ETV Bharat / bharat

ಭಾರತಕ್ಕೆ ಯಾವ ದೇಶದಿಂದ ಅತಿಹೆಚ್ಚು ಜನರು ಪ್ರವಾಸ ಬರ್ತಾರೆ ಗೊತ್ತಾ? - FOREIGN TOURISTS ARRIVALS

author img

By ETV Bharat Karnataka Team

Published : 2 hours ago

ಭಾರತದಲ್ಲಿ ವಿಶ್ವಖ್ಯಾತಿಯ ಪ್ರವಾಸಿ ತಾಣಗಳಿವೆ. ಅವುಗಳನ್ನು ವೀಕ್ಷಿಸಲು ವಿಶ್ವದ ಸಹಸ್ರಾರು ಜನರು ಇಲ್ಲಿಗೆ ಬರುತ್ತಾರೆ. ಹೀಗೆ ಬಂದ ಪ್ರವಾಸಿಗರ ಪೈಕಿ ಯಾವ ರಾಷ್ಟ್ರದವರು ಹೆಚ್ಚು ಎಂಬ ಮಾಹಿತಿ ಇಲ್ಲಿದೆ.

ಭಾರತಕ್ಕೆ ಪ್ರವಾಸ ಬರುವ ರಾಷ್ಟ್ರದ ಜನರು
ಭಾರತಕ್ಕೆ ಪ್ರವಾಸ ಬರುವ ರಾಷ್ಟ್ರದ ಜನರು (ANI)

ನವದೆಹಲಿ: ಭಾರತಕ್ಕೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸಂಖ್ಯೆಗೇನೂ ಕಮ್ಮಿ ಇಲ್ಲ. ವಿಶ್ವದ 15 ಅಗ್ರ ರಾಷ್ಟ್ರಗಳಲ್ಲಿ ದೇಶಕ್ಕೆ ಅತಿಹೆಚ್ಚು ಪ್ರಮಾಣದಲ್ಲಿ ಭೇಟಿ ನೀಡುವ ಪ್ರವಾಸಿ ರಾಷ್ಟ್ರವೆಂದರೆ ಅದು ನೆರೆಯ ಬಾಂಗ್ಲಾದೇಶ. ಬಳಿಕ ಅಮೆರಿಕ ಮತ್ತು ಇಂಗ್ಲೆಂಡ್​​ನಿಂದ ಪ್ರವಾಸಿಗರು ಇದ್ದಾರೆ.

2023ರಲ್ಲಿ ಭಾರತಕ್ಕೆ ವಿದೇಶಿ ಪ್ರವಾಸಿಗರ ಆಗಮನದ(ಎಫ್‌ಟಿಎ) ಬಗ್ಗೆ ಪ್ರವಾಸೋದ್ಯಮ ಇಲಾಖೆ ಮಾಹಿತಿ ಹಂಚಿಕೊಂಡಿದ್ದು, ಬಾಂಗ್ಲಾದೇಶದಿಂದ ಅತಿಹೆಚ್ಚು ಜನರು ಆಗಮಿಸಿದ್ದಾರೆ. ನೆರೆಯ ರಾಷ್ಟ್ರದಿಂದ 21,19,826 ಪ್ರವಾಸಿಗರು ಆಗಮಿಸಿದ್ದಾರೆ. ಇದು ಒಟ್ಟಾರೆ ಪ್ರವಾಸಿಗರಲ್ಲಿ ಶೇಕಡಾ 22.3 ರಷ್ಟು ಪಾಲು. ಬಳಿಕ ಅಮೆರಿಕದಿಂದ 16,91,498 (ಶೇ.17.8), ಇಂಗ್ಲೆಂಡ್​​ನಿಂದ 9,20,591 (ಶೇ.9.7), ಆಸ್ಟ್ರೇಲಿಯಾದಿಂದ 4,56,167, ಕೆನಡಾದಿಂದ 3,85,938 ಜನರು ಬಂದಿದ್ದಾರೆ.

ಗಮನಾರ್ಹ ಸಂಗತಿ ಎಂದರೆ, ಭಾರತಕ್ಕೆ ಬರುವ ವಿದೇಶಿ ಪ್ರವಾಸಿಗರಲ್ಲಿ ಬಾಂಗ್ಲಾದೇಶಿಗರು ಅತಿಹೆಚ್ಚು. 2022 ರಲ್ಲಿ 12,77,557 ಪ್ರವಾಸಿಗರು ಆಗಮಿಸುವುದರೊಂದಿಗೆ ಎರಡನೇ ಸ್ಥಾನ ಪಡೆದಿತ್ತು. ಆ ವರ್ಷ ಅಮೆರಿಕದಿಂದ 14,03,399 ಪ್ರವಾಸಿಗರು ಬರುವ ಮೂಲಕ ಮೊದಲ ಸ್ಥಾನದಲ್ಲಿತ್ತು. ಇಂಗ್ಲೆಂಡ್​​ನಿಂದ 6,41,051 ಪ್ರವಾಸಿಗರು ಬಂದಿದ್ದರು.

ಕಳೆದ ವರ್ಷ ಅಗ್ರ 15 ರಾಷ್ಟ್ರಗಳಿಂದ ಭಾರತಕ್ಕೆ ಒಟ್ಟು 73,69,869 ಪ್ರವಾಸಿಗರು ಬಂದಿದ್ದರು. ಇದು ಶೇಕಡಾ 78.3 ರಷ್ಟಿದೆ. 2022 ರಲ್ಲಿ ಇದು 50,58,629 ಮಂದಿ ಭೇಟಿ ನೀಡಿದ್ದರು. ಇದು ಶೇಕಡಾ 79.7 ರಷ್ಟಿತ್ತು.

ಏಷ್ಯಾ ಪೆಸಿಫಿಕ್ ದೇಶಗಳನ್ನು ಒಳಗೊಂಡಂತೆ ಭಾರತವು ಜಾಗತಿಕವಾಗಿ 9.24 ಮಿಲಿಯನ್ ವಿದೇಶಿ ಪ್ರವಾಸಿಗರನ್ನು ಆಹ್ವಾನಿಸಿದೆ. ಆಸ್ಟ್ರೇಲಿಯಾ, ಮಲೇಷ್ಯಾ, ಸಿಂಗಾಪುರ್, ಜಪಾನ್, ಥಾಯ್ಲೆಂಡ್​ ಮತ್ತು ರಿಪಬ್ಲಿಕ್ ಆಫ್ ಕೊರಿಯಾಗಳು ಅಗ್ರ 20 ಪ್ರವಾಸೋದ್ಯಮ ರಾಷ್ಟ್ರಗಳಾಗಿವೆ.

ಪ್ರವಾಸೋದ್ಯಮ ಸಚಿವಾಲಯದ ಪ್ರಕಾರ, ವಿದೇಶಿ ಪ್ರವಾಸಿಗರು ಗುಜರಾತ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ, ಕೇರಳ, ಪಂಜಾಬ್ ಮತ್ತು ಮಧ್ಯಪ್ರದೇಶಕ್ಕೆ ಅತಿಹೆಚ್ಚು ಭೇಟಿ ನೀಡುತ್ತಾರೆ. ತಾಜ್ ಮಹಲ್, ಆಗ್ರಾ, ಕುತುಬ್ ಮಿನಾರ್, ಹುಮಾಯುನ್ ಟಾಮ್, ಫತೇಪುರ್ ಸಿಕ್ರಿ, ಸಾರಾನಾಥ್ ಮತ್ತು ಕೆಂಪು ಕೋಟೆ ಅತ್ಯಂತ ನೆಚ್ಚಿನ ತಾಣವಾಗಿವೆ.

ಇದನ್ನೂ ಓದಿ: 'ಸಂವಿಧಾನ, ಸಿಎಂ ಸ್ಥಾನಕ್ಕೆ ಅತಿಶಿ ಅಪಮಾನ': ಖಾಲಿ ಕುರ್ಚಿ ಇಟ್ಟುಕೊಂಡಿದ್ದಕ್ಕೆ ಬಿಜೆಪಿ, ಕಾಂಗ್ರೆಸ್ ಕಿಡಿ - BJP Congress attack on Atishi

ETV Bharat Logo

Copyright © 2024 Ushodaya Enterprises Pvt. Ltd., All Rights Reserved.