ETV Bharat / state

ಅಧ್ಯಯನದಲ್ಲಿ ನಿರತರಾದ ದೇವೇಗೌಡರು... ರಾಜಕೀಯಕ್ಕೆ ಕೊಟ್ಟರಾ ಅಲ್ಪ ವಿರಾಮ!?

ದೇವೇಗೌಡರು ಧರ್ಮಪತ್ನಿ ಚೆನ್ನಮ್ಮ ಅವರೊಂದಿಗೆ ಸೇರಿ ದೇವರ ಪೂಜೆ, ದಿನನಿತ್ಯ ಪ್ರಸಾರವಾಗುವ ಐತಿಹಾಸಿಕ ಧಾರಾವಾಹಿಗಳ ವೀಕ್ಷಣೆ ಮಾಡುತ್ತಿದ್ದಾರೆ. ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಗಾಧ ಜ್ಞಾನ ಹೊಂದಿರುವ ಅವರು, ಪುಸ್ತಕಗಳನ್ನು ಓದುದರಲ್ಲಿ ತಲ್ಲೀನರಾಗಿದ್ದಾರೆ.

Nowadays Devegowda who maintains the distance from party
ರಾಜಕೀಯಕ್ಕೆ ಅಲ್ಪ ವಿರಾಮ ಕೊಟ್ಟರಾ ಗೌಡರು
author img

By

Published : Dec 4, 2020, 8:18 PM IST

ಬೆಂಗಳೂರು: ನಿತ್ಯ ಯೋಗಾಸನ, ದೇವರ ಪೂಜೆ, ಐತಿಹಾಸಿಕ ಧಾರಾವಾಹಿಗಳ ವೀಕ್ಷಣೆ, ಪುಸ್ತಕಗಳನ್ನು ಓದುವ ಮೂಲಕ ದಿನ ಕಳೆಯುತ್ತಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು, ರಾಜಕೀಯಕ್ಕೆ ಅಲ್ಪ ವಿರಾಮ ಕೊಟ್ಟಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ.

ಶಿರಾ ಉಪಚುನಾವಣೆ ಸಂದರ್ಭದಲ್ಲಿ ಸತತ ಒಂದು ವಾರ ಅಲ್ಲಿ ವಾಸ್ತವ್ಯ ಹೂಡಿದ್ದ ಗೌಡರು, ಉಪಚುನಾವಣೆಗೆ ನಿರಂತರವಾಗಿ ಕ್ಷೇತ್ರ ಪರ್ಯಟನೆ ಮಾಡಿ ಬಂದಿದ್ದರು. ನಂತರ ಎಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಪಕ್ಷಕ್ಕೆ ಎರಡು ಉಪಚುನಾವಣೆ ಹಾಗೂ ನಾಲ್ಕು ವಿಧಾನ ಪರಿಷತ್ ಸ್ಥಾನಗಳಲ್ಲಿ ಸೋಲುಂಟಾಯಿತು. ಇದರಿಂದ ಸ್ವಲ್ಪ ಮಟ್ಟಿಗೆ ಬೇಸರಗೊಂಡಿದ್ದ ದೇವೇಗೌಡರು ಹೊರಗೆ ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ.

ಬರಾಕ್ ಒಬಾಮಾರ ಪುಸ್ತಕ
ಬರಾಕ್ ಒಬಾಮರ ಪುಸ್ತಕ

ಇತ್ತೀಚೆಗೆ ಪಕ್ಷದ ವತಿಯಿಂದ ಜೆಪಿ ಭವನದಲ್ಲಿ ಸೋಲಿನ ಪರಾಮರ್ಶೆ ಸಭೆ ನಡೆಸಲಾಯಿತು. ಆ ಸಭೆಯಲ್ಲಿ ಪಾಲ್ಗೊಳ್ಳದೆ ಅಂತರ ಕಾಯ್ದುಕೊಂಡಿದ್ದರು. ಪಕ್ಷದ ಯಾವುದೇ ಸಭೆ ಸಮಾರಂಭಗಳಿದ್ದರೂ ತಪ್ಪದೇ ಹಾಜರಿರುತ್ತಿದ್ದ ಗೌಡರ ನಡೆ ಮಾತ್ರ ನಿಗೂಢವಾಗಿದೆ.

ಪುಸ್ತಕ ಓದುವುದರಲ್ಲಿ ತಲ್ಲೀನರಾಗಿರುವ ದೇವೇಗೌಡರು

ಅಧ್ಯಯನದಲ್ಲಿ ತಲ್ಲೀನ:

ರಾಜ್ಯದಲ್ಲಿ ಕೊರೊನಾ ಸೋಂಕು ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸದ್ಯ ಪದ್ಮನಾಭನಗರದ ತಮ್ಮ ನಿವಾಸದಲ್ಲಿರುವ ದೇವೇಗೌಡರು, ಮೊದಲಿನಿಂದಲೂ ವ್ಯಾಯಾಮಗಳಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಹಾಗಾಗಿ ಅವರು ಪ್ರತಿದಿನ ಯೋಗಾಸನದಿಂದ ತಮ್ಮ ದಿನಚರಿ ಆರಂಭಿಸುತ್ತಿದ್ದಾರೆ.

ಧರ್ಮಪತ್ನಿ ಚೆನ್ನಮ್ಮ ಅವರೊಂದಿಗೆ ಸೇರಿ ದೇವರ ಪೂಜೆ, ದಿನನಿತ್ಯ ಪ್ರಸಾರವಾಗುವ ಐತಿಹಾಸಿಕ ಧಾರಾವಾಹಿಗಳ ವೀಕ್ಷಣೆ ಮಾಡುತ್ತಿದ್ದಾರೆ. ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಗಾಧ ಜ್ಞಾನ ಹೊಂದಿರುವ ಅವರು, ಪುಸ್ತಕಗಳನ್ನು ಓದುದರಲ್ಲಿ ತಲ್ಲೀನರಾಗಿದ್ದಾರೆ.

ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ A PROMISED LAND, ಶಿವಪುರಾಣ, ಶ್ರೀರಾಮ ಕಥಾ ಮಂಜರಿ, ದತ್ತಾತ್ರೇಯ ಸೇರಿದಂತೆ ಹಲವು ಪುಸ್ತಕಗಳ ಅಧ್ಯಯನದಲ್ಲಿ ತೊಡಗಿದ್ದಾರೆ. ಇನ್ನೂ ಕೆಲವು ಐತಿಹಾಸಿಕ ಕೃತಿಗಳ ಅಧ್ಯಯನವನ್ನೂ ನಡೆಸುತ್ತಿದ್ದಾರೆ. ಇಂದಿಗೂ ಸತತ 3ರಿಂದ 4 ಗಂಟೆಗಳ ಕಾಲ ವಿವಿಧ ವಿಷಯಗಳನ್ನು ಓದುತ್ತಿರುವ ಅವರು, ತಮ್ಮ 87ನೇ ವಯಸ್ಸಿನಲ್ಲೂ ಕೂಡ ಭಾರೀ ಆಕ್ಟೀವ್ ಆಗಿದ್ದಾರೆ ಎಂಬುದಕ್ಕೆ ಇದೊಂದು ನಿದರ್ಶನ ಎನ್ನಬಹುದು.

ದೇಶದ ಪ್ರಧಾನಿಯಾದ ಮೊದಲ ಕನ್ನಡಿಗ ಎಂಬ ಖ್ಯಾತಿ ಗಳಿಸಿರುವ ದೇವೇಗೌಡರು, ಪ್ರಾದೇಶಿಕ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಅಪಾರ ರಾಜಕೀಯ ಅನುಭವ ಪಡೆದಿರುವ ಅವರು, ಜ್ಞಾನದಲ್ಲೂ ಹಿಂದೆ ಬಿದ್ದಿಲ್ಲ. ತಮ್ಮನ್ನು ತಾವು ಮತ್ತಷ್ಟು ಸಿದ್ಧಗೊಳಿಸಿಕೊಳ್ಳುತ್ತಿದ್ದಾರೆ ಎಂತಲೇ ಹೇಳಬಹುದು. ರಾಜಕೀಯಕ್ಕೆ ಅಲ್ಪ ವಿರಾಮ ನೀಡಿದ್ದರೂ ಅಥವಾ ನೀಡದಿದ್ದರೂ ಸದಾ ಪಕ್ಷದ ಬಗ್ಗೆ ಅಲೋಚನೆ ಮಾಡುವ ಗೌಡರಿಗೆ ಪಕ್ಷ ಸಂಘಟನೆಯ ತುಡಿತ ಮಾತ್ರ ಕಡಿಮೆಯಾಗಿಲ್ಲ. ಅವರು ಪಕ್ಷದ ವೇದಿಕೆಯಲ್ಲಿ ಯಾವಾಗಲೂ ಪಕ್ಷ ಸಂಘಟನೆ ಬಗ್ಗೆ ಕನವರಿಸುತ್ತಲೇ ಇರುತ್ತಾರೆ. ಹಾಗಾಗಿ ಕೆಲವೇ ದಿನಗಳಲ್ಲಿ ಮತ್ತೆ ಸಕ್ರಿಯರಾಗಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.