ETV Bharat / state

ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಡಿ.17ರಂದು ಬಂದ್‌ ಕರೆ:ಎನ್‌ಎಸ್‌ಯುಐ - ನೂತನ ರಾಷ್ಟ್ರೀಯ ಶಿಕ್ಷಣ ನೀತಿ

ರಾಜ್ಯದ ಎಲ್ಲ ವಿದ್ಯಾರ್ಥಿಗಳ ಅಭಿಪ್ರಾಯ ಪಡೆದು ಡಿ.17ರಂದು ರಾಜ್ಯ ಮಟ್ಟದ ಬಂದ್‌ಗೆ ಕರೆ ನೀಡಲಾಗುತ್ತಿದೆ- ಎನ್‌ಎಸ್‌​ಯುಐ.

ಎನ್ಎಸ್​ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್
ಎನ್ಎಸ್​ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್
author img

By

Published : Dec 5, 2022, 8:38 PM IST

ಬೆಂಗಳೂರು: ವಿದ್ಯಾರ್ಥಿ ವೇತನ, ಸಾರಿಗೆ ವ್ಯವಸ್ಥೆ, ಫಲಿತಾಂಶ ವಿಳಂಬ, ಉಚಿತ ಬಸ್ ಪಾಸ್ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ. 17ರಂದು ರಾಜ್ಯ ಮಟ್ಟದ ಬಂದ್‌ಗೆ ವಿದ್ಯಾರ್ಥಿಗಳು ಕರೆ ನೀಡಿದ್ದು, ಈ ಹೋರಾಟಕ್ಕೆ ಎನ್ಎಸ್​ಯುಐ ನೇತೃತ್ವ ವಹಿಸುತ್ತಿದೆ ಎಂದು ಎನ್ಎಸ್​ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ತಿಳಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಅವರು, ನಾಡಿನ ಪ್ರಗತಿಗೆ ಮುಖ್ಯವಾದುದು ವಿದ್ಯಾರ್ಥಿಗಳು ಹಾಗೂ ಅವರಿಗೆ ಶಿಕ್ಷಣ ನೀಡುವುದಾಗಿದೆ. ಇಂದು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡದಂತೆ ಸರ್ಕಾರ ನೀತಿ ರೂಪಿಸುತ್ತಿವೆ. ಹಿಂದೆಲ್ಲ ಸರ್ಕಾರಗಳು ವಿದ್ಯಾರ್ಥಿಗಳು ಓದಬೇಕು ಎಂದು ವಿದ್ಯಾರ್ಥಿ ವೇತನ, ಬ್ಯಾಂಕ್ ಸಾಲ, ಸಾರಿಗೆ ವ್ಯವಸ್ಥೆ, ಬಸ್ ಪಾಸ್ ನೀಡುತ್ತಿದ್ದವು. ಆದರೆ ಇಂದು ವಿದ್ಯಾಭ್ಯಾಸ ಆಗದಂತೆ ಮಾಡುತ್ತಿದ್ದಾರೆ.

ಈ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸರ್ಕಾರ, ವಿವಿಗಳಿಂದ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಹೀಗಾಗಿ ರಾಜ್ಯದ ಎಲ್ಲ ವಿದ್ಯಾರ್ಥಿಗಳ ಅಭಿಪ್ರಾಯ ಪಡೆದು ಡಿ.17ರಂದು ರಾಜ್ಯ ಮಟ್ಟದ ಬಂದ್‌ಗೆ ಕರೆ ನೀಡಲಾಗುತ್ತಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳ ಆಕ್ರೋಶ ಮತ್ತಷ್ಟು ಹೆಚ್ಚಲಿದೆ ಎಂದರು.

ಇದನ್ನೂ ಓದಿ: ರಾಗ ಜನ್ಮದಿನ ಅಂಗವಾಗಿ ಎನ್ಎಸ್​ಯುಐ ನಿಂದ ಹಣ್ಣು ವಿತರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.