ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ವ್ಯಾಪ್ತಿಯ ಚಾಮುಂಡೇಶ್ವರಿ, ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ಮತ್ತು ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಫೆಬ್ರವರಿ 1 ರಂದು ಅಧಿಸೂಚನೆ ಪ್ರಕಟಿಸಲಾಗಿದ್ದು, ಫೆಬ್ರವರಿ 7ರಿಂದ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆ ಆರಂಭ ಹಾಗೂ ಅರ್ಜಿ ಸಲ್ಲಿಕೆಗೆ ಮಾರ್ಚ್ 7 ಕೊನೆ ದಿನವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಖೇನ ಆಯ್ಕೆ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ನಿಗಮ ಹೇಳಿದೆ.
ಸಹಾಯಕ ಇಂಜಿನಿಯರ್ (ವಿದ್ಯುತ್)- 393, ಕಲ್ಯಾಣ ಕರ್ನಾಟಕ- 106, ಸಹಾಯಕ ಇಂಜಿನಿಯರ್ (ಸಿವಿಲ್) 21, ಕಲ್ಯಾಣ ಕರ್ನಾಟಕ- 7, ಕಿರಿಯ ಇಂಜಿನಿಯರ್ (ವಿದ್ಯುತ್)- 477, ಕಲ್ಯಾಣ ಕರ್ನಾಟಕ- 82, ಕಿರಿಯ ಇಂಜಿನಿಯರ್ (ಸಿವಿಲ್) - 21, ಕಲ್ಯಾಣ ಕರ್ನಾಟಕ- 8, ಕಿರಿಯ ಸಹಾಯಕ- 357 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ.
![ಹುದ್ದೆಗಳ ಮಾಹಿತಿ](https://etvbharatimages.akamaized.net/etvbharat/prod-images/kn-bng-03-kptcl-recruitmemt-online-applications-kannada-compulsary-ka10032_07022022101358_0702f_1644209038_726.jpeg)
ಓದಿ: ರಾಜ್ಯಸಭೆಯಲ್ಲಿ ಗಾನ ಕೋಗಿಲೆಗೆ ನಮನ: ಮೌನಾಚರಣೆ ಬಳಿಕ 1ಗಂಟೆ ಕಲಾಪ ಮುಂದೂಡಿಕೆ
ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರೆ ಅರ್ಹತಾ ಪರೀಕ್ಷೆ: ಕನ್ನಡ ಭಾಷಾ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆದು ತೇರ್ಗಡೆ ಹೊಂದಿದರಷ್ಟೇ ಅರ್ಹತಾ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ಐದು ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿಯಿರುವ ಸಹಾಯಕ, ಕಿರಿಯ ಇಂಜಿನಿಯರ್ ಹಾಗೂ ಕಿರಿಯ ಸಹಾಯಕರ ಹುದ್ದೆಗಳ ಭರ್ತಿಗೆ ಅಧಿಸೂಚನೆಯಲ್ಲಿ ಹೇಳಿದೆ.
ಈಡೇರಿದ ಕನ್ನಡಿಗರ ಬೇಡಿಕೆ: ಗ್ರೂಪ್ ಬಿ ಮತ್ತು ಸಿ ವೃಂದಗಳ ಹುದ್ದೆಗಳಿಗೆ ಕನ್ನಡ ಭಾಷೆ ಕಡ್ಡಾಯ ಮಾಡಿರುವುದು ಬಹು ದಿನಗಳ ಕನ್ನಡಿಗರ ಬೇಡಿಕೆ ಈಡೇರಿದಂತಾಗಿದೆ. ಇಂಜಿನಿಯರ್ ಇನ್ನಿತರ ಹುದ್ದೆಗಳು ತಾಂತ್ರಿಕ ಆಗಿದ್ದರೂ ಕನ್ನಡಿಗರಿಗೆ ಪ್ರಾಮುಖ್ಯತೆ ನೀಡಲಾಗಿದೆ.