ಬೆಂಗಳೂರು: ಆನ್ ಲೈನ್ ಶಿಕ್ಷಣದ ಮಾದರಿ ಸಿದ್ಧಪಡಿಸಲು ರಾಜ್ಯ ಸರ್ಕಾರದ ಸಮಿತಿ ವರದಿ ಬರೋವರೆಗೆ ಆನ್‌ಲೈನ್ ಕ್ಲಾಸ್ ಗೆ ಅವಕಾಶ ಕಲ್ಪಿಸಿದೆ.
![online class](https://etvbharatimages.akamaized.net/etvbharat/prod-images/kn-bng-6-online-class-script-7201801_28062020213838_2806f_1593360518_403.jpg)
ರಾಜ್ಯದಲ್ಲಿನ ರಾಜ್ಯ ಪಠ್ಯಕ್ರಮ ಹಾಗೂ ಇನ್ನಿತರೆ ಪಠ್ಯಕ್ರಮಗಳಾದ ಐಸಿಎಸ್ಇ/ ಸಿಬಿಎಸ್ಇ, ಅಂತಾರಾಷ್ಟ್ರೀಯ ಪಠ್ಯಕ್ರಮ ಸೇರಿದಂತೆ ಎಲ್ಲಾ ಶಾಲೆಗಳು ಎಲ್‌ಕೆಜಿಯಿಂದ 10ನೇ ತರಗತಿಯವರೆಗೆ ಆನ್‌ಲೈನ್ ಶಿಕ್ಷಣ ನೀಡಲು ಅವಕಾಶ ನೀಡಲಾಗಿದೆ.
ಆನ್‌ಲೈನ್ ಶಿಕ್ಷಣ ಸಂಬಂಧ ಹಲವು ನಿಯಮ ಜಾರಿ ಮಾಡಿದೆ.
ಆನ್‌ಲೈನ್ ಕ್ಲಾಸ್‌ಗೆ ಈಗಿರುವ ನಿಯಮಗಳೇನು?
- ಪೂರ್ವ ಪ್ರಾಥಮಿಕ (30 ನಿಮಿಷಗಳ ಮೀರದಂತೆ ವಾರಕ್ಕೆ ಒಂದು ದಿನ ಆನ್‌ಲೈನ್ ಕ್ಲಾಸ್)
- 1-5 ನೇ ತರಗತಿ (30-34 ನಿಮಿಷಗಳ 2 ಅವಧಿಗಳಿಗೆ ಮೀರದಂತೆ ದಿನ ಬಿಟ್ಟು ದಿನ ಆನ್ ಲೈನ್ ಕ್ಲಾಸ್)
- 6-8 ನೇ ತರಗತಿ (30-40 ನಿಮಿಷಗಳ 2 ಅವಧಿಗಳಿಗೆ ಮೀರದಂತೆ ವಾರದಲ್ಲಿ 5 ದಿನ ಆನ್ ಲೈನ್ ಕ್ಲಾಸ್)
- 9-10ನೇ ತರಗತಿ (30-45 ನಿಮಿಷಗಳ 4 ಅವಧಿಗಳಿಗೆ ಮೀರದಂತೆ ವಾರದಲ್ಲಿ 5 ದಿನ ಕ್ಲಾಸ್)