ETV Bharat / state

ಆಪರೇಷನ್​ ಕಮಲದ ರೂವಾರಿ ಎನ್.ಆರ್. ಸಂತೋಷ್​​ಗೆ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ! - ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ

'ಆಪರೇಷನ್‌ ಕಮಲ'ದ ರೂವಾರಿ ಎನ್. ಆರ್ ಸಂತೋಷ್ ಅವರನ್ನು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಕಗೊಳಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

NR Santosh
ಎನ್.ಆರ್.ಸಂತೋಷ್
author img

By

Published : May 30, 2020, 5:58 PM IST

ಬೆಂಗಳೂರು: ಎನ್.ಆರ್. ಸಂತೋಷ್ ಅವರನ್ನು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಕಗೊಳಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಆಪರೇಷನ್ ಕಮಲದ ವೇಳೆ ಎನ್.ಆರ್. ಸಂತೋಷ್ ಪ್ರಮುಖ ಪಾತ್ರ ವಹಿಸಿದ್ದರು. ಬಿಜೆಪಿ ಸರ್ಕಾರ ರಚನೆ ಮುನ್ನ ಸಂತೋಷ್ ಅವರು, ಬಿ.ಎಸ್. ಯಡಿಯೂರಪ್ಪ ಅವರರ ಆಪ್ತ ಸಹಾಯಕರಾಗಿದ್ದರು. ಬಳಿಕ ಸಿಎಂ ಯಡಿಯೂರಪ್ಪ ಅವರಿಂದ ವೈಯಕ್ತಿಕ ಕಾರಣಗಳಿಂದಾಗಿ ದೂರ ಉಳಿದಿದ್ದರು.

NR Santosh
ಸರ್ಕಾರದ ಅಧಿಸೂಚನೆ ಪತ್ರ

ಇದೀಗ ಸಂತೋಷ್ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದ್ದು, ಈ ಹಠಾತ್ ನೇಮಕ ಬಿಜೆಪಿ ಹಿರಿಯ ಶಾಸಕರ ಅತೃಪ್ತಿಗೂ ಕಾರಣವಾಗಿದೆ ಎನ್ನಲಾಗ್ತಿದೆ. ಆಪರೇಷನ್‌ ಕಮಲದಲ್ಲಿ ಪ್ರಮುಖ ಪಾತ್ರ ವಹಸಿದ್ದ ಎನ್.ಆರ್. ಸಂತೋಷ್ ರನ್ನು ಇದೀಗ ಸಿಎಂ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಿಸಿರುವುದು ಅಚ್ಚರಿ ಮೂಡಿಸಿದೆ. ಸಂತೋಷ್ ಅವರು ಸಿಎಂ ಯಡಿಯೂರಪ್ಪರ ಸಂಬಂಧಿ ಕೂಡ ಆಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.