ETV Bharat / state

ಆನೇಕಲ್​ನಲ್ಲಿ ಪುಡಿ ರೌಡಿಯಿಂದ ಮಾರಣಾಂತಿಕ ಹಲ್ಲೆ, ವೃದ್ಧ ಬಲಿ - ವೃದ್ಧನ ಮೇಲೆ ಮಾರಣಾಂತಿಕ ಹಲ್ಲೆ

ಪುಡಿ ರೌಡಿಯೋರ್ವ ವೃದ್ಧನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಚಿಕಿತ್ಸೆ ಫಲಿಸದೆ ವೃದ್ಧ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Old man murdered by rowdy
ಕೊಲೆಯಾದ ಸೀತಪ್ಪ ಮತ್ತು ಕೊಲೆ ಆರೋಪಿ ಪವನ್​
author img

By

Published : Sep 10, 2022, 9:09 AM IST

ಆನೇಕಲ್: ಬೆಂಗಳೂರು ನಗರ ಜಿಲ್ಲೆ ಕೋರಮಂಗಲದ ವ್ಯಾಪ್ತಿಯ ಚಾಕು ಇರಿತ ಪ್ರಕರಣ ಸಂಬಂಧ ಜೈಲುವಾಸ ಅನುಭವಿಸಿ ಹೊರ ಬಂದಿದ್ದ ಪವನ್ ಎಂಬ ಪುಡಿ ರೌಡಿ, ಓರ್ವ ವೃದ್ಧನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಚಿಕಿತ್ಸೆ ಫಲಿಸದೆ ವೃದ್ಧ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆನೇಕಲ್ ಉಪ ವಿಭಾಗದ ಸರ್ಜಾಪುರ ಪೊಲೀಸ್ ಠಾಣಾ ಹಿಂಭಾಗದ ರೇಣುಕಾ ಯಲ್ಲಮ್ಮ ಬಡಾವಣೆಯಲ್ಲಿ ಈ ಪ್ರಕರಣ ನಡೆದಿದೆ.

ಆರೋಪಿ ಪವನ್ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರಮೇಶ್ ಅವರ ಪುತ್ರ ಎಂದು ತಿಳಿದುಬಂದಿದೆ. ಇದೇ ಭಾಗದ ದೂರುದಾರ ಹೇಮಂತ್​​ ಎಂಬಾತನನ್ನು ಕರೆದಾಗ ಆತ ಬಾರದೆ ಇದ್ದ ಕಾರಣಕ್ಕೆ ಪವನ್ ತನ್ನ ಸಹಚರರಾದ ರೋಹಿತ್, ಸುಮನ್, ಯಶವಂತ್ ಮತ್ತು ಕಾರ್ತಿಕ್ ಜೊತೆಗೂಡಿ ಹೇಮಂತ್ ಮೇಲೆ ಆ.28ರ ರಾತ್ರಿ ಹಲ್ಲೆ ಮಾಡಿದ್ದ. ಇದಕ್ಕೆ ಹೇಮಂತ್ ಕುಟುಂಬ ಪ್ರತಿರೋಧ ಒಡ್ಡಲು ಬಂದಾಗ ವೃದ್ಧ ಸೀತಪ್ಪ(85)ನ ಮೇಲೆರಗಿದ ಪವನ್ ತಂಡ ಮನಸೋ ಇಚ್ಛೆ ಹಲ್ಲೆ ಮಾಡಿದ್ದರು.

ಈ ಕುರಿತಂತೆ ಗಾಯಗೊಂಡ ನೇತ್ರ, ಮನು ಮತ್ತು ನಂಜೇಶ(ಹೇಮಂತ್​​ ಮನೆಯವರು) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತೀವ್ರ ಗಾಯಗೊಂಡಿದ್ದ ಸೀತಪ್ಪ ಸಾವು ಬದುಕಿನ ನಡುವೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಹಲ್ಲೆ ಪ್ರಕರಣ ಇದೀಗ ಸೀತಪ್ಪ ಸಾವಿನೊಂದಿಗೆ ಕೊಲೆ ಪ್ರಕರಣಕ್ಕೆ ತಿರುಗಿದ್ದು, ತನಿಖೆ ಮುಂದುವರೆದಿದೆ.

ಇದನ್ನೂ ಓದಿ: ಬೈಕ್-ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿ.. ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.