ಬೆಂಗಳೂರು: ಪೊಲೀಸ್ ಆಗಿ ಸಾರ್ವಜನಿಕ ಸೇವೆ ಮಾಡಬೇಕು ಎಂಬ ಕನಸು ನಿಮಗಿದೆಯಾ ?ಹಾಗಾದರೆ ನಿಮ್ಮ ಆಸೆ ನನಸು ಮಾಡಿಕೊಳ್ಳಿ. ಖಾಲಿ ಇರುವ ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್ ) ಹುದ್ದೆಗಳಿಗೆ ನೇಮಕಾತಿ ಮಾಡುವಂತೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಖಾಲಿಯಿರುವ 36,261 ಮಹಿಳಾ ಹಾಗೂ ಪುರುಷರು ಕಾನ್ಸ್ಟೇಬಲ್ ನೇಮಕಗೊಳಿಸುವಂತೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇನ್ನು ಈ ಹುದ್ದೆಗೆ ಅರ್ಜಿ ಸಲ್ಲಿಸಲು ದ್ವಿತೀಯ ಪಿಯುಸಿ ಅಥವಾ ಇದಕ್ಕೆ ಸರಿ ಸಮನಾದ ವ್ಯಾಸಂಗ ಮಾಡಿರಬೇಕು. ಶೇ.67.5ಕ್ಕಿಂತ ಹೆಚ್ಚು ಅಂಕಗಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸಾಮಾನ್ಯ ಪರೀಕ್ಷೆ ಜೊತೆಗೆ ಫಿಜಿಕಲ್‌ನಲ್ಲಿ ಕಡ್ಡಾಯವಾಗಿ ತೇರ್ಗಡೆಯಾಗಬೇಕು. ಅರ್ಜಿ ಸಲ್ಲಿಕೆ ಯಾವಾಗ ? ಹೇಗೆ ಅರ್ಜಿ ಸಲ್ಲಿಸುವುದರ ಬಗ್ಗೆ ಪೊಲೀಸ್ ಇಲಾಖೆ ತನ್ನ ವೆಬ್ಸೈಟ್ನಲ್ಲಿ ಮಾಹಿತಿ ನೀಡಿದೆ.