ETV Bharat / state

ಕೊರೊನಾ ಸೋಂಕು ಪತ್ತೆಗೆ 30 ಜಿಲ್ಲೆಗಳಲ್ಲಿ ಇರೋದು ಕೇವಲ 14 ಲ್ಯಾಬ್​​​ಗಳು..‌! - ಕೊರೊನಾ ಸೋಂಕು ಪರೀಕ್ಷಾ ಕೇಂದ್ರಗಳು

ರಾಜ್ಯದಲ್ಲೀಗ 19 ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಆದರೆ ಸೋಂಕು ಪತ್ತೆ ಕೇಂದ್ರಗಳಿರೋದು ಕೇವಲ 14. ದಿನವೊಂದಕ್ಕೆ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದವರ ಸಂಖ್ಯೆ ಸಾವಿರ ಗಡಿ ದಾಟುತ್ತಿದೆ. ಇವರೆಲ್ಲರನ್ನೂ ಸೋಂಕು ಪರೀಕ್ಷೆಗೆ ಒಳಪಡಿಸಲು 14 ಲ್ಯಾಬ್​ಗಳು ಸಾಕೇ ಎಂಬ ಪ್ರಶ್ನೆಯೂ ಕಾಡುತ್ತಿದೆ.

ಕೊರೊನಾ
corona
author img

By

Published : Apr 12, 2020, 8:52 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇನ್ನೂರರ ಗಡಿಯನ್ನು ಕೊರೊನಾ ಸೋಂಕಿತರ ಸಂಖ್ಯೆ ದಾಟಿದೆ. ಇಲ್ಲಿ ಕೋವಿಡ್​​-19 ಇದೆಯೋ..? ಇಲ್ಲವೋ..? ಎಂಬುದನ್ನು ಪತ್ತೆಹಚ್ಚಲು 30 ಜಿಲ್ಲೆಗಳಿಗೆ ಕೇವಲ 14 ಲ್ಯಾಬ್​ಗಳಿವೆ.

ಈ ಮೊದಲು ಕೊರೊನಾ ಸೋಂಕು ಪತ್ತೆಹಚ್ಚಲು ರಕ್ತದ ಮಾದರಿ ಪರೀಕ್ಷೆಯನ್ನು ಪುಣೆಗೆ ಕಳುಹಿಸಲಾಗುತ್ತಿತ್ತು. ಆದರೆ ಅಲ್ಲಿಂದ ವರದಿ ಬರೋಕೆ ತಡವಾಗುತ್ತಿತ್ತು. ಸಾಮಾನ್ಯವಾಗಿ ಶಂಕಿತ ವ್ಯಕ್ತಿಯಲ್ಲಿ ಸೋಂಕು ಇದೆಯೋ..? ಇಲ್ಲವೊ..? ಎಂಬುದನ್ನು ತಿಳಿಯಬೇಕೆಂದರೆ ಕನಿಷ್ಠ ಮೂರ್ನಾಲ್ಕು ದಿನಗಳ ಅವಶ್ಯಕತೆ ಇತ್ತು. ಕೊರೊನಾ ಸೋಂಕು ಹೆಚ್ಚಾದಂತೆ ಮೊದಲು ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಯಲ್ಲಿ, ನಂತರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೋಂಕು ಪತ್ತೆ ಕೇಂದ್ರ ಸ್ಥಾಪನೆ ಮಾಡಲಾಯಿತು.
ಇದಾದ ನಂತರ ಹಲವು ಜಿಲ್ಲೆಗಳಲ್ಲಿ ಸೋಂಕು ಪತ್ತೆ ಕೇಂದ್ರಗಳನ್ನು ಅನುಷ್ಠಾನಗೊಳಿಸಲಾಗಿದೆ. ರಾಜ್ಯದಲ್ಲೀಗ 19 ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಆದರೆ ಸೋಂಕು ಪತ್ತೆ ಕೇಂದ್ರಗಳಿರೋದು ಕೇವಲ 14. ದಿನವೊಂದಕ್ಕೆ ಸೋಂಕಿತನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದವರ ಸಂಖ್ಯೆ ಸಾವಿರ ಗಡಿ ದಾಟುತ್ತಿದೆ. ಇವರೆಲ್ಲರನ್ನೂ ಸೋಂಕು ಪರೀಕ್ಷೆಗೆ ಒಳಪಡಿಸಲು 14 ಲ್ಯಾಬ್​ಗಳು ಸಾಕೇ ಎಂಬ ಪ್ರಶ್ನೆಯೂ ಕಾಡುತ್ತಿದೆ.

ಅಂದಹಾಗೆ, ಒಂದು ದಿನದಲ್ಲಿ ಒಂದು ಲ್ಯಾಬ್​ನಲ್ಲಿ 88 ಜನರ ರಕ್ತ ಪರೀಕ್ಷೆಯನ್ನು ಮಾಡಬಹುದಾಗಿದೆ. ಆದರೆ ಸದ್ಯಕ್ಕೆ ಲ್ಯಾಬ್​ನಲ್ಲಿ ಸೋಂಕು ಪರೀಕ್ಷೆ ಮಾಡುತ್ತಿರುವುದು ಕೇವಲ 30ರಿಂದ 40 ಸ್ಯಾಂಪಲ್ಸ್ ಮಾತ್ರ. ಸೋಂಕಿತರ ಜೊತೆಗೆ ಶಂಕಿತರ ಸಂಖ್ಯೆಯೂ ಕೂಡಾ ದಿನೇ ದಿನೇ ಹೆಚ್ಚಾಗುತ್ತಿದ್ದು ಆತಂಕ ಮೂಡಿಸಿದೆ. ಮುಂದಿನ ದಿನಗಳಲ್ಲಿ ಲ್ಯಾಬ್​ಗಳ ಸಂಖ್ಯೆ ಹೆಚ್ಚಿಸಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.
ಎಲ್ಲೆಲ್ಲಿವೆ ಸೋಂಕು ಪತ್ತೆ ಮಾಡುವ ಲ್ಯಾಬ್​ಗಳು..?

1) ಹಾಸನ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್‌ ಸೈನ್ಸ್- ಹಾಸನ
2) ಮೈಸೂರು ಮೆಡಿಕಲ್ ಕಾಲೇಜ್ & ರಿಸರ್ಚ್ ಇನ್ಸ್ಟಿಟ್ಯೂಟ್- ಮೈಸೂರು
3) ಶಿವಮೊಗ್ಗ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ -ಶಿವಮೊಗ್ಗ
4) ಕಮಾಂಡ್ ಹಾಸ್ಪಿಟಲ್ (ಏರ್ ಫೋರ್ಸ್)- ಬೆಂಗಳೂರು
5) ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ
6) ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ- ಬೆಂಗಳೂರು
7) ಗುಲ್ಬರ್ಗ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ -ಕಲಬುರಗಿ
8) ವಿಜಯನಗರ ಇನ್ಸ್ಟಿಟ್ಯೂಟ್ ಮೆಡಿಕಲ್ ಸೈನ್ಸ್ - ಬಳ್ಳಾರಿ
9)ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸ್- ಬೆಂಗಳೂರು
10) ವೆನ್ಲಾಕ್ ಡಿಸ್ಟ್ರಿಕ್ಟ್​​​ ಹಾಸ್ಪಿಟಲ್ - ಮಂಗಳೂರು
11) ಬೆಂಗಳೂರಿನ ಶಿವಾಜಿನಗರದ ನ್ಯೂಬರ್ಗ್ ಆನಂದ್ ಲ್ಯಾಬ್
12) ಬೆಂಗಳೂರಿನ ಬಸವನಗುಡಿಯ ಕ್ಯಾನ್ಸೈಟ್ ಟೆಕ್ನಾಲಜೀಸ್
13) ಸಾಕ್ರ ವರ್ಲ್ಡ್ ಆಸ್ಪತ್ರೆ ಲ್ಯಾಬ್ ಸರ್ವಿಸಸ್
14) ವೈಟ್ ಫೀಲ್ಡ್ ಬಳಿಯ ಸೆಂಟ್ರಲ್ ಡಯಾಗ್ನೋಸ್ಟಿಕ್ ಲ್ಯಾಬ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.