ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆ ಸಂಕಷ್ಟಕ್ಕೊಳಗಾದ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗಾಗಿ ಪರಿಹಾರ ಧನದ ಸಂಬಂಧ ಸರ್ಕಾರ ಕೊನೆಗೂ ಅಧಿಕೃತ ಆದೇಶ ಹೊರಡಿಸಿದೆ.
ಸಿಎಂ ಯಡಿಯೂರಪ್ಪ 7.75 ಲಕ್ಷ ಟ್ಯಾಕ್ಸಿ ಹಾಗೂ ಆಟೋ ಚಾಲಕರಿಗೆ ತಲಾ ಐದು ಸಾವಿರ ಪರಿಹಾರ ಧನ ಘೋಷಿಸಿದ್ದರು. ಪರಿಹಾರ ಘೋಷಿಸಿ ಎರಡು ವಾರ ಕಳೆದರೂ ಪರಿಹಾರ ವಿತರಣೆ ಆಗಿಲ್ಲ ಎಂಬ ಕೂಗು ಚಾಲಕರಿಂದ ಹಾಗೂ ಪ್ರತಿಪಕ್ಷಗಳಿಂದ ಕೇಳಿ ಬಂದಿತ್ತು. ಇದೀಗ ಸರ್ಕಾರ ಪರಿಹಾರ ಸಂಬಂಧ ಅಧಿಕೃತ ಆದೇಶ ಹೊರಡಿಸಿದೆ.
ಪರಿಹಾರದ ಷರತ್ತುಗಳು?:
- - ಎಲ್ಲ ಅರ್ಜಿಗಳು ಸೇವಾ ಸಿಂಧು ಪೋರ್ಟಲ್ ಮೂಲಕವೇ ಸ್ವೀಕರಿಸಬೇಕು
- - ಮಾ.23,2020ರಂದು ಡಿಎಲ್ ಹಾಗೂ ಎಫ್ ಸಿ ಹೊಂದಿರುವ ವಾಹನಗಳಿಗೆ ಮಾತ್ರ ಪರಿಹಾರ ಅನ್ವಯ
- - ಆಧಾರ್ ಕಾರ್ಡ್, ಡಿಎಲ್ ಮತ್ತು ವಾಹನ ನೋಂದಣಿ ಸಂಖ್ಯೆ ಕಡ್ಡಾಯ
- - ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಮಾತ್ರ ಪರಿಹಾರ ಅನ್ವಯ. ಮ್ಯಾಕ್ಸಿ ಕ್ಯಾಬ್ಗಳಿಗೆ ಅನ್ವಯಿಸುವುದಿಲ್ಲ
- - ಫಲಾನುಭವಿ ಚಾಲಕರ ಖಾತೆಗೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ ಫರ್ ಮೂಲಕ ಪರಿಹಾರ ಧನ ಜಮೆ
- - ಡಬಲ್ ಪೇಮೆಂಟ್ ಆಗದಂತೆ ನಿಗಾ ವಹಿಸಬೇಕು
- - ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ಇಲ್ಲ