ETV Bharat / state

ಕ್ರಿಕೆಟ್ ಬೆಟ್ಟಿಂಗ್ ಸಾಲ ತೀರಿಸಲು ಒಂಟಿ ವೃದ್ಧೆಯ ಕೊಲೆ, ಕಳ್ಳತನ: ಆರೋಪಿಗಳು ಸೆರೆ

author img

By

Published : Jun 2, 2023, 2:23 PM IST

ಕ್ರಿಕೆಟ್ ಬೆಟ್ಟಿಂಗ್ ಸಾಲ ತೀರಿಸಲು ಒಂಟಿ ವೃದ್ದೆಯ ಕೊಲೆಗೈದು ಮನೆ ದೋಚಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

old woman killed  stolen for pay off cricket betting debt  Murder accused arrested in Bengaluru  ಕ್ರಿಕೆಟ್ ಬೆಟ್ಟಿಂಗ್ ಸಾಲ  ಸಾಲ ತೀರಿಸಲು ಒಂಟಿ ವೃದ್ಧೆಯ ಕೊಲೆ  ಒಂಟಿ ವೃದ್ದೆಯ ಕೊಲೆ  ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿ  ಬೆಟ್ಟಿಂಗ್ ಸಾಲ ತೀರಿಸಲು ದರೋಡೆ  ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿ  ವೃದ್ದೆಯ ಕೈಕಾಲು ಕಟ್ಟಿ ಕೊಲೆ
ಆರೋಪಿಗಳು ಅಂದರ್​

ಬೆಂಗಳೂರು : ಒಂಟಿ ವೃದ್ದೆಯ ಕೈಕಾಲು ಕಟ್ಟಿ ಕೊಲೆ ಮಾಡಿ, ಮನೆಯಲ್ಲಿದ್ದ ಚಿನ್ನಾಭರಣ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ದಿದ್ದ ಮೂವರು ಹಂತಕರನ್ನು ಮಹಾಲಕ್ಷ್ಮೀ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅಶೋಕ್, ಅಂಜನ್ ಹಾಗೂ ಸಿದ್ಧರಾಜು ಬಂಧಿತರು ಎಂದು ಗುರುತಿಸಲಾಗಿದೆ. ಮೇ 27 ರ ಸಂಜೆ ಕಮಲಮ್ಮ (80) ಎಂಬ ವೃದ್ದೆಯ ಮನೆಗೆ ನುಗ್ಗಿದ್ದ ಆರೋಪಿಗಳು ಆಕೆಯನ್ನು ಹತ್ಯೆಗೈದು ಮನೆಯಲ್ಲಿದ್ದ ನಗದು ಹಾಗೂ ಚಿನ್ನ ದೋಚಿ ಪರಾರಿಯಾಗಿದ್ದರು.

ಬೆಟ್ಟಿಂಗ್ ಸಾಲ ತೀರಿಸಲು ದರೋಡೆ: ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ಅಶೋಕ್, ಆಟೋ ಚಾಲಕರಾದ ಅಂಜನ್ ಹಾಗೂ ಸಿದ್ಧರಾಜು ಐಪಿಎಲ್ ಸಂದರ್ಭದಲ್ಲಿ ಬೆಟ್ಟಿಂಗ್ ಗೀಳಿಗೆ ಬಿದ್ದು ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಒಂದು ತಿಂಗಳ ಹಿಂದಷ್ಟೇ ಕಮಲಮ್ಮಳ ಮನೆಯಲ್ಲಿ‌ ಪ್ಲಂಬಿಂಗ್ ವರ್ಕ್ ಮಾಡಿದ್ದ ಅಶೋಕ್ 'ವೃದ್ದೆಯ ಮನೆಯನ್ನು ದೋಚಿದರೆ ಸೆಟಲ್ ಆಗಬಹುದು' ಎಂದು ಅಂಜನ್ ಹಾಗೂ ಸಿದ್ಧರಾಜುವಿಗೆ ಹೇಳಿದ್ದ.

ಮೇ 27ರಂದು ಸಂಜೆ ನಾಲ್ಕು ಗಂಟೆಗೆ ಕಮಲಮ್ಮಳ ಮನೆ ಬಳಿ‌ ಬಂದಿದ್ದ ಆರೋಪಿಗಳು 'ಖಾಲಿ ಇರುವ ನಿಮ್ಮ ಮನೆ ಬಾಡಿಗೆಗೆ ಕೊಡ್ತೀರಾ, ಬಿಸ್ಕೆಟ್ ಗೋಡೌನ್ ಮಾಡುತ್ತೇವೆ' ಎಂದು ಕೇಳಿದ್ದಾರೆ. ಕಮಲಮ್ಮ ನಿರಾಕರಿಸಿದ್ದಾರೆ. ಬಳಿಕ ಆರು ಗಂಟೆ ಸುಮಾರಿಗೆ ಪುನಃ ಮನೆ ಬಳಿ ಬಂದ ಆರೋಪಿಗಳನ್ನು ಕಂಡ ಕಮಲಮ್ಮ, ಈ ಹಿಂದೆ ಬಂದಿದ್ದ ಹುಡುಗರೇ ತಾನೇ, ಎಂದು ಬಾಗಿಲು ತೆರೆದಿದ್ದಾರೆ. ತಕ್ಷಣ ಆರೋಪಿಗಳು ಕಮಲಮ್ಮಳ ಮೇಲೆ ಹಲ್ಲೆ ಮಾಡಿ, ಆಕೆ ಕಿರುಚದಂತೆ ಬಾಯಿಗೆ ಬಟ್ಟೆ ತುರುಕಿ, ಕೈಕಾಲುಗಳನ್ನು ಕಟ್ಟಿ, ಮನೆಯಲ್ಲಿದ್ದ ಚಿನ್ನಾಭರಣ ದೋಚಿದ್ದರು. ಪರಾರಿಯಾಗುವ ಆತುರದಲ್ಲಿ ಆಕೆಯನ್ನು ಗಮನಿಸಿದೇ ತೆರಳಿದ್ದರು. ಉಸಿರಾಡಲೂ ಸಾಧ್ಯವಾಗದೇ ಕಮಲಮ್ಮ ಸ್ಥಳದಲ್ಲೇ ಮೃತಪಟ್ಟಿದ್ದರು.

ಪ್ರಕರಣ ದಾಖಲಿಸಿಕೊಂಡ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ಆರಂಭಿಸಿ ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದುರಂತವೆಂದರೆ ವೃದ್ದೆಯನ್ನು ಕೊಲ್ಲುವ ಉದ್ದೇಶವೇ ಇರದ ಆರೋಪಿಗಳಿಗೆ ತಾವು ಬಂಧನವಾದ ಬಳಿಕವೇ ಆಕೆ ಮೃತಪಟ್ಟಿದ್ದಾಳೆ ಎಂಬುದು ಗೊತ್ತಾಗಿದೆ. ಸದ್ಯ ಬಂಧಿತ ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಇದನ್ನೂ ಓದಿ: ಮದುವೆಗೆ ನಾಲ್ಕೇ ದಿನ ಬಾಕಿ ಇತ್ತು: ಹುಬ್ಬಳ್ಳಿಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ

ಬೆಂಗಳೂರಿನಲ್ಲಿ ಮಗನ ಕೊಂದ ಚಿಕ್ಕಪ್ಪ: ಕಳೆದ ಎರಡ್ಮೂರು ದಿನಗಳಿಂದ ರಾಜ್ಯದ ರಾಜಧಾನಿಯಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ನಿನ್ನೆ ರಾತ್ರಿ ನಗರದಲ್ಲಿ ಮತ್ತೊಂದು ಹತ್ಯೆಯಾಗಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಗನನ್ನೇ ಚಿಕ್ಕಪ್ಪ ಕೊಲೆ ಮಾಡಿರುವ ಘಟನೆ ನಡೆದಿದೆ. ಕೆಂಗೇರಿ ಉಪನಗರದ ಹೊಯ್ಸಳ ಸರ್ಕಲ್ ಸಮೀಪದ ಹ್ಯಾಪಿ ಡೇ ಬಾರ್ ಬಳಿ ಘಟನೆ ನಡೆದಿದೆ. ಕೆಂಗೇರಿಯ ಗಾಂಧಿನಗರ ನಿವಾಸಿ ನವೀನ್ (25) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ನಗ್ನ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ: ಕೈ, ಕಾಲು, ರುಂಡ ಕತ್ತರಿಸಿ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬನ್ನೇರುಘಟ್ಟದ ಜನತಾ ಕಾಲೊನಿಯಲ್ಲಿ ನಡೆದಿದೆ. ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ವಾಸಿ ಜನತಾ ಕಾಲೊನಿಯ ಗೀತಮ್ಮ (53) ಮೃತರು. ಮನೆ ಸಮೀಪವೇ ಕೈ ಕಾಲು ರುಂಡ ಕತ್ತರಿಸಿ ದೇಹ ಎಸೆದಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮೂರ್ನಾಲ್ಕು ದಿನಗಳ ಹಿಂದೆ ಮಹಿಳೆಯ ಹತ್ಯೆ ಮಾಡಿದ್ದು, ಬುಧವಾರದಂದು ನಗ್ನ ಸ್ಥಿತಿಯಲ್ಲಿ ಕೊಳೆತ ಶವ ಪತ್ತೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.