ಮೈಸೂರು: ಯುವ ದಸರಾದಲ್ಲಿ ಚಂದನ್ ಶೆಟ್ಟಿ ನಡೆದುಕೊಂಡ ರೀತಿ ಸರಿಯಲ್ಲ, ಸಂಸ್ಕೃತಿಯೇ ಇಲ್ಲದೇ ನಡೆದುಕೊಂಡಿದ್ದಕ್ಕೆ ಅಧಿಕಾರಿಗಳಿಗೆ ನೋಟಿಸ್ ನೀಡಲು ಸೂಚಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅಸಮಾಧಾನ ಹೊರಹಾಕಿದ್ದಾರೆ.
ತಮ್ಮ ಹಾಡುಗಳಿಂದ ಯುವಜನತೆಯ ಮನ ಗೆದ್ದಿರುವ ಚಂದನ್ ಶೆಟ್ಟಿ ಹಾಗೂ ರಿಯಾಲಿಟಿ ಶೋ ಮೂಲಕ ಪರಿಚಿತವಾದ ನಿವೇದಿತಾ ಗೌಡಗೆ ಯುವದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಿದ ಘಟನೆ ತೀವ್ರ ಟೀಕೆಗೆ ಗುರಿಯಾಗಿದೆ.
ದಸರಾ ಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಚಿತ್ರ ಸಂತೆ ಹಾಗೂ ಹಸಿರು ಸಂತೆ ಉದ್ಘಾಟಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸೋಮಣ್ಣ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಈ ರೀತಿ ನಡೆದುಕೊಂಡಿರುವುದು ಅಕ್ಷಮ್ಯ ಅಪರಾಧ. ನಾಡಹಬ್ಬದಲ್ಲಿ ಇಂಥ ಘಟನೆ ಸಂಭವಿಸಿದ್ದಕ್ಕೆ ಕ್ಷಮೆಯಾಚಿಸುತ್ತೇನೆ ಎಂದರು.
-
ಯುವದಸರಾದಲ್ಲಿ 2 ಗಂಟೆ ಮೈಸೂರಿಗರ ಮನಸ್ಸಿಗೆ ಮುದ ಕೊಟ್ಟು 2 ಸೆಕೆಂಡ್ ಪ್ರೇಮ ನಿವೇದನೆ ಮಾಡಿಕೊಂಡ ಚಂದನ್ ಶೆಟ್ಟಿಯವರನ್ನು ಏನೋ ಮಹಾಪರಾಧ ಮಾಡಿದವರಂತೆ ಕಾಣುವುದು ಸಾಕು. ಇಬ್ಬರಿಗೂ ಒಳ್ಳೆಯದಾಗಲಿ... pic.twitter.com/f6d2I1hfyF
— Pratap Simha (@mepratap) October 5, 2019 " class="align-text-top noRightClick twitterSection" data="
">ಯುವದಸರಾದಲ್ಲಿ 2 ಗಂಟೆ ಮೈಸೂರಿಗರ ಮನಸ್ಸಿಗೆ ಮುದ ಕೊಟ್ಟು 2 ಸೆಕೆಂಡ್ ಪ್ರೇಮ ನಿವೇದನೆ ಮಾಡಿಕೊಂಡ ಚಂದನ್ ಶೆಟ್ಟಿಯವರನ್ನು ಏನೋ ಮಹಾಪರಾಧ ಮಾಡಿದವರಂತೆ ಕಾಣುವುದು ಸಾಕು. ಇಬ್ಬರಿಗೂ ಒಳ್ಳೆಯದಾಗಲಿ... pic.twitter.com/f6d2I1hfyF
— Pratap Simha (@mepratap) October 5, 2019ಯುವದಸರಾದಲ್ಲಿ 2 ಗಂಟೆ ಮೈಸೂರಿಗರ ಮನಸ್ಸಿಗೆ ಮುದ ಕೊಟ್ಟು 2 ಸೆಕೆಂಡ್ ಪ್ರೇಮ ನಿವೇದನೆ ಮಾಡಿಕೊಂಡ ಚಂದನ್ ಶೆಟ್ಟಿಯವರನ್ನು ಏನೋ ಮಹಾಪರಾಧ ಮಾಡಿದವರಂತೆ ಕಾಣುವುದು ಸಾಕು. ಇಬ್ಬರಿಗೂ ಒಳ್ಳೆಯದಾಗಲಿ... pic.twitter.com/f6d2I1hfyF
— Pratap Simha (@mepratap) October 5, 2019
ಬುದ್ದಿ ಇಲ್ಲದ ಜನ ಮಾಡುವ ಕೆಲಸವಿದು. ಈ ಘಟನೆ ಬಗ್ಗೆ ದಸರಾ ಉಪ ಸಮಿತಿ ಹಾಗೂ ಮೈಸೂರು ಜಿಲ್ಲಾ ಎಸ್ಪಿ ರಿಷ್ಯಂತ್ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಬೇಕು. ಬಳಿಕ ಕಾನೂನು ಕ್ರಮ ಕೈಗೊಳ್ಳಿ ಎಂದು ಸೂಚಿಸಿರುವುದಾಗಿ ಸೋಮಣ್ಣ ತಿಳಿಸಿದ್ದಾರೆ.
ಚಂದನ್ ಶೆಟ್ಟಿ ಪರ ಪ್ರತಾಪ್ ಸಿಂಹ ಬ್ಯಾಟಿಂಗ್:
ಚಂದನ್ ಶೆಟ್ಟಿ ಪ್ರಪೋಸ್ ಮಾಡಿದ ವಿಚಾರವಾಗಿ ಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ, ಯುವ ದಸರಾದಲ್ಲಿ 2 ಗಂಟೆ ಮೈಸೂರಿಗರ ಮನಸ್ಸಿಗೆ ಮುದ ಕೊಟ್ಟು 2 ಸೆಕೆಂಡ್ ಪ್ರೇಮ ನಿವೇದನೆ ಮಾಡಿಕೊಂಡ ಚಂದನ್ ಶೆಟ್ಟಿಯವರನ್ನು ಏನೋ ಮಹಾಪರಾಧ ಮಾಡಿದವರಂತೆ ಕಾಣುವುದು ಸಾಕು. ಇಬ್ಬರಿಗೂ ಒಳ್ಳೆಯದಾಗಲಿ ಎಂದು ಟ್ವೀಟಿಸಿದ್ದಾರೆ.