ETV Bharat / state

2 ಡೋಸ್​ ಲಸಿಕೆ ಪಡೆದಿದ್ದರೆ ಮಾತ್ರ ಮನೆಯಿಂದ ಹೊರಬನ್ನಿ... Omicron ತಡೆಗೆ ರಾಜ್ಯದಲ್ಲಿ ಹೊಸ ರೂಲ್ಸ್​ ಜಾರಿ!

ಒಮಿಕ್ರಾನ್​ ವೈರಸ್​ ಪತ್ತೆ ಹಿನ್ನೆಲೆ ಮುಂಜಾಗ್ರತ ಕ್ರಮವಾಗಿ ಕಂದಾಯ ಸಚಿವ ಆರ್​. ಅಶೋಕ್​ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಶಾಲೆ, ಕಾಲೇಜು, ಸಿನಿಮಾ ಮಂದಿರ, ಮದುವೆ ಇತ್ಯಾದಿ ಸೇರಿದಂತೆ ಹಲವೆಡೆ ಕಟ್ಟೆಚ್ಚರ ವಹಿಸಲು ತಿಳಿಸಿದ್ದಾರೆ. ಹಾಗೂ ಶಿಲ್ಪಾ‌ ನಾಗರಾಜ್ ಅವರನ್ನು ಸರ್ವೈಲನ್ಸ್ ಆಫೀಸರ್‌ ಆಗಿ ನೇಮಕ ಮಾಡಲಾಗಿದೆ.

Karnataka omicron guideline
Karnataka omicron guideline
author img

By

Published : Dec 3, 2021, 4:36 PM IST

ಬೆಂಗಳೂರು: ರಾಜ್ಯದಲ್ಲಿ ಹೊಸ ಕೋವಿಡ್​ ರೂಪಾಂತರಿ ಒಮಿಕ್ರಾನ್​​​ ಪತ್ತೆ ಹಿನ್ನೆಲೆ, ಅಧಿಕಾರಿಗಳು ಮತ್ತು ತಜ್ಞರ ಜೊತೆ ಸಾಕಷ್ಟು ಚರ್ಚೆ ಮಾಡಲಾಗಿದೆ. ಈ ವೈರಸ್​ ಅಷ್ಟೊಂದು ಪರಿಣಾಮಕಾರಿಯಲ್ಲ. ಆದರೂ ಕೆಲವೊಂದಿಷ್ಟು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ ಎಂದು ಕಂದಾಯ ಸಚಿವ ಆರ್​. ಅಶೋಕ್​ ತಿಳಿಸಿದರು.

omicron guideline released : ನಗರದಲ್ಲಿ ಮಾತನಾಡಿದ ಅವರು, ಕೋವಿಡ್​ ಭೀಕರತೆಗೆ ಈ ವೈರಸ್​ ಹೋಲಿಸಿದರೆ ಅಷ್ಟೊಂದು ಪರಿಣಾಮಕಾರಿಯಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಕೆಲವೊಂದಿಷ್ಟು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಶಾಲಾ ಶಿಕ್ಷಕರು ಮತ್ತು ಪೋಷಕರು ಕಡ್ಡಾಯವಾಗಿ ಎರಡು ಡೋಸ್​ ವ್ಯಾಕ್ಸಿನ್ ಪಡೆದಿರಬೇಕು. ಹಾಗಿದ್ದರೆ ಮಾತ್ರ ಶಾಲೆಗೆ ಅವಕಾಶ ನೀಡಲಾಗುತ್ತದೆ. ಮಾಲ್​, ಸಿನಿಮಾಗೂ ಎರಡು ಡೋಸ್​ ಕಡ್ಡಾಯ. ಮದುವೆ ಸಮಾರಂಭಗಳಿಗೆ 500 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದರು.

ರಾಜ್ಯ ಸರ್ಕಾರದ ಮಾರ್ಗಸೂಚಿ ಇಂತಿವೆ

  • ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿ ನೆಗಟಿವ್ ವರದಿ ಬಂದರಷ್ಟೇ ನಿಲ್ದಾಣದಿಂದ ಹೊರಗೆ
  • ಸಿನಿಮಾ ಮಂದಿರಗಳು, ಮಾಲ್​​, ರಂಗಮಂದಿರಗಳಿಗೆ ಪ್ರವೇಶಿಸಲು ಕೊರೊನಾ ಲಸಿಕೆಯ ಎರಡು ಡೋಸ್ ಕಡ್ಡಾಯ
  • ಶಾಲಾ ಮಕ್ಕಳ ಪೋಷಕರು ಕಡ್ಡಾಯವಾಗಿ ಎರಡು ಡೋಸ್ ಪಡೆದಿದ್ದರೆ ಮಾತ್ರ ಅವರ ಮಕ್ಕಳಿಗೆ ಪ್ರವೇಶ
  • ಶಾಲಾ-ಕಾಲೇಜುಗಳಲ್ಲಿ ಯಾವುದೇ ಸಮಾರಂಭ ಮಾಡುವಂತಿಲ್ಲ
  • ಮದುವೆ ಕಾರ್ಯಕ್ರಮಕ್ಕೆ ಗರಿಷ್ಠ 500 ಜನಕ್ಕೆ ಸೀಮಿತಗೊಳಿಸಿ ಕಡ್ಡಾಯಗೊಳಿಸಲು ಸೂಚನೆ

ಅಲ್ಲದೇ, ನಿತ್ಯ ಒಂದು ಲಕ್ಷ ಕೋವಿಡ್ ಟೆಸ್ಟ್ ಮಾಡಲು ಅಧಿಕಾರಗಳಿಗೆ ಸೂಚಿಸಲಾಗಿದೆ. ಕೋವಿಡ್, ಐಸಿಯು ಬೆಡ್ ಮರುಚಾಲನೆ ಮಾಡಲು ಸಿಎಂ ಸೂಚಿಸಿದ್ದಾರೆ. ಆಕ್ಸಿಜನ್ ಪ್ಲಾಂಟ್ ಸರ್ವಿಸ್ ನಡೆಸಿ ಸಿದ್ದಮಾಡಿಕೊಂಡಿರಬೇಕು.

ರಾಜ್ಯಾದ್ಯಂತ ಕಂಟ್ರೋಲ್ ರೂಮ್ ಪುನಃ ಚಾಲನೆಗೆ ಆದೇಶ ನೀಡಲಾಗಿದೆ. ಔಷಧಿಯ ಸಮಸ್ಯೆ ಆಗದಂತೆ ವ್ಯಾಕ್ಸಿನ್ ಖರೀದಿಸಲು ನಿರ್ಧರಿಸಲಾಗಿದೆ. ಶಿಲ್ಪಾ‌ ನಾಗರಾಜ್ ಅವರನ್ನು ಸರ್ವೈಲನ್ಸ್ ಆಫೀಸರ್‌ ಆಗಿ ನೇಮಕ ಮಾಡಲಾಗಿದೆ. ಬೆಳಗಾವಿ ಅಧಿವೇಶನ ನೀತಿ‌ ನಿಯಮದಂತೆ ನಡೆಸುತ್ತೇವೆ ಎಂದು ಕಂದಾಯ ಸಚಿವರು ತಿಳಿಸಿದರು. ಕೋವಿಡ್​ 500 ರೂ. ಹಾಗೂ ವಿಮಾನ ನಿಲ್ದಾಣದಲ್ಲಿ ಮಾಡುವ ಅಬೇಟ್​ ಪರೀಕ್ಷೆಗೆ 3000 ದರ ನಿಗದಿ ಮಾಡಲಾಗಿದೆ ಎಂದು ಸಚಿವರು ಸ್ಪಷ್ಟನೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.