ETV Bharat / state

ದಸರಾ ಉದ್ಘಾಟಕರಾಗಿ ಎಸ್ ಎಂ ಕೃಷ್ಣಗೆ ಅಧಿಕೃತ ಆಹ್ವಾನ ನೀಡಿದ ಸಿಎಂ ಬೊಮ್ಮಾಯಿ.. - ನಾಡಹಬ್ಬ ದಸರಾ ಉದ್ಘಾಟನೆ

ಮೈಸೂರಿನ ಮಹಾರಾಜ ಕಾಲೇಜು, ಒಂಟಿಕೊಪ್ಪಲಿನಲ್ಲಿ ಕಳೆದ ಕ್ಷಣಗಳನ್ನು ಎಸ್‌ಎಂಕೆ ಸ್ಮರಿಸಿದರು. ನನ್ನ ವ್ಯಕ್ತಿತ್ವದ ಪೋಷಣೆಗೆ, ವ್ಯಕ್ತಿತ್ವ ರೂಪಿಸಲು ಮೈಸೂರು ಮತ್ತು ರಾಮಕೃಷ್ಣ ಆಶ್ರಮ ಬಹಳ ಸಹಕಾರಿಯಾಗಿವೆ. ದಸರಾ ಉದ್ಘಾಟನೆಯ ಸುಯೋಗ ನನಗೆ ನೀಡಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ದಸರಾ ಉದ್ಘಾಟನೆಗೆ ಅವಕಾಶ ಕೊಟ್ಟ ಬೊಮ್ಮಾಯಿ ಅವರಿಗೆ ನಾನು ಚಿರಋಣಿ..

ಎಸ್.ಎಂ.ಕೃಷ್ಣಗೆ ಅಧಿಕೃತ ಆಹ್ವಾನ ನೀಡಿದ ಸಿಎಂ ಬೊಮ್ಮಾಯಿ

author img

By

Published : Oct 2, 2021, 3:11 PM IST

ಬೆಂಗಳೂರು : ನಾಡಹಬ್ಬ ದಸರಾ ಉದ್ಘಾಟನೆಗೆ ಮಾಜಿ ಸಿಎಂ ಎಸ್‌ ಎಂ ಕೃಷ್ಣ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅಧಿಕೃತ ಆಹ್ವಾನ ನೀಡಿದರು. ಸದಾಶಿವನಗರದ ಎಸ್‌ಎಂಕೆ ಅವರ ನಿವಾಸಕ್ಕೆ ತೆರಳಿ ಆಹ್ವಾನ ನೀಡಿದರು.

ಈ ವೇಳೆ ಮೈಸೂರು ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್, ಸಚಿವ ಆರ್ ಅಶೋಕ್, ಸಂಸದ ಪ್ರತಾಪ್ ಸಿಂಹ, ಮೈಸೂರು ಮೇಯರ್ ಹಾಗೂ ಮೈಸೂರು ಜಿಲ್ಲಾಧಿಕಾರಿ ಉಪಸ್ಥಿತರಿದ್ದರು. ಈ ವೇಳೆ ಎಸ್ ಎಂ ಕೃಷ್ಣಗೆ ಶಾಲು ಹೊದಿಸಿ, ಮೈಸೂರು ಪೇಟಾ ತೊಡಿಸಿ ಸನ್ಮಾನಿಸಲಾಯಿತು.

ಬಳಿಕ ಮಾತನಾಡಿದ ಸಿಎಂ, ಎಸ್ ಎಂ ಕೃಷ್ಣ ನಾಡಿನ ಶ್ರೇಷ್ಠ ನಾಯಕ. ನಾಡಿಗೆ ಹಲವಾರು ಯೋಜನೆಗಳನ್ನ ಕೊಟ್ಟ ನಾಯಕರಾಗಿದ್ದಾರೆ. ಸರ್ವಸಮ್ಮತದಿಂದ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಲಾಗಿದೆ. ಈಗ ಅಧಿಕೃತವಾಗಿ ನಾವು ದಸರಾ ಉದ್ಘಾಟನೆಗೆ ಆಹ್ವಾನ ನೀಡಿದ್ದೇವೆ. ಅವರು ಸಹ ಸಂತೋಷದಿಂದ ದಸರಾ ಉದ್ಘಾಟನೆಗೆ ಒಪ್ಪಿದ್ದಾರೆ. ಅದಕ್ಕೆ ನಾನು ಆಭಾರಿಯಾಗಿರುತ್ತೇನೆ‌ ಎಂದರು.

ದಸರಾ ಉದ್ಘಾಟಿಸಲು ಎಸ್ ಎಂ ಕೃಷ್ಣಗೆ ಅಧಿಕೃತ ಆಹ್ವಾನ ನೀಡಿದ ಸಿಎಂ ಬೊಮ್ಮಾಯಿ..

ಬಳಿಕ ಮಾತನಾಡಿದ ಎಸ್ ಎಂ ಕೃಷ್ಣ, ನಮ್ಮ ಯೋಗ್ಯತೆಗೂ ಮೀರಿ ನನ್ನ ಮೇಲೆ ಜವಾಬ್ದಾರಿ ಹೊರಿಸಿದ್ದಾರೆ. ನಾಡಹಬ್ಬ ನಾಡ ದೇವತೆಯ ಆಶೀರ್ವಾದದಿಂದ ಈಗತಾನೆ ಅಧಿಕಾರಿವಹಿಸಿಕೊಂಡಿರುವ ಬೊಮ್ಮಾಯಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬೇರೆ ರಾಜ್ಯಗಳಿಗಿಂತಲೂ ಉತ್ತಮವಾಗಿ ರಾಜ್ಯವನ್ನು ಕೊಂಡೊಯ್ಯಲಿ ಅಂತಾ ಹರಸುತ್ತೇನೆ ಎಂದರು.

ಇದೇ ವೇಳೆ ಮೈಸೂರಿನಲ್ಲಿ ಕಳೆದ ದಿನಗಳನ್ನ ನೆನಸಿಕೊಂಡ ಎಸ್ಎಂಕೆ, ಮಹಾರಾಜ ಕಾಲೇಜು, ಒಂಟಿಕೊಪ್ಪಲಿನಲ್ಲಿ ಕಳೆದ ಕ್ಷಣಗಳನ್ನು ಸ್ಮರಿಸಿದರು. ಮೈಸೂರು ಮತ್ತು ರಾಮಕೃಷ್ಣ ಆಶ್ರಮ ನನ್ನ ಏಳಿಗೆ ಮೇಲೆ ಪರಿಣಾಮ ಬೀರಿದೆ.

ನನ್ನ ವ್ಯಕ್ತಿತ್ವದ ಪೋಷಣೆಗೆ, ವ್ಯಕ್ತಿತ್ವ ರೂಪಿಸಲು ಮೈಸೂರು ಮತ್ತು ರಾಮಕೃಷ್ಣ ಆಶ್ರಮ ಬಹಳ ಸಹಕಾರಿಯಾಗಿವೆ. ದಸರಾ ಉದ್ಘಾಟನೆಯ ಸುಯೋಗ ನನಗೆ ನೀಡಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ದಸರಾ ಉದ್ಘಾಟನೆಗೆ ಅವಕಾಶ ಕೊಟ್ಟ ಬೊಮ್ಮಾಯಿ ಅವರಿಗೆ ನಾನು ಚಿರಋಣಿ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.