ಬೆಂಗಳೂರು: ರಾಜ್ಯದ ಪೊಲೀಸರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ವಿವಿಧ ವರ್ಗಗಳ ವೇತನ ಶ್ರೇಣಿಯನ್ನು ಮೇಲ್ದರ್ಜೆಗೇರಿಸಿದೆ. ಪರಿಷ್ಕೃತ ವೇತನ ಆಗಸ್ಟ್ನಿಂದಲೇ ಅನ್ವಯವಾಗುವಂತೆ ಅಧಿಕೃತ ಆದೇಶ ಹೊರಡಿಸಲಾಗಿದೆ.
ಇದೇ ತಿಂಗಳಲ್ಲಿ ಪರಿಷ್ಕೃತ ವೇತನ ಆದೇಶ ಜಾರಿಗೆ ಬರಲಿದೆ. ಈ ಮೂಲಕ ಪೊಲೀಸರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಹಾಗಾದರೆ ಯಾರಿಗೆ ಎಷ್ಟು ವೇತನ ಸಿಗಲಿದೆ ಎಂಬ ಮಾಹಿತಿ ಇಲ್ಲಿದೆ.
ಯಾರಿಗೆ ಎಷ್ಟು ವೇತನ?
- ಕಾನ್ಸ್ಟೇಬಲ್ ಅಥವಾ ರಿಸರ್ವ್ ಕಾನ್ಸ್ಟೇಬಲ್ - 23,500ದಿಂದ 47,650 ರೂ.
- ಹೆಡ್ ಕಾನ್ಸ್ಟೇಬಲ್ - 27,650ದಿಂದ 52,650 ರೂ.
- ಸಹಾಯಕ ಸಬ್ ಇನ್ಸ್ಪೆಕ್ಟರ್ - 30,350ದಿಂದ 58,250 ರೂ.
- ಪೊಲೀಸ್ ಇನ್ಸ್ಪೆಕ್ಟರ್ - 43,100ದಿಂದ 83,900 ರೂ.
- ಎಸ್ಪಿ - 70,850ದಿಂದ 1,07,100 ರೂ.