ETV Bharat / state

ವ್ಯಾಕ್ಸಿನ್‌ಗಾಗಿ ಹಾಹಾಕಾರ.. ನಗರದ ಆಸ್ಪತ್ರೆಗಳ ಮುಂದೆ ನೋವ್ಯಾಕ್ಸಿನ್ ಬೋರ್ಡ್‌.. - ಕೋವಿಶೀಲ್ಡ್ ವ್ಯಾಕ್ಸಿನೇಷನ್‌

ಮೊದಲನೇ ಡೋಸ್ ಹಾಕಿಸಿಕೊಳ್ಳಲು ಒಂದೆಡೆ ಜನರು ಪೇಚಾಡುತ್ತಿದ್ದರೆ, ಮತ್ತೊಂದೆಡೆ ಎರಡನೇ ಡೋಸ್ ವ್ಯಾಕ್ಸಿನ್ ಹಾಕಿಸಿಕೊಳ್ಳುವವರಿಗೆ ಇನ್ನೊಂದು ರೀತಿಯ ಸಮಸ್ಯೆ ಎದುರಾಗಿದೆ. ಎರಡನೇ ಡೋಸ್ ಹಾಕಿಸಿಕೊಳ್ಳಲು ನೋಂದಣಿ ಮಾಡಿಕೊಂಡವರಿಗೆ ವ್ಯಾಕ್ಸಿನ್ ಇಲ್ಲ ಅಂತ ಅವರವರ ಮೊಬೈಲ್‌ಗೆ ಮೆಸೇಜ್ ಬರುತ್ತಿವೆ..

novaxin-board-found-in-hospitals-bengalore
ವ್ಯಾಕ್ಸಿನ್‌ಗಾಗಿ ಹಾಹಾಕಾರ
author img

By

Published : May 12, 2021, 5:34 PM IST

ಬೆಂಗಳೂರು : ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮೇ 1 ರಿಂದ ಅವಕಾಶ ನೀಡಲಾಗಿದೆ. ಆದರೆ, ರಾಜ್ಯದಲ್ಲಿ ವ್ಯಾಕ್ಸಿನ್ ಅಭಾವ ಸೃಷ್ಡಿಯಾಗಿದ್ದು, ಕೊರೊನಾ ವ್ಯಾಕ್ಸಿನ್‌ಗಾಗಿ ಹಾಹಾಕಾರ ಮುಂದುವರೆದಿದೆ.

ವ್ಯಾಕ್ಸಿನ್‌ಗಾಗಿ ಹಾಹಾಕಾರ..

ಓದಿ: ಕಾಂಗ್ರೆಸ್ ನಾಯಕರಿಂದ ದಿಢೀರ್ ಪ್ರತಿಭಟನೆ; ಉಚಿತ ವ್ಯಾಕ್ಸಿನ್​ ನೀಡುವಂತೆ ಸರ್ಕಾರಕ್ಕೆ ಆಗ್ರಹ

ನಗರದ ಬಹುತೇಕ ಆಸ್ಪತ್ರೆಗಳ ಮುಂದೆ ನೂರಾರು ಜನರು ಕ್ಯೂಗಳಲ್ಲಿ ನಿಂತಿದ್ದಾರೆ. ಆದರೆ, ನಿಗದಿತ ಪ್ರಮಾಣದಲ್ಲಿ ವ್ಯಾಕ್ಸಿನ್ ಮಾತ್ರ ಬರುತ್ತಿಲ್ಲ. ಇನ್ನು, ವ್ಯಾಕ್ಸಿನ್ ಸಿಗದಿದ್ದಕ್ಕೆ ಗಂಟೆಗಟ್ಟಲೆ ಕಾದ ಜನರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆ ಸಿಬ್ಬಂದಿ ವ್ಯಾಕ್ಸಿನ್ ಪೂರೈಕೆ ಕಡಿಮೆ ಇದೆ.

ಆದರಲ್ಲೂ ಕೋವ್ಯಾಕ್ಸಿನ್ ಕಡಿಮೆ ಇದ್ದು, ಖಾಲಿ ಆಗುವವರೆಗೂ ವ್ಯಾಕ್ಸಿನ್ ಕೊಡುತ್ತೇವೆ. ಇನ್ನುಳಿದವರು ನಾಳೆ ಬನ್ನಿ ಎಂದು ಹೇಳಿ ನೆರೆದಿದ್ದವರನ್ನ ವಾಪಸ್ ಕಳುಹಿಸುತ್ತಿದ್ದಾರೆ.

ಒಂದೆಡೆ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಕೇವಲ‌ 50 ಡೋಸ್ ಮಾತ್ರ ಬಂದಿದೆ. ಆದರೆ, ನೂರಾರು ಜನ ಕ್ಯೂ ನಿಂತಿದ್ದಾರೆ. ವ್ಯಾಕ್ಸಿನ್ ವಿಚಾರದಲ್ಲಿ ಸರ್ಕಾರದ ವಿರುದ್ಧ ಸಾರ್ವಜನಿಕರು‌ ಗರಂ ಆಗಿದ್ದಾರೆ.

ಮತ್ತೊಂದೆಡೆ ಇಂದಿರಾನಗರದ ಸಿ.ವಿ. ರಾಮನ್ ಆಸ್ಪತ್ರೆಯಲ್ಲಿ ವ್ಯಾಕ್ಸಿನೇಷನ್‌ಗೆ ಸಾಲಿನಲ್ಲಿ ನಿಂತ ಜನರಿಗೆ ನಿರಾಸೆ ಉಂಟಾಗಿದೆ. ಇಂದು ಕೇವಲ 150 ಜನರಿಗೆ ಮಾತ್ರ ಕೋವಿಶೀಲ್ಡ್ ವ್ಯಾಕ್ಸಿನೇಷನ್‌ ಕೊಡಲಾಗಿದೆ. ಕೋವ್ಯಾಕ್ಸಿನ್ ಡೋಜ್ ಖಾಲಿಯಾಗಿದ್ದು, ಆಸ್ಪತ್ರೆಯ ಮುಂದೆ ಕೋವ್ಯಾಕ್ಸಿನ್ ನೋ ಸ್ಟಾಕ್ ಎಂದು ಬೋರ್ಡ್ ಹಾಕಿದ್ದಾರೆ.

ನಗರದ ಕೆ.ಸಿ.ಜನರಲ್, ಜಯನಗರ ಜನರಲ್ ಆಸ್ಪತ್ರೆ, ಸಿ.ವಿ.ರಾಮನ್ ನಗರ ಆಸ್ಪತ್ರೆ ಸೇರಿದಂತೆ ಹಲವೆಡೆ ವ್ಯಾಕ್ಸಿನ್ ಕೊರತೆ ಕಂಡು ಬಂದಿದೆ. ಎಲ್ಲಾ ಕಡೆ ಕೋವಿಶೀಲ್ಡ್ ಲಸಿಕೆ ಮಾತ್ರ ಲಭ್ಯ, ಕೋವ್ಯಾಕ್ಸಿನ್ ಲಸಿಕೆ ಎಲ್ಲೂ ಸಿಗುತ್ತಿಲ್ಲ. ಬಹುತೇಕ ಆಸ್ಪತ್ರೆಗಳ ಎದುರು Covaxin is not available ಮತ್ತು covaxin out of stock ಎಂದು ಬೋರ್ಡ್ ಹಾಕಲಾಗಿದೆ.

ಮೊದಲನೇ ಡೋಸ್ ಹಾಕಿಸಿಕೊಳ್ಳಲು ಒಂದೆಡೆ ಜನರು ಪೇಚಾಡುತ್ತಿದ್ದರೆ, ಮತ್ತೊಂದೆಡೆ ಎರಡನೇ ಡೋಸ್ ವ್ಯಾಕ್ಸಿನ್ ಹಾಕಿಸಿಕೊಳ್ಳುವವರಿಗೆ ಇನ್ನೊಂದು ರೀತಿಯ ಸಮಸ್ಯೆ ಎದುರಾಗಿದೆ. ಎರಡನೇ ಡೋಸ್ ಹಾಕಿಸಿಕೊಳ್ಳಲು ನೋಂದಣಿ ಮಾಡಿಕೊಂಡವರಿಗೆ ವ್ಯಾಕ್ಸಿನ್ ಇಲ್ಲ ಅಂತ ಅವರವರ ಮೊಬೈಲ್‌ಗೆ ಮೆಸೇಜ್ ಬರುತ್ತಿವೆ.

ಲಸಿಕೆ ಕೊಟ್ಟು ಜೀವ ಉಳಿಸಲು ನಿರ್ಧರಿಸಿದ್ದ ರಾಜ್ಯ ಸರ್ಕಾರ ಮಾಡಿದ್ದ ಉಪಾಯ ವಿಫಲವಾಯಿತಾ ಎಂಬ ಅನುಮಾನ ಜನರಲ್ಲಿ ಸೃಷ್ಟಿಯಾಗಿದೆ. ಬೆಂಗಳೂರಿನಲ್ಲಿ ವ್ಯಾಕ್ಸಿನ್‌ಗಾಗಿ ಜನರು ಪರದಾಡುತ್ತಿದ್ದು, ಎಲ್ಲೆ ನೋಡಿದರೂ ಲಸಿಕೆಗೆ ಹಾಹಾಕಾರ ಶುರುವಾಗಿದ್ದು, ಲಸಿಕೆ ಸಿಗದೆ ಜನರು ಆತಂಕದಲ್ಲಿದ್ದಾರೆ.‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.