ಬೆಂಗಳೂರು: ಸಮಾಜವನ್ನು ರಕ್ಷಿಸಲು ಕರ್ತವ್ಯದಲ್ಲಿ ನಿರತರಾಗಬೇಕಾದ ಖಾಕಿ ಸದ್ಯ ಕುರ್ಚಿಗಾಗಿ ಹಾವು ಏಣಿ ಆಟ ಆಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಹೆಚ್ಎಸ್ಆರ್ ಠಾಣೆಯಿಂದ ಪರಪ್ಪನ ಅಗ್ರಹಾರ ಠಾಣೆಗೆ ಇನ್ಸ್ಪೆಕ್ಟರ್ ರಾಘವೇಂದ್ರ ಅವರನ್ನ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಗೃಹ ಇಲಾಖೆ ನಿಯಮದ ಪ್ರಕಾರ ವರ್ಗಾವಣೆ ಮಾಡಿದ್ದರು. ಆದರೆ, ಅದೇ ಠಾಣೆಯಲ್ಲಿದ್ದ ನಂದೀಶ್ ಅವರನ್ನ ಬೇರೆ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಇಬ್ಬರು ಇನ್ಸ್ಪೆಕ್ಟರ್ಗಳ ಮಧ್ಯೆ ಶಾಸಕರಿಬ್ಬರು ಮಧ್ಯೆ ಪ್ರವೇಶ ಮಾಡಿ ಒಂದು ಪೋಸ್ಟ್‌ಗೆ ಇಬ್ಬರು ಇನ್ಸ್ಪೆಕ್ಟರ್ಗಳು ಪೈಪೋಟಿ ಶುರು ಮಾಡಿದ್ದಾರೆ.
ಬೆಂಗಳೂರು ದಕ್ಷಿಣದ ಶಾಸಕ ಕೃಷ್ಣಪ್ಪ ಮತ್ತು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ನಡುವಿನ ಪ್ರತಿಷ್ಠೆಯ ಕೇಂದ್ರವಾಗಿದೆ ಪರಪ್ಪನ ಅಗ್ರಹಾರ ಠಾಣೆ. ಹೀಗಾಗಿ ಸದ್ಯ ಕಳೆದ ತಿಂಗಳು ಪರಪ್ಪನ ಅಗ್ರಹಾರ ಠಾಣೆ ಇನ್ಸ್ಪೆಕ್ಟರ್ ಆಗಿ ರಾಘವೇಂದ್ರ ಚಾರ್ಜ್ ತೆಗೆದುಕೊಂಡಿದ್ರು. ಇದನ್ನ ಫೇಸ್ಬುಕ್ ನಲ್ಲಿ ಕೂಡ ಪೊಸ್ಟ್ ಮಾಡಿದ್ರು. ಇನ್ನು ರಾಘವೇಂದ್ರ ಅವರು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಆತ್ಮೀಯರಾದ ಕಾರಣ ಇನ್ಸ್ಪೆಕ್ಟರ್ ನಂದಿಶ್ ಪರ ಬ್ಯಾಟ್ ಬೀಸಲು ಮುಂದಾಗಿ ಕೃಷ್ಣಪ್ಪ ನಂದೀಶ್ ಅವರನ್ನು ಮುಂದುವರೆಸುವಂತೆ ಪತ್ರ ನೀಡಿದ್ದಾರೆ.
ಸದ್ಯ ನಂದೀಶ್ ಅವರೇ ಠಾಣಾಧಿಕಾರಿಯಾಗಿ ಮುಂದುವರಿಕೆಯಾಗಿದ್ದಾರೆ. ಆದರೆ ಇಬ್ಬರೂ ಕೂಡ ಒಂದೇ ಪೋಸ್ಟ್‌ಗೆ ಪೈಪೋಟಿ ಮಾಡಿದ ಕಾರಣ ಸದ್ಯ ಹಿರಿಯಾಧಿಕಾರಿಗಳು ಇದರ ಬಗ್ಗೆ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.