ಬೆಂಗಳೂರು: ಮೈತ್ರಿ ಸರ್ಕಾರ ಪತನದೊಂದಿಗೆ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಬಿಜೆಪಿ ಸರ್ಕಾರದ ಸಂಪುಟ ಇಂದು ರಚನೆಯಾಗಿದೆ. ಸಚಿವರ ಪ್ರಮಾಣ ವಚನ ಸ್ವೀಕಾರದ ವೇಳೆ ಚೊಚ್ಚಲ ಬಾರಿಗೆ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾಧುಸ್ವಾಮಿ, ಬಾಯ್ತಪ್ಪಿ ಆಡಿದ ಮಾತು ನೆರೆದಿದ್ದವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ.
ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಮಾಧುಸ್ವಾಮಿ ಪ್ರಮಾಣ ವಚನ ಸ್ವೀಕಾರದ ವೇಳೆ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ ಎನ್ನುವ ಬದಲು ಮುಖ್ಯಮಂತ್ರಿಯಾಗಿ ಎಂದು ಹೇಳಿದ್ದು ಅಚ್ಚರಿ ಹಾಗೂ ನಗುವಿಗೆ ಕಾರಣವಾಯಿತು.
ಬಿಜೆಪಿಯಿಂದ ಮೊದಲ ಬಾರಿ ಗೆದ್ದು ಸಚಿವರಾದ ಮಾಧುಸ್ವಾಮಿ
ಬಾಯ್ತಿಪ್ಪಿ ಆಡಿದ ಮಾತಿನಿಂದ ಕೊಂಚ ಕಸಿವಿಸಿಗೊಂಡ ಮಾಧುಸ್ವಾಮಿ ತಕ್ಷಣವೇ ಸಾವರಿಸಿಕೊಂಡು ಪ್ರಮಾಣ ವಚನ ಸ್ವೀಕಾರವನ್ನು ಮುಂದುವರೆಸಿದರು.