ಬೆಂಗಳೂರು: ನಶೆ ಬರುವ ಮಾದಕ ವಸ್ತುಯುಕ್ತ ಸಿರಪ್ ಮಾರಾಟದ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಜೆಪಿ ನಗರ ಪೊಲೀಸರು ಅಮಾನ್ ಉಲ್ಲ ಎಂಬುವವನನ್ನು ಬಂಧಿಸಿದ್ದಾರೆ. ವಿಜಯನಗರದ ಮೆಡಿಕಲ್ ಶಾಪ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಮಾನ್ ಉಲ್ಲಾ ಮಾಲಿಕ, ಇಮ್ರಾನ್ ನಿಂದ ನಿಷೇಧಿತ ಎಸ್ಕೂಪ್ ಸಿರಪ್ ಖರೀದಿ ಮಾಡಿದ್ದ. ಜೆಪಿ ನಗರ ಆಕ್ಸ್‌ಫರ್ಡ್ ಗ್ರೌಂಡ್ ಬಳಿ ಯುವಕರಿಗೆ ಮಾರಲು ಯತ್ನಿಸುತ್ತಿದ್ದ. ಈ ವೇಳೆ, ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನ ಬಂಧಿಸಿ 356 ಬಾಟಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಎಸ್ಕೂಪ್ ಸಿರಪ್ನಲ್ಲಿ ಕೊಡೈನ್ ಎಂಬ ಮಾದಕ ವಸ್ತುವಿನ ಅಂಶವಿದ್ದು, ಈ ಸಿರಪ್ ನೋವು ಮತ್ತು ಕೆಮ್ಮಿನ ಚಿಕಿತ್ಸೆಗೆ ಬಳಸಲಾಗುತ್ತದೆ. ಮಾದಕ ಅಂಶ ಇರುವುದರಿಂದ ಈ ಸಿರಪ್ ಅನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ. ಕಡಿಮೆ ಬೆಲೆಗೆ ಸಿಗುವ ಈ ಸಿರಪ್ನಿಂದ ವ್ಯಸನಿಗಳು ನಶೆ ಏರಿಸಿಕೊಳ್ಳುತ್ತಾರೆ. ಸದ್ಯ ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಏರ್ ಇಂಡಿಯಾ ಪೈಲಟ್ ಬಂಧನ; 120 ಕೋಟಿ ರೂ ಮೌಲ್ಯದ ಡ್ರಗ್ಸ್ ವಶ