ETV Bharat / state

ಶ್ರೀಕೃಷ್ಣನ ಲೀಲೆ ಕೆದಕಲು ಮುಂದಾದ ಸಿಸಿಬಿ.. ಅಧಿಕಾರಿಗಳಿಗೇ ಕಿರಿಕಿರಿ ಮಾಡಿದ ಹ್ಯಾ'ಕಿಂಗ್​'!! - ಭಾರತದ ನಂಬರ್​ ಒನ ಹ್ಯಾಕರ್​ ಶ್ರೀಕಿ ಲೇಟೆಸ್ಟ್​ ನ್ಯೂಸ್​

ತನ್ನ ಬಳಿ ಯಾರೇ ಬಂದು ವೆಬ್​ಸೈಟ್ ಹ್ಯಾಕ್ ಮಾಡುವಂತೆ ಹೇಳಿದ್ರೂ ಬಹಳ ಈಜಿಯಾಗಿ ಹ್ಯಾಕ್ ಮಾಡಿ ಕೊಡ್ತಿದ್ದ. ಆದ್ರೆ, ಈತ ಹ್ಯಾಕ್ ಮಾಡಬೇಕಾದ್ರೆ ಈತನಿಗೆ ಡ್ರಗ್ಸ್​, ಹುಡುಗಿಯರು ಹಾಗೂ ಐಷಾರಾಮಿ ಹೋಟೆಲ್ ಬುಕ್‌ ಮಾಡ್ಬೇಕಿತ್ತು..

notorious  hacker sriki investigation by ccb
ಶ್ರೀಕೃಷ್ಣನ ಲೀಲೆ ಕೆದಕಲು ಮುಂದಾದ ಸಿಸಿಬಿ
author img

By

Published : Dec 4, 2020, 12:40 PM IST

ಬೆಂಗಳೂರು : ಭಾರತದ ನಂಬರ್ ಒನ್ ಹ್ಯಾಕರ್ ಶ್ರೀಕೃಷ್ಣ ಸದ್ಯ ಸಿಸಿಬಿ ವಶದಲ್ಲಿದ್ದಾನೆ. ಶ್ರೀಕೃಷ್ಣನ ಒಂದೊಂದೇ ಕೃತ್ಯಗಳನ್ನು ಕೆದಕಲು ಸಿಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ.

ಸದ್ಯ ಶ್ರೀಕಿಯ ಕೈನಲ್ಲಿ ಕಂಪ್ಯೂಟರ್ ಬ್ರಹ್ಮಾಂಡ ಹಾಗೆ ಡ್ರಗ್ಸ್ ಪಾರ್ಟಿ ನಡೆಸುತ್ತಿರುವವರ ಮಾಹಿತಿ ಬಯಲಾಗಿದೆ. ಈತ ಪೊಲೀಸರ ವಶವಾಗುವ ಮುಂಚೆ ಎಲ್ಲಿದ್ದ ? ಏನೆಲ್ಲಾ ಮಾಡ್ತಿದ್ದ ಅನ್ನೋದರ ಮಾಹಿತಿಯನ್ನ ಸಿಸಿಬಿ ಪೊಲೀಸರು ಕಲೆಹಾಕಲು ಮುಂದಾದಾಗ ಶ್ರೀಕಿ ಬಹಳ ಕಿರಿಕ್ ಮಾಡಿದ್ದಾನೆ.

ವಿಚಾರಣೆ ವೇಳೆ ಹ್ಯಾ"ಕಿಂಗ್" ಶ್ರೀಕಿ, ಕೇಳಿದ ಪ್ರಶ್ನೆಗಳಿಗೆಲ್ಲಾ ಉತ್ತರ ಕೊಡ್ತೇನೆ. ಆದ್ರೆ, ಪ್ರತಿದಿನ ಡ್ರಗ್ಸ್‌ ತಗೋಳ್ತಿದ್ದ ಕಾರಣ ನನಗೆ ಡ್ರಗ್ಸ್ ಬೇಕು ಎಂದು ದಂಬಾಲು ಬಿದ್ದಿದ್ದಾನೆ. ಡ್ರಗ್ಸ್ ಕೊಡುವಂತೆ ಸಿಸಿಬಿ ಅಧಿಕಾರಿಗಳಿಗೆ ಮಿಡ್‌ನೈಟ್​ನಲ್ಲೂ ಶ್ರೀಕಿ ಕಾಟ ಕೊಡ್ತಿದ್ದಾನೆ.

ಇದು ರಾತ್ರಿ ಪಾಳಯದ ಸಿಬ್ಬಂದಿಗೂ ತಲೆನೋವು ತಂದಿದ್ದು, ಡ್ರಗ್ಸ್ ಚಟಕ್ಕೆ ಬಿದ್ದವನ ವಿಚಾರಣೆಗೆ ಸಿಸಿಬಿ ಅಧಿಕಾರಿಗಳು ಹರಸಾಹಸ ಪಡ್ತಿದ್ದಾರೆ. ಶ್ರೀಕಿ ಸರ್ಕಾರಿ ವೆಬ್​​ಸೈಟ್ಸ್​​ ಹ್ಯಾಕ್ ಮಾಡುವುದರಲ್ಲಿ ನಿಸ್ಸೀಮ. ಈತ ಮೊದಲು ಡ್ರಗ್ಸ್‌ ಕೇಸಲ್ಲಿ ಸಿಕ್ಕಿಬಿದ್ದಿದ್ದ. ಆದರೆ, ಈತನನ್ನ ಸರಿಯಾಗಿ ಬೆಂಡ್​ ಎತ್ತಿದಾಗ ಸರ್ಕಾರಿ ವೆಬ್​ಸೈಟ್ ಹ್ಯಾಕ್ ಮಾಡ್ತಿದ್ದ ವಿಚಾರ ಬಾಯ್ಬಿಟ್ಟ.

ತನ್ನ ಬಳಿ ಯಾರೇ ಬಂದು ವೆಬ್​ಸೈಟ್ ಹ್ಯಾಕ್ ಮಾಡುವಂತೆ ಹೇಳಿದ್ರೂ ಬಹಳ ಈಜಿಯಾಗಿ ಹ್ಯಾಕ್ ಮಾಡಿ ಕೊಡ್ತಿದ್ದ. ಆದ್ರೆ, ಈತ ಹ್ಯಾಕ್ ಮಾಡಬೇಕಾದ್ರೆ ಈತನಿಗೆ ಡ್ರಗ್ಸ್​, ಹುಡುಗಿಯರು ಹಾಗೂ ಐಷಾರಾಮಿ ಹೋಟೆಲ್ ಬುಕ್‌ ಮಾಡ್ಬೇಕಿತ್ತು.

ಈತ ಕಳೆದ ಆರು ತಿಂಗಳಿಂದ ಸುನೀಷ್ ಹೆಗ್ಡೆ ಹಾಗೂ ಪ್ರಸಿದ್ ಶೆಟ್ಟಿ ನೀಡಿದ್ದ ಕೆಲಸ ಮಾಡುತ್ತಿದ್ದ. ಹೀಗಾಗಿ ಈ ಕೆಲಸ ಮಾಡಲು ಶ್ರೀಕಿಗೆ ಐಷಾರಾಮಿ ಹೋಟೆಲ್ ವ್ಯವಸ್ಥೆ ರಾಜಾತಿಥ್ಯ, ವಿವಿಧ ಮಾದರಿಯ ಡ್ರಗ್ಸ್ ನೀಡಲಾಗಿತ್ತು. ಅಸಲಿಗೆ ಈ ಗ್ಯಾಂಗ್‌ಗೆ ಶ್ರೀಕಿ ಮಾಡಿಕೊಟ್ಟ ಲಾಭ ಏನು?ಎಂದು ಲಾಭದ ಲೆಕ್ಕಾಚಾರವನ್ನ ಸಿಸಿಬಿ ತನಿಖೆ ನಡೆಸುತ್ತಿದೆ.

ಹಾಗೆ ಇದೇ ವೇಳೆ ಪಾರ್ಟಿ ಆಯೋಜನೆಗಾಗಿಯೇ ಕೋಡ್ ಬಳಕೆ ಮಾಡಿದ್ದ ವಿಚಾರ ಬಯಲಾಗಿದೆ. ''ಮೀಟ್ ಇನ್ ಫ್ಲ್ಯಾಟ್ " ಎಂಬ ಕೋಡ್​ನಲ್ಲಿ ಸಂಜಯ್ ನಗರದ ಶ್ರೀದೇವಿ ಅಪಾರ್ಟ್ಮೆಂಟ್​ನಲ್ಲಿ ಫ್ಲ್ಯಾಟ್​ ಹೊಂದಿದ್ದ ಶ್ರೀಕಿ.

ಅದೇ ಫ್ಲ್ಯಾಟ್‌ನಲ್ಲಿ ಹಲವು ಪಾರ್ಟಿಗಳನ್ನ ಆಯೋಜನೆ ಮಾಡಿದ್ದ. ಡ್ರಗ್ಸ್ ನಶೆಯಲ್ಲಿ ತೇಲುವವರಿಗೆ ಮಾತ್ರ ಪಾರ್ಟಿಯಲ್ಲಿ ಎಂಟ್ರಿ ಇದ್ದು, ಆರು ತಿಂಗಳಿಂದ ನಡೆದ ಪಾರ್ಟಿಯಲ್ಲಿ ಹೇಮಂತ್, ಪ್ರಸಿದ್, ಸುನೀಷ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಸದ್ಯ ಸಿಸಿಬಿ ಪೊಲೀಸರು ಒಂದೆಡೆ ಡ್ರಗ್ಸ್‌ ವಿಚಾರ ಮತ್ತೊಂದೆಡೆ ಸರ್ಕಾರಿ ವೆಬ್​ಸೈಟ್ ಹ್ಯಾಕಿಂಗ್ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.