ETV Bharat / state

ಸೈಬರ್ ಕ್ರೈಂ ಪತ್ತೆ ಹಚ್ಚುವಲ್ಲಿ ಹಿಂದೆ ಬಿದ್ದ ಖಾಕಿ: ಶೇ.10 ರಷ್ಟು ಮಾತ್ರ ಕೇಸ್ ಬೇಧಿಸಿರುವ ಪೊಲೀಸರು

ಬೆಂಗಳೂರು ನಗರದಲ್ಲಿ ಕಳೆದ 11 ತಿಂಗಳಲ್ಲಿ ಒಟ್ಟು 8951 ಸೈಬರ್​ ಪ್ರಕರಣಗಳು ದಾಖಲಾಗಿವೆ. ಆದರೆ ಇವುಗಳಲ್ಲಿ 929 ಪ್ರಕರಣಗಳನ್ನು ಬೇಧಿಸಲಾಗಿದೆ. ಈ ಮೂಲಕ ಸೈಬರ್​ ಪ್ರಕರಣ ತನಿಖೆ ನಡೆಸುವಲ್ಲಿ ಪೊಲೀಸ್​ ಇಲಾಖೆ ಹಿಂದೆ ಬಿದ್ದಿದೆ ಎಂದು ಅಂಕಿ ಅಂಶಗಳ ಮೂಲಕ ತಿಳಿಯುತ್ತದೆ.

only-10-percent-of-cybercrime-case-found-by-bengaluru-police
ಸೈಬರ್ ಕ್ರೈಂ ಪತ್ತೆ ಹಚ್ಚುವಲ್ಲಿ ಹಿಂದೆ ಬಿದ್ದ ಖಾಕಿ: ಶೇ.10 ರಷ್ಟು ಮಾತ್ರ ಕೇಸ್ ಬೇಧಿಸಿರುವ ಪೊಲೀಸರು
author img

By

Published : Dec 19, 2022, 6:28 PM IST

ಬೆಂಗಳೂರು : ರಾಜಧಾನಿಯಲ್ಲಿ ಶರವೇಗದಲ್ಲಿ ದಾಖಲಾಗುತ್ತಿರುವ ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ದಿನೇ‌ ದಿನೇ ಅಪರಾಧಗಳು ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದಾಖಲಾಗಿರುವ ಪ್ರಕರಣಗಳ ಸಂಖ್ಯೆ ಅಧಿಕವಾಗಿವೆ.

ಕಳೆದ 11 ತಿಂಗಳಲ್ಲಿ ನಗರದ 9 ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ ಒಟ್ಟು 8951 ಪ್ರಕರಣಗಳು ದಾಖಲಾಗಿವೆ‌. 2021ರಲ್ಲಿ 6423 ಹಾಗೂ 2020ರಲ್ಲಿ 8892 ಕೇಸ್ ದಾಖಲಾಗಿತ್ತು. ದಾಖಲಾದ ಕೇಸ್ ಗಳಿಗೆ ಪತ್ತೆ ಮಾಡಲಾದ‌‌ ಪ್ರಕರಣಗಳಿಗೂ ಅಜಾಗಜಾಂತರ ವ್ಯತ್ಯಾಸವಿದೆ. ಸೈಬರ್ ಕ್ರೈಂ ಪ್ರಕರಣ ಪತ್ತೆ ಹಚ್ಚುವಲ್ಲಿ ನಗರ ಪೊಲೀಸರು ಹಿಂದೆ ಬಿದ್ದಿದ್ದಾರೆ.

ಸೈಬರ್​ ಪ್ರಕರಣ ತನಿಖೆ ನಡೆಸುವಲ್ಲಿ ಹಿಂದೆ ಬಿದ್ದ ಪೊಲೀಸರು : ಕಳೆದ ಎರಡು ವರ್ಷಗಳ ಹಿಂದೆ ನಗರದಲ್ಲಿ ಒಂದು ಸೈಬರ್ ಕ್ರೈಂ ಪೊಲೀಸ್ ಠಾಣೆವಿದ್ದಾಗ ಸಾವಿರಾರು ಕೇಸ್ ಗಳು ದಾಖಲಾಗುತಿತ್ತು‌.‌‌ ತನಿಖೆ ನಡೆಸುವುದಾಗಲಿ ದೂರು ಸ್ವೀಕರಿಸುವುದಕ್ಕೂ ಪೊಲೀಸ್ ಸಿಬ್ಬಂದಿಗೆ ಸಾಧ್ಯವಾಗುತ್ತಿರಲಿಲ್ಲ‌‌.‌ ಎಲ್ಲೋ ಕುಳಿತು ಕೈಂ ಎಸಗುವ ಸೈಬರ್ ಖದೀಮರ ಪತ್ತೆ ಮಾಡಲು ಸೂಕ್ತವಾದ ತಾಂತ್ರಿಕ ಉಪಕರಣವಿರಲಿಲ್ಲ. ಇದನ್ನು ಮನಗೊಂಡ ರಾಜ್ಯ ಸರ್ಕಾರ ವಿಭಾಗಕ್ಕೊಂದು ಎಂಬಂತೆ ಸೈಬರ್ ಕ್ರೈಂ ಪೊಲೀಸ್ ಠಾಣೆಗಳನ್ನು ನಿರ್ಮಿಸಿ ಅಗತ್ಯ ಸಿಬ್ಬಂದಿ ಒದಗಿಸಲಾಯಿತು. ಆದರೂ ಸೈಬರ್ ಖದೀಮರನ್ನು ಹಿಡಿಯುವಲ್ಲಿ ಸಾಧ್ಯವಾಗುತ್ತಿಲ್ಲ‌ ಎಂಬುದನ್ನು ಪೊಲೀಸ್ ಇಲಾಖೆಯ ಅಂಕಿ-ಅಂಶಗಳೇ ಸಾರಿ ಹೇಳುತ್ತಿವೆ.

only-10-percent-of-cybercrime-case-found-by-bengaluru-police
ಸೈಬರ್​​ ಪ್ರಕರಣದ ಕುರಿತ ಅಂಕಿ ಅಂಶಗಳು

ಶೇ. 10ರಷ್ಟು ಪ್ರಕರಣ ಮಾತ್ರ ಪತ್ತೆ : ಈ ವರ್ಷ ದಾಖಲಾದ 8892 ಕೇಸ್ ಗಳಲ್ಲಿ 929 ಪ್ರಕರಣಗಳು ಮಾತ್ರ ಬೇಧಿಸಲಾಗಿದೆ. ಶೇ.10ರಷ್ಟು ಪ್ರಕರಣಗಳನ್ನು ಮಾತ್ರ ಪತ್ತೆ ಮಾಡಲಾಗಿದೆ. ದಿನಕ್ಕೆ ಸರಾಸರಿ 27 ಕೇಸ್ ಗಳಲ್ಲಿ ದಾಖಲಾಗುತ್ತಿದ್ದು, ಇದರಲ್ಲಿ ಕೇವಲ ಮೂರು ಪ್ರಕರಣಗಳಿಗೆ ಮುಕ್ತಿ ಕೊಡಿಸಲಾಗುತ್ತಿದೆ‌‌‌. ಇದೆ ರೀತಿ 2021ರಲ್ಲಿ ದಾಖಲಾದ 6423 ಕೇಸ್ ಗಳಲ್ಲಿ 2062 ಪ್ರಕರಣಗಳನ್ನು ಮಾತ್ರ ಪತ್ತೆ ಮಾಡಲಾಗಿದೆ.

ನಗರದಲ್ಲಿ ಒಟ್ಟು 8892 ಪ್ರಕರಣ ದಾಖಲು : ಇನ್ನು ತರಹೇವಾರಿ ರೀತಿಯಲ್ಲಿ ವಂಚನೆಯಲ್ಲಿ ತೊಡಗಿರುವ ಹೈಟೆಕ್ ಸೈಬರ್ ಖದೀಮರು ವಿವಿಧ ರೀತಿಯಲ್ಲಿ ಜನರನ್ನು ವಂಚಿಸುತ್ತಿದ್ದಾರೆ. ಡೆಬಿಟ್ -ಕಾರ್ಡ್ ಅಪ್ ಡೇಟ್ ಮಾಡಬೇಕು‌. ಆನ್ ಲೈನ್ ಮನಿ ಟ್ರಾನ್ಸ್ ಫರ್ ಹೆಸರಿನಲ್ಲಿ ಈ ವರ್ಷ ಸುಮಾರು 3838 ಪ್ರಕರಣ ದಾಖಲಾಗಿವೆ. ಕಳೆದ ವರ್ಷ 2886 ಕೇಸ್ ದಾಖಲಾಗಿತ್ತು‌‌. ಅಲ್ಲದೆ ನಗದು ಬಹುಮಾನ, ಲಾಟರಿ ಹಾಗೂ ಲೋನ್‌ ಒಎಲ್ ಎಕ್ಸ್ ಮೋಸ ಸೇರಿದಂತೆ ಒಟ್ಟು 1753 ಪ್ರಕರಣ ದಾಖಲಾಗಿವೆ. ಕೆಲಸ ಕೊಡಿಸುವುದಾಗಿ ನಂಬಿಸಿ ಮೋಸ (748) ಸಾಮಾಜಿಕ ಜಾಲತಾಣ ದುರ್ಬಳಕೆ (557) ಕಾರ್ಡ್ ಸ್ಕಿಮಿಂಗ್, ಕ್ರಿಪ್ಕೋ ಕರೆನ್ಸಿ,‌ ಮಾಟ್ರಿಮೋನಿ ವಂಚನೆ ಸೇರಿದಂತೆ‌ ಒಟ್ಟು 8892 ಕೇಸ್ ದಾಖಲಾಗಿವೆ ಎಂದು ತಿಳಿದುಬಂದಿದೆ.

ಯಾವ ವಿಭಾಗದಲ್ಲಿ ಸೈಬರ್ ಕ್ರೈಂ ಹೆಚ್ಚು ಗೊತ್ತಾ ? : ನಗರದಲ್ಲಿ ವಿವಿಧ ಭಾಗಗಳಿಗೆ ಹೋಲಿಸಿದರೆ ಪಶ್ಚಿಮ ವಿಭಾಗದ ಪೊಲೀಸ್ ಠಾಣೆಯಲ್ಲೇ ಅತಿ ಹೆಚ್ಚು ಅಂದರೆ 1297 ಕೇಸ್ ದಾಖಲಾಗಿವೆ. ದಕ್ಷಿಣ ವಿಭಾಗ 1237, ಉತ್ತರ ವಿಭಾಗದಲ್ಲಿ 1160 ಪ್ರಕರಣ ದಾಖಲಾಗಿವೆ. ಕೇಂದ್ರ ವಿಭಾಗದಲ್ಲಿ ಅತಿ ಕಡಿಮೆ‌(888)‌ಕೇಸ್ ದಾಖಲಾಗಿವೆ.

ಇದನ್ನೂ ಓದಿ : 102 ಬಾರಿ ಓಟಿಪಿ ಪಡೆದು ₹10 ಲಕ್ಷ ಎಗರಿಸಿದ್ದರು.. SSLC ಫೇಲಾದ್ರೂ ವಂಚಿಸೋದರಲ್ಲಿ ಫಸ್ಟ್‌ಕ್ಲಾಸ್‌..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.