ETV Bharat / state

ಆನ್​​ಲೈನ್ ಶಿಕ್ಷಣಕ್ಕೆ ಇರುವ ತೊಡಕುಗಳೇನು... ತಜ್ಞರೇನಂತಾರೆ?

author img

By

Published : Jun 10, 2020, 12:02 PM IST

ಆನ್​​ಲೈನ್​ ಶಿಕ್ಷಣದ ಸಾಧಕ-ಬಾಧಕಗಳು, ಆನ್​​ಲೈನ್ ಶಿಕ್ಷಣ ಯಾರಿಗೆ ಬೇಕು? ಯಾವ ರೀತಿಯಲ್ಲಿ ಒದಗಿಸಬೇಕು? ಎಲ್ಲರಿಗೂ ಆನ್​ಶಿಕ್ಷಣ ಪೂರೈಸಲು ಸಾಧ್ಯವೇ ಎಂಬುದರ ಕುರಿತು ಪ್ರತಿಷ್ಠಿತ ಕಾಲೆಂಜೊಂದರ ಪ್ರಾಂಶುಪಾಲರು ಹಾಗೂ ಆರ್​​ಟಿ‌ಇ ಸ್ಟೂಡೆಂಟ್ಸ್ ಆ್ಯಂಡ್ ಪೇರೆಂಟ್ಸ್ ಅಸೋಸಿಯೇಷನ್​​ನ ಪ್ರಧಾನ ಕಾರ್ಯದರ್ಶಿಗಳು ತಮ್ಮ ಅಭಿಪ್ರಾಯಗಳನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.

online education issue
ಕೊರೊನಾ ಮತ್ತು ಆನ್​​ಲೈನ್ ಶಿಕ್ಷಣ

ಬೆಂಗಳೂರು: ವಿಶ್ವವನ್ನೇ ನಡುಗಿಸುತ್ತಿರುವ ಕೊರೊನಾ ವೈರಸ್ ಅಟ್ಟಹಾಸ ಕಡಿಮೆ ಆಗುವ ಲಕ್ಷಣಗಳು ಕಾಣ್ತಿಲ್ಲ.‌ ಕೊರೊನಾ ಪ್ರತಿಯೊಬ್ಬರಿಗೂ ಒಂದೊಂದು ರೀತಿ ಪಾಠವನ್ನ‌ ಕಲಿಸುತ್ತಾ ಸಾಗಿದೆ.‌ ಇದರ ನಡುವೆ ಕೊರೊನಾ ವೈರಸ್ ಶಿಕ್ಷಣ ಕ್ಷೇತ್ರದಲ್ಲೇ ಹೆಚ್ಚು ಸದ್ದು ಮಾಡುತ್ತಿದೆ. ಅದು ಹೇಗಪ್ಪಾ ಅಂದ್ರೆ ಕಣ್ಣಿಗೆ ಕಾಣದ ವೈರಸ್​​ನಿಂದ ಶಾಲೆ ಆರಂಭಿಸಬೇಕಾ ಬೇಡ್ವಾ ಎಂಬ ವಿಚಾರದಿಂದ ಹಿಡಿದು, ಆನ್​​ಲೈನ್ ಶಿಕ್ಷಣ ಬೇಕಿದ್ಯಾ?? ಆನ್​​ಲೈನ್ ಶಿಕ್ಷಣ‌ ಎಲ್ಲರಿಗೂ ಕೈಗೆಟುಕುವಂತಿದೆಯಾ ಎಂಬ ಪರ- ವಿರೋಧ ಚರ್ಚೆಗಳೇ ಸೃಷ್ಟಿಯಾಗಿವೆ.

ಇದರ ನಡುವೆ ಕೊರೊನಾ ವೈರಸ್​​ನಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರಲು ಪ್ರೇರಣೆಯು ಆಗಬಹುದು ಅಂತಾರೆ ತಜ್ಞರು. ಆನ್​​ಲೈನ್ ಶಿಕ್ಷಣ ವರವೂ ಆಗಬಹುದು, ಮಾರಕವೂ ಆಗಬಲ್ಲದು. ಇದಕ್ಕೂ ಮೊದಲು ಆನ್​​ಲೈನ್ ಶಿಕ್ಷಣ ಯಾರಿಗೆ ಬೇಕು? ಯಾವ ರೀತಿಯಲ್ಲಿ ಒದಗಿಸಬೇಕು? ಆನ್​​ಲೈನ್ ಶಿಕ್ಷಣಕ್ಕೆ ಸಜ್ಜಾಗದಯೇ ನಾವು ಎಡವಿದ್ದೇವೆ ಅಂತಾರೆ, ಬಿಎಂಎಸ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಬಿ. ವಿ. ರವಿಶಂಕರ್.

ಆದರೆ ಕೊರೊನಾ ವೈರಸ್ ಶೈಕ್ಷಣಿಕ ವರ್ಷಕ್ಕೆ ತೊಡಕು ಉಂಟಾಗಬಹುದು ಎಂಬ ಸುಳಿವು ಹಿನ್ನೆಲೆ ಯೋಜನೆ ರೂಪಿಸಿಕೊಂಡಿದ್ದೇವೆ. ಕೊರೊನಾ ಕಂಟ್ರೋಲ್ ಅಂತೂ ಮಾಡೋಕ್ಕೆ ಆಗಲ್ಲ, ಹಾಗಂತ ಮಕ್ಕಳ ವಿದ್ಯಾಭ್ಯಾಸಕ್ಕೂ ಧಕ್ಕೆ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ಇತ್ತು. ‌ಇದಕ್ಕಾಗಿ ಮೊದಲು ಪ್ಲಾನ್ ಆಫ್ ಆ್ಯಕ್ಷನ್ ಅಂತ ಮಾಡಿಕೊಂಡು, ಮೊದಲು ಆನ್​ಲೈನ್ ಗೆ ನಮ್ಮನ್ನ ನಾವು ತಯಾರಿ ಮಾಡಿಕೊಂಡೆವು. ವಿಭಾಗದ ಮುಖ್ಯಸ್ಥರಿಂದ ಹಿಡಿದು ಉಪನ್ಯಾಸಕರಿಗೆ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಯ್ತು. ನಂತರವೇ ಆನ್​​ಲೈನ್ ಕೋರ್ಸ್ ಶುರು ಮಾಡಲಾಯಿತು. ಇದು ಎಷ್ಟರ ಮಟ್ಟಿಗೆ ಅರ್ಥವಾಗಿದೆ ಎಂಬುದನ್ನು ತಿಳಿಯಲು ಸಣ್ಣ ಪರೀಕ್ಷೆಯನ್ನ ನಡೆಸಲಾಯಿತು ಅಂತ ಆನ್​​ಲೈನ್​​ ಶಿಕ್ಷಣದ ಅಳವಡಿಕೆ ಸಂಬಂಧ ಡಾ. ರವಿಶಂಕರ್​ ವಿವರಿಸಿದರು.

ಕೊರೊನಾ ಮತ್ತು ಆನ್​​ಲೈನ್ ಶಿಕ್ಷಣ ಕುರಿತು ತಜ್ಞರ ಅಭಿಪ್ರಾಯ
''ಆನ್​ಲೈನ್​​ನಲ್ಲಿ ಶೈಕ್ಷಣಿಕ ಪಠ್ಯಕ್ರಮ ಬೋಧನೆ ಮಾತ್ರವಲ್ಲ, ಇತರೆ ಸಹಪಠ್ಯಕ್ರಮಕ್ಕೂ ಆದ್ಯತೆ''ಆನ್​​ಲೈನ್ ಶಿಕ್ಷಣ ಎಂದ ಕೂಡಲೇ ಪಾಠ ಪ್ರವಚನದಲ್ಲಿ ವಿದ್ಯಾರ್ಥಿಗಳಿಗೆ ಆಲಸ್ಯ ತರುವ ಬದಲಿಗೆ ಇದರೊಟ್ಟಿಗೆ ಇತರೆ ಚಟುವಟಿಕೆಗಳಲ್ಲೂ ಭಾಗಿಯಾಗಲು ಪ್ರೋತ್ಸಾಹಿಸಲಾಯಿತು. ಆನ್​ಲೈನ್ ಮೂಲಕ ಸಾಧ್ಯವಾಗುವ ಸಹ ಪಠ್ಯಕ್ಕೆ ಉತ್ತೇಜನ ನೀಡುವಂತಿರಬೇಕು. ಕೊರೊನಾ‌ ಹೊಸ ರೀತಿಯ ಪಾಠಗಳನ್ನ ಕಲಿಸಿದ್ದು, ಅದನ್ನ ಅಳವಡಿಸಿಕೊಳ್ಳಬೇಕು. ನಾವು ಕೂಡ ನಿಧಾನಗತಿಯಲ್ಲಿ online ಶಿಕ್ಷಣ ಕಲಿಯಬೇಕು. ಎಲ್ಲೆಲ್ಲಿ ಯಾವ ಕೋರ್ಸ್​​ಗಳಿಗೆ online ಅಗತ್ಯವೋ ಅದನ್ನ‌ ಅಳವಡಿಸಿಕೊಂಡು ಹೋಗಬೇಕು ಅಂತ ಸಲಹೆ ನೀಡಿದರು. online ಶಿಕ್ಷಣಕ್ಕೆ ನೆಟ್​ವರ್ಕ್ ಸಮಸ್ಯೆಯಾಗಬಹುದು, ಇದಕ್ಕಾಗಿಯೇ ವಿದ್ಯಾರ್ಥಿಗಳಿಗೆ ರೆಕಾರ್ಡಿಂಗ್ ಮಾಡಿ ಲಿಂಕ್​ಗಳನ್ನು ಶೇರ್ ಮಾಡುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ ಅಂತ ತಿಳಿಸಿದರು.
''ಆನ್​​ಲೈನ್​ ಶಿಕ್ಷಣ ಟ್ರೆಂಡ್ ಆಗುತ್ತಿದ್ಯಾ?''

ಈಗಂತೂ ಅ, ಆ, ಇ, ಈ, ಕಲಿಯುತ್ತಿರುವ ಮಕ್ಕಳಿಗೂ online ಶಿಕ್ಷಣ ನೀಡಲಾಗುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ online ಶಿಕ್ಷಣ ನೀಡುವುದೇ ಇದೀಗ ಟ್ರೆಂಡ್ ಆಗುತ್ತಿದ್ಯಾ ಅನ್ನುವ ಪ್ರಶ್ನೆಗಳು ಉದ್ಭವಿಸಿವೆ‌. ಕಾಲೇಜು ವಿದ್ಯಾರ್ಥಿಗಳಿಗೆ online ಪಾಠ ಓಕೆ. ಆದರೆ LKG,UKG ಮಕ್ಕಳು ಸೇರಿದಂತೆ ಪ್ರಾಥಮಿಕ ಶಾಲಾ ಮಕ್ಕಳಿಗೆ ಆನ್​​ಲೈನ್​ ಶಿಕ್ಷಣದ ಅಗತ್ಯವೇನಿದೆ ಅಂತಲೂ ಚರ್ಚೆಗಳು ನಡೆಯುತ್ತಿವೆ. ಹೀಗಾಗಿ ರಾಜ್ಯ ಸರ್ಕಾರವು ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಒಂದು ತೀರ್ಮಾನಕ್ಕೆ ಬರಲು ಸಭೆಯನ್ನ‌ ಕರೆದಿದೆ.

ಈಗಾಗಲೇ ಒಂದು ಸುತ್ತಿನ ಸಭೆ ನಡೆಸಿರುವ ಸಚಿವರು, ಖಾಸಗಿ ಶಾಲಾ ಸಂಸ್ಥೆಗಳ ರಾಜ್ಯ ಸಂಘಟನೆಗಳು, ಶಿಕ್ಷಣ ತಜ್ಞರೊಂದಿಗೆ ಸಮಾಲೋಚನೆ ನಡೆಸಿದೆ. ಎಲ್ ಕೆ‌ಜಿ‌,ಯುಕೆಜಿ ಹಾಗೂ ಪ್ರಾಥಮಿಕ ಹಂತದ ತರಗತಿಗಳಲ್ಲಿ online ಮೂಲಕ ಶಿಕ್ಷಣವನ್ನು ನೀಡುವುದು ಆರೋಗ್ಯಕರವಲ್ಲ ಮತ್ತು ಯೋಗ್ಯವೂ ಅಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಇನ್ನುಳಿದ ತರಗತಿಗಳಿಗೆ ಮಕ್ಕಳ ಏಕಾಗ್ರತೆ ಅವಧಿ ಹಾಗೂ ಇಂತಹ ವಿನೂತನ ಬೋಧನಾ ಉಪಕ್ರಮಗಳು ವಿದ್ಯಾರ್ಥಿ ಸಮುದಾಯದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡಬಹುದಾದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಣಯದ ಅವಶ್ಯಕತೆ‌ ಇದೆ.
''online ಶಿಕ್ಷಣ ಬಡ ವರ್ಗಕ್ಕೆ ಕೈಗೆಟುಕದಂತೆ ಆಗಲಿದ್ಯಾ??''
ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಸುಮಾರು 58ಲಕ್ಷಕ್ಕೂ ಅಧಿಕ ವಿದ್ಯಾರ್ಥಿ ಕಲಿಯುತ್ತಿದ್ದಾರೆ. ರಾಜ್ಯ ಪಠ್ಯಕ್ರಮವನ್ನ ಅನುಸರಿಸುವ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಸುಮಾರು 31ಲಕ್ಷ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ನಗರ ಕೇಂದ್ರಿತವಾದ ಕೇಂದ್ರ/ಇತರೆ ಸಿಬಿಎಸ್​ಇ, ಐಸಿಎಸ್ಇ ಪಠ್ಯಕ್ರಮ ಕಲಿಯುತ್ತಿರುವ ಸುಮಾರು 14 ಲಕ್ಷ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಶಾಲಾ ಆಡಳಿತ ಮಂಡಳಿಗಳು ಮಾತ್ರ ಆನ್​​ಲೈನ್​​ ಬೋಧನೆಯ ಪರ್ಯಾಯ ಕ್ರಮಗಳನ್ನು ಪೋಷಕರ ಮತ್ತು ವಿದ್ಯಾರ್ಥಿಗಳ ಮೇಲೆ ಹೇರಿವೆ.
ಒಂದು ವೇಳೆ ರಾಜ್ಯ ಸರ್ಕಾರದ ಅಡಿಯಲ್ಲಿ ಬರುವ ಶಾಲೆಗಳು online ಶಿಕ್ಷಣಕ್ಕೆ ಜೋತು ಬಿದ್ದರೆ ಬಡ ವರ್ಗಕ್ಕೆ ಕೈಗೆಟುಕದಂತೆ ಆಗಲಿದ್ಯಾ ಎಂಬ ಪ್ರಶ್ನೆ ಕೇಳಿ ಬರುತ್ತಿದೆ. online ಶಿಕ್ಷಣಕ್ಕೆ ಬೇಕಾಗಿರುವ ಉಪಕರಣಗಳ ಕೊರತೆ, ಇಂಟರ್​ನೆಟ್ ಸೇವೆ ಇಲ್ಲದೇ ಇರಬಹುದು, ತಾಂತ್ರಿಕ ಸಮಸ್ಯೆಗಳು ಉದ್ಭವಿಸಬಹುದು. online ಮುಖಾಂತರ ಮಕ್ಕಳಿಗೆ ಪಾಠ ಅರ್ಥವಾಗುತ್ತಿಲ್ಲ ಅಂತ ಆರ್​​ಟಿ‌ಇ ಸ್ಟೂಡೆಂಟ್ಸ್ ಆ್ಯಂಡ್​ ಪೇರೆಂಟ್ಸ್ ಅಸೋಸಿಯೇಷನ್​​ನ ಪ್ರಧಾನ ಕಾರ್ಯದರ್ಶಿ ಬಿ. ಎನ್. ಯೋಗಾನಂದ ತಿಳಿಸಿದ್ದಾರೆ.‌

ಒಟ್ಟಾರೆ, online ಶಿಕ್ಷಣದ ಪರ-ವಿರೋಧಗಳ ಚರ್ಚೆಗಳ ನಡುವೆ ಹಲವರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಆದರೆ ಆನ್​​ಲೈನ್​ ಕೇವಲ ಪಾಠ-ಪ್ರವಚನಕ್ಕೆ ಸೀಮಿತವಾಗದೇ ಮತ್ತೊಂದಿಷ್ಟು ಚಟುವಟಿಕೆಗಳಿಗೆ ವೇದಿಕೆಯಾಗಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.