜ್ಯುವೆಲ್ಲರಿ ಸಂಘಟನೆ, ಎಲೆಕ್ಟ್ರಿಕಲ್ ಮರ್ಚೆಂಟ್ ಅಸೋಸಿಯೇಷನ್, ಪೇಪರ್ ಸಂಘಟನೆ, ಸಿಲ್ಕ್ ಕ್ಲಾತ್ ಮರ್ಚೆಂಟ್ ಸಂಘಟನೆ, ವಿಶ್ವಕರ್ಮ ಸಮಿತಿ, ಸ್ವರ್ಣಕಾರ್ ಸಂಗ್ ಡೈಮಂಡ್ ಆಂಡ್ ಜೆಮ್ಸ್ ಅಸೋಸಿಯೇಷನ್, ಹಾರ್ಡ್​ವೇರ್ ಅಸೋಸಿಯೇಷನ್ -ಕಿಲಾರಿ ರಸ್ತೆ ಸೇರಿದಂತೆ ಹತ್ತು ಅಸೋಸಿಯೇಷನ್​ಗಳು ಬಾಗಿಲು ಮುಚ್ಚಲು ಒಪ್ಪಿವೆ.

ಸ್ವಯಂಪ್ರೇರಿತ ಸೀಲ್​ ಡೌನ್​ಗೆ ಕೆಲವೇ ಅಸೋಸಿಯೇಷನ್​ಗಳಿಂದ ಬೆಂಬಲ

ಚಿಕ್ಕಪೇಟೆಯಲ್ಲಿ ಅತಿ ಹೆಚ್ಚು ಜನದಟ್ಟಣೆ ಇದೆ. ವ್ಯಾಪಾರ-ವಹಿವಾಟುಗಳಿಗೆ ಪಾರ್ಸೆಲ್​ಗಳನ್ನು ತಂದು ಅಂಗಡಿಗಳಿಗೆ ಕೊಡಲು ತಮಿಳುನಾಡು ಸೇರಿದಂತೆ ಇತರೆ ರಾಜ್ಯದಿಂದ ಬಂದವರು ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ ಎಂದು ವಾರ್ಡ್ ಕಾರ್ಪೋರೇಟರ್ ಪತಿ ಶಿವಕುಮಾರ್ ತಿಳಿಸಿದ್ದಾರೆ.

ಗಾರ್ಮೆಂಟ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ದಿಲೀಪ್ ಜೈನ್ ಮಾತನಾಡಿ, ನಾವು ನಮ್ಮ ಸಂಘಟನೆಯ ಸದಸ್ಯರ ಅಭಿಪ್ರಾಯ ಕೇಳಿದಾಗ ಒಪ್ಪಿಲ್ಲ. ಒಂದು ವಾರದ ಕಂಪ್ಲೀಟ್ ಲಾಕ್​​ಡೌನ್​ಗೆ ಎಲ್ಲರ ಒಪ್ಪಿಗೆ ಇಲ್ಲ. ಈಗ ಮದುವೆ ಸೀಸನ್ ಇದೆ. ಮೊದಲೇ ಲಾಕ್​​ಡೌನ್ ಇದ್ದು ನಷ್ಟವಾಗಿದೆ. ಸರ್ಕಾರದ ನಿಯಮ ಪಾಲಿಸಲು ಸಿದ್ಧ. ದೈಹಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಮಾಡಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮಳಿಗೆಗಳನ್ನು ತೆರೆದಿಡಲು ತೀರ್ಮಾನಿಸಲಾಗಿದೆ ಎಂದರು. ಅಲ್ಲದೆ ಸರ್ಕಾರದ ತೀರ್ಮಾನಕ್ಕೆ ಬದ್ಧ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.