ETV Bharat / state

ಕೆಲ ದಿನಗಳಿಂದ ನನ್ನನ್ನು ಯಾರೋ ಕೊಲೆ ಮಾಡ್ತಾರೆ ಅಂತಿದ್ದ ಒಂಟಿ ವೃದ್ಧೆ.. ಆತಂಕದ ಬೆನ್ನಲ್ಲೇ ಅಜ್ಜಿ ಮರ್ಡರ್​ - ಅಜ್ಜಿಯ ಆತಂಕದ ಬೆನ್ನಲ್ಲೇ ಮರ್ಡರ್​

ಬೆಂಗಳೂರಿನಲ್ಲಿ ವೃದ್ಧೆ ಕೊಲೆ ಆಗಿದ್ದು, ಮನೆಯ ಭದ್ರತೆಗೆ‌ ನೇಮಕವಾಗಿದ್ದ ಸೆಕ್ಯೂರಿಟಿಗಾರ್ಡ್ ಮೇಲೆ ಅನುಮಾನ ವ್ಯಕ್ತವಾಗಿದೆ.

old woman murder in Bangalore
ಬೆಂಗಳೂರಿನಲ್ಲಿ ವೃದ್ಧೆ ಕೊಲೆ
author img

By

Published : Aug 13, 2022, 10:19 PM IST

ಬೆಂಗಳೂರು: ಕೈ-ಕಾಲು ಕಟ್ಟಿ, ಉಸಿರುಗಟ್ಟಿಸಿ‌ ಒಂಟಿಯಾಗಿದ್ದ ವೃದ್ಧೆಯನ್ನು ಕೊಲೆ ಮಾಡಿರುವ ಘಟನೆ ಹೆಚ್ಎಸ್ಆರ್ ಲೇಔಟ್ ಫುಡ್ ಡೇಸ್ ಸರ್ಕಲ್ ಬಳಿ ನಡೆದಿದೆ. 80 ವರ್ಷ ವಯಸ್ಸಿನ ಜಯಶ್ರೀ ಕೊಲೆಯಾಗಿರುವ ವೃದ್ಧೆ.

ಜಯಶ್ರೀ ಅವರು ಪತಿ ಶ್ರೀನಿವಾಸನ್ ಕೇಂದ್ರ ಗೃಹ ಇಲಾಖೆಯ ಇಂಟರ್ ಸ್ಟೇಟ್ ಪೊಲೀಸ್ ವೈರ್ ಲೆಸ್​ನಲ್ಲಿ ಕಾರ್ಯನಿರ್ವಹಿಸಿದ್ದು, ಪತಿಯ ಮರಣದ ನಂತರ ಒಬ್ಬರೇ ಮನೆಯಲ್ಲಿ ವಾಸವಿದ್ದರು. ಇಬ್ಬರು ಮಕ್ಕಳ ಪೈಕಿ‌ ಒಬ್ಬರು‌ ಕೆನಡಾದಲ್ಲಿ ವಾಸವಿದ್ದರೆ ಮತ್ತೊಬ್ಬರು ಬೆಂಗಳೂರಿನಲ್ಲೇ ವಾಸವಿದ್ದರು. ಮನೆಯ ಭದ್ರತೆಗಾಗಿ ನೇಪಾಳ ಮೂಲದ ಸೆಕ್ಯೂರಿಟಿ ಗಾರ್ಡ್ ಅನ್ನು ಸಹ ನೇಮಿಸಲಾಗಿತ್ತು.

ವೃದ್ಧೆ ಕೊಲೆ ಪ್ರಕರಣ

ಕಳೆದ ಕೆಲ ದಿನಗಳಿಂದ ಆಗಾಗ ಪೊಲೀಸ್ ಠಾಣೆಗೆ ಕರೆ ಮಾಡುತ್ತಿದ್ದ ಜಯಶ್ರೀ 'ನನ್ನನ್ನು ಯಾರೋ ಕೊಲೆ ಮಾಡ್ತಾರೆ' ಅಂತ ಹೇಳುತ್ತಿದ್ದರು. ಅದೇ ಕಾರಣಕ್ಕೆ ವಾರದಲ್ಲಿ ಎರಡು ದಿನ ಹೆಚ್ಎಸ್ಆರ್ ಲೇಔಟ್ ಠಾಣಾ ಪೊಲೀಸರು ಭದ್ರತಾ ಮೇಲ್ವಿಚಾರಣೆ ಮಾಡುತ್ತಿದ್ದರು. ಆದರೆ ಕಳೆದ ರಾತ್ರಿ ಮನೆಯಲ್ಲಿಯೇ ಜಯಶ್ರೀ ಕೊಲೆಯಾಗಿದೆ.

ಮತ್ತೊಂದೆಡೆ ಮನೆಯ ಭದ್ರತೆಗೆ‌ ನೇಮಕವಾಗಿದ್ದ ಸೆಕ್ಯೂರಿಟಿಗಾರ್ಡ್ ಸಹ ನಾಪತ್ತೆಯಾಗಿದ್ದು, ಅನುಮಾನಕ್ಕೆ ಕಾರಣವಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಹೆಚ್ಎಸ್ಆರ್ ಲೇಔಟ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ದಾಂಡೇಲಿಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ಎಳೆದೊಯ್ದ ಮೊಸಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.