ETV Bharat / state

ಓಲಾ, ಉಬರ್ ಆಟೋ ಸೇವೆ ಬಗ್ಗೆ ನ. 25ರೊಳಗೆ ನಿರ್ಧಾರ: ಹೈಕೋರ್ಟ್​ಗೆ ಸರ್ಕಾರದ ಮಾಹಿತಿ - Ola Uber Auto case in high court

ಓಲಾ, ಉಬರ್ ಸೇವೆಗಳಲ್ಲಿ ಆಟೋಗಳ ಬಳಕೆಗೆ ದರ ನಿಗದಿಗೆ ಕುರಿತಂತೆ ಅಹವಾಲು ಕೇಳಲಾಗಿದೆ. ನವೆಂಬರ್​​ 25ರ ಒಳಗೆ ಈ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.

ola-uber-auto-case-in-high-court
ಓಲಾ, ಉಬರ್ ಆಟೋ ಸೇವೆ ಬಗ್ಗೆ ನ. 25ರೊಳಗೆ ನಿರ್ಧಾರ: ಹೈಕೋರ್ಟ್​ಗೆ ಸರ್ಕಾರದ ಮಾಹಿತಿ
author img

By

Published : Nov 21, 2022, 2:29 PM IST

ಬೆಂಗಳೂರು: ಮೊಬೈಲ್ ಅ್ಯಪ್ ಆಧಾರಿತ ಓಲಾ, ಉಬರ್ ಸೇವೆಗಳಲ್ಲಿ ಆಟೋಗಳ ಬಳಕೆಗೆ ದರ ನಿಗದಿಗೆ ಕುರಿತಂತೆ ಅಹವಾಲು ಕೇಳಲಾಗಿದೆ. ನವೆಂಬರ್​​ 25ರ ಒಳಗಾಗಿ ಈ ಬಗ್ಗೆ ನಿರ್ಧರಿಸಲಾಗುವುದು ಎಂದು ಹೈಕೋರ್ಟ್​​ಗೆ ಸರ್ಕಾರ ಮಾಹಿತಿ ನೀಡಿದೆ.

ಆ್ಯಪ್ ಆಧಾರಿತ ಒಲಾ, ಉಬರ್ ಸಾರಿಗೆ ಸೇವೆಯಲ್ಲಿ ಆಟೋ ರಿಕ್ಷಾಗಳಿಗೆ ನಿರ್ಬಂಧ ವಿಧಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಉಬರ್ ಇಂಡಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಅಲ್ಲದೆ, ದರ ಹೆಚ್ಚಳಕ್ಕೆ ಕೋರಿ ಓಲಾ, ಉಬರ್ ಸಂಸ್ಥೆಗಳು ಮಧ್ಯಂತರ ಅರ್ಜಿ ಸಲ್ಲಿಸಿದ್ದವು.

ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ಸಿ.ಎಂ. ಪೂಣಚ್ಚ ಅವರಿದ್ದ ನ್ಯಾಯಪೀಠಕ್ಕೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅರು ಮಾಹಿತಿ ನೀಡಿದರು. ಅಲ್ಲದೆ, ದರ ನಿಗದಿ ವಿಚಾರದ ಕುರಿತು ಸಂಬಂಧಿಸಿದವರಿಂದ ಅಹವಾಲು ಅಹ್ವಾನಿಸಲಾಗಿದೆ. ದರ ನಿಗದಿ ಬಗ್ಗೆ ಶುಕ್ರವಾರದೊಳಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಹೀಗಾಗಿ ಅಲ್ಲಿಯವರೆಗೂ ಹೆಚ್ಚುವರಿ ಶುಲ್ಕದ ಬಗ್ಗೆ ಮಧ್ಯಂತರ ಆದೇಶ ನೀಡದಂತೆ ಪ್ರಭುಲಿಂಗ ನಾವದಗಿ ಅವರು ಮನವಿ ಮಾಡಿದರು. ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠವು ವಿಚಾರಣೆಯನ್ನು ನವೆಂಬರ್​ 28ಕ್ಕೆ ಮುಂದೂಡಿದೆ.

ಇದನ್ನೂ ಓದಿ: ಮುಸ್ಲಿಂ ವೈಯಕ್ತಿಕ ಕಾನೂನು ಪೋಕ್ಸೊ ಕಾಯ್ದೆಯಿಂದ ಹೊರತಾಗಿಲ್ಲ: ಕೇರಳ ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.