ETV Bharat / state

ಜೈಲಿಗೆ ಬಂದಿದ್ದ ಕೊರಿಯರ್​​ನಲ್ಲಿತ್ತು ಡ್ರಗ್ಸ್​.. ಬಾಂಬ್ ಸ್ಫೋಟದ ಅಪರಾಧಿಗೆ ಕೇರಳದಿಂದ ಬಂತು ಮಾದಕ ದ್ರವ್ಯ

author img

By

Published : Apr 10, 2021, 5:09 PM IST

ಪರಪ್ಪನ ಅಗ್ರಹಾರಕ್ಕೆ ಕೇರಳದಿಂದ ಬಂದಿದ್ದ ಕೊರಿಯರ್​ ಕಂಡು ಅನುಮಾನಗೊಂಡ ಪೊಲೀಸರು ಅದನ್ನು ತೆರದು ನೋಡಿದ್ದಾರೆ. ಈ ವೇಳೆ ಅದರಲ್ಲಿ ಡ್ರಗ್ಸ್ ಇರುವುದು ಕಂಡು ಬಂದಿದೆ.

official-find-out-transmission-of-drugs-to-parappana-agrahara-from-kerala
ಪರಪ್ಪನ ಅಗ್ರಹಾರ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದ ಪಾರ್ಸೆಲ್​​ ಕಂಡು ಅನುಮಾನಗೊಂಡು ತೆಗೆದು ನೋಡಿದಾಗ ಡ್ರಗ್ಸ್ ಇರುವುದು ಪತ್ತೆಯಾಗಿದೆ. ಮಡಿವಾಳ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ಮುಜೀಬ್ ಎಂಬಾತನಿಗೆ ಈ ಕೊರಿಯರ್ ಬಂದಿತ್ತು.

ಪಾರ್ಸೆಲ್ ಕಂಡು ಅನುಮಾನಗೊಂಡ ಜೈಲಾಧಿಕಾರಿಗಳು ತೆರೆದು ನೋಡಿದಾಗ ಒಳಗೆ ಹೆರಾಯಿನ್ ರೀತಿಯ ಡ್ರಗ್ಸ್ ಇರುವುದು ಪತ್ತೆಯಾಗಿದೆ. ಕೇರಳದ ಕಣ್ಣೂರಿನಿಂದ ಜಿನೇಬ್ ಎಂಬಾತ ಈ ಕೊರಿಯರ್ ಕಳುಹಿಸಿರುವುದು ತಿಳಿದುಬಂದಿದೆ.

ಸದ್ಯ ಕೊರಿಯರ್​ನಲ್ಲಿ ಸಿಕ್ಕ ಡ್ರಗ್ಸ್​​ ಅನ್ನು ಲ್ಯಾಬ್​​ಗೆ ಕಳುಹಿಸಲಾಗಿದ್ದು, ಜಿನೇಬ್ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.