ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಿಎ ಸಂತೋಷ್ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ದಾಖಲಾಗಿದೆ. ಸದ್ಯ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತೋಷ್ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣಗಳ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ನೆಡದ ವಿದ್ಯುತ್ ದರ, ಆಸ್ತಿ ತೆರಿಗೆ ಹೆಚ್ಚಳ ಹಾಗೂ ಇತರ ವಸ್ತುಗಳ ದರ ಏರಿಕೆಯ ವಿರುದ್ಧ ಇಂದು ನೆಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮತನಾಡಿ, ಮುಖ್ಯಮಂತ್ರಿಗಳ ಪಿಎ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದರ ಹಿಂದೆ ಬೇರೆಯೇ ವಿಚಾರಗಳಿವೆ. ಹಾಗಾಗಿ ಈ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಇದೊಂದು ಗಂಭೀರ ಪ್ರಕರಣ. ಮುಖ್ಯಮಂತ್ರಿಗಳ ಪಿಎ ಸಂತೋಷ್ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾರೆ. ಇದರ ಬಗ್ಗೆ ಈಗಾಗಲೇ ಎಸ್ಐಟಿ ತನಿಖೆ ಆಗಬೇಕು ಅಂತ ಸರ್ಕಾರಕ್ಕೆ ಒತ್ತಾಯ ಮಾಡಿದ್ದೇವೆ. ಈ ಬಗ್ಗೆ ಬೇರೆ ಬೇರೆ ವಿಶ್ಲೇಷಣೆ ನೆಡೆಯುತ್ತಿದೆ. ಅವರ ಬಳಿ ಒಂದು ಸಿಡಿ ಇದೆ, ಕೆಲವು ವಿಡಿಯೋಗಳು ಅವರ ಬಳಿ ಇವೆ ಅಂತ ಹೇಳುತ್ತಾರೆ. ಇದರ ಬಗ್ಗೆ ರಾಜ್ಯದ ಜನತೆಗೆ ಗೊತ್ತಾಗಬೇಕು. ಸಂತೋಷ್ ಒಬ್ಬ ಸಾಮಾನ್ಯ ವ್ಯಕ್ತಿಯಲ್ಲ. ಅವರು ಒಬ್ಬ ಮುಖ್ಯಮಂತ್ರಿಯ ಪಿಎ. ಈ ಹಿನ್ನೆಲೆ ಯಾವುದೋ ಷಡ್ಯಂತ್ರ ಇದೆ. ಅದು ಹೊರಗೆ ಬರಬೇಕಿದ್ದು, ಈ ರಾಜ್ಯದ ಜನತೆಗೆ ಗೊತ್ತಾಗಬೇಕು. ಈ ಹಿನ್ನೆಲೆಯಲ್ಲಿ ತನಿಖೆಯಾಗಬೇಕಿದೆ. ನಾಲ್ಕೈದು ದಿನದಿಂದ ಯಾವ ರೀತಿ ಘಟನೆಗಳು ನಡೆಯುತ್ತಿದೆ ಎಂದು ನೋಡುತ್ತಿದ್ದೇವೆ. ಮಂತ್ರಿ ಮಂಡಲ ಇರಬಹುದು, ನಿಗಮ ಮಂಡಳಿ ನೇಮಕಾತಿ ಇರಬಹುದು. ಈ ದೃಷ್ಟಿಯಿಂದ ಇದೊಂದು ಗಂಭೀರ ಆರೋಪವಾಗಿದ್ದು, ಎಸ್ಐಟಿ ರಚಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.
"ಬೇರೆ ಬೇರೆ ಮೂಲಗಳಿಂದ ನಮಗೂ ಮಾಹಿತಿ ಇದೆ. ಯಾರೋ ಸಂತೋಷ್ಗೆ ವಿಡಿಯೋ ಸಿಡಿ ಇಟ್ಟುಕೊಂಡು ಬೆದರಿಕೆ ಹಾಕಿದ್ದಾರೆ. ಇವತ್ತು ಏನು ಮಂತ್ರಿ ಮಂಡಲ ಮಾಡೋಕೆ ಹೊರಟಿದ್ದಾರೆ ದೆಹಲಿಯಲ್ಲಿ ಕೆಲವು ಶಾಸಕರು ಸಿಎಂಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇವೆಲ್ಲ ಅವರ ಆಂತರಿಕ ವಿಚಾರವಾದರೂ ಸಂತೋಷ್ ಅವರದು ಗಂಭೀರ ಪ್ರಕರಣವಾಗಿದ್ದು, ತನಿಖೆ ಆಗಲೇಬೇಕೆಂದು ಒತ್ತಾಯ ಮಾಡುತ್ತೇವೆ" ಎಂದರು.