ಬೆಂಗಳೂರು: ಮಾಜಿ ಸಚಿವ ಕೆ.ಜೆ ಜಾರ್ಜ್ಗೆ ಮತ್ತೆ ಸಂಕಷ್ಟ ಎದುರಾಗಿದೆ. ಲಂಚಮುಕ್ತ ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ, ಜಾರಿ ನಿರ್ದೇಶನಾಲಯಕ್ಕೆ ಕೆ.ಜೆ ಜಾರ್ಜ್ ವಿರುದ್ಧ ದೂರು ನೀಡಿದ್ದರು. ಹೀಗಾಗಿ ಕೆ.ಜೆ ಜಾರ್ಜ್ ಹಾಗೂ ಕುಟುಂಬಸ್ಥರಿಗೆ ಫೆಮಾ ಆ್ಯಕ್ಟ್ ಅಡಿ ಇಡಿ ಜನವರಿ 16 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ನೋಟಿಸ್ನಲ್ಲಿ ಅಕ್ರಮ ಆಸ್ತಿ ಸಂಪಾದನೆ, ವಿದೇಶದಲ್ಲಿ ಅಕ್ರಮ ಹೂಡಿಕೆ , ವಿದೇಶದಲ್ಲಿ ಬ್ಯಾಂಕ್ ಅಕೌಂಟ್ ಹೊಂದಿರುವ ಮಾಹಿತಿಯನ್ನ ಜಾರ್ಜ್ ಪತ್ನಿ ಸುಜಾತ, ಜಾರ್ಜ್ ಮಕ್ಕಳಾದ ರಾಣಾ , ರೆನಿಟಾ ಮಾಹಿತಿ ನೀಡಬೇಕೆಂದು ಇಡಿ ತಿಳಿಸಿದೆ.
ಅಮೆರಿಕ ಹಾಗೂ ಆಸ್ಟೇಲಿಯಾದಲ್ಲಿ ಕೆ.ಜೆ ಜಾರ್ಜ್ ಕುಟುಂಬಸ್ಥರ ಹೆಸರಿನಲ್ಲಿ ಆಸ್ತಿಗಳಿಸಿದ್ದಾರೆ. ಈ ಹಣವೆಲ್ಲಾ ಭ್ರಷ್ಟಾಚಾರದಿಂದ ಗಳಿಸಿದ್ದು ಈ ಸಂಬಂಧ ಎಲೆಕ್ಷನ್ ಆಫಿಡವಿಟ್ನಲ್ಲಿ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಜಾರ್ಜ್ ವಿರುದ್ದ ಮೂರು ತಿಂಗಳ ಹಿಂದೆ ರವಿಕೃಷ್ಣಾರೆಡ್ಡಿ ದೂರು ನೀಡಿದ್ದರು ಸದ್ಯ ವಿಚಾರಣೆಗೆ ನೋಟಿಸ್ ಜಾರಿ ಮಾಡಲಾಗಿದೆ.