ETV Bharat / state

ಬೆಂಗಳೂರಿನ 5,223 ಅಕ್ರಮ ಕಟ್ಟಡಗಳ ಮಾಲೀಕರಿಗೆ ನೋಟಿಸ್ - 5,223 ಅಕ್ರಮ ಕಟ್ಟಡಗಳ ಮಾಲೀಕರಿಗೆ ನೋಟಿಸ್

ಒಂದೂವರೆ ವರ್ಷದ ಅವಧಿಯಲ್ಲಿ ನಕ್ಷೆ ಮಂಜೂರಾತಿ ಪಡೆದ ಕಟ್ಟಡಗಳ ಸರ್ವೇ ಮಾಡಲಾಗಿದೆ. ಬಿಬಿಎಂಪಿಯು 2020-21ರಲ್ಲಿ ಪ್ಲಾನ್ ಪಡೆದ ಕಟ್ಟಡಗಳ ಸಮೀಕ್ಷೆ ನಡೆಸಿದೆ. ಅದರಲ್ಲಿ 8,496 ಕಟ್ಟಡಗಳ ಪೈಕಿ, 6,148 ಕಟ್ಟಡಗಳನ್ನು ಅಧಿಕಾರಿಗಳು ಸರ್ವೇ ಮಾಡಿದ್ದಾರೆ..

ಅಕ್ರಮ ಕಟ್ಟಡಗಳ ಮಾಲೀಕರಿಗೆ ನೋಟಿಸ್
ಅಕ್ರಮ ಕಟ್ಟಡಗಳ ಮಾಲೀಕರಿಗೆ ನೋಟಿಸ್
author img

By

Published : Nov 13, 2021, 8:39 PM IST

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ 5 ಸಾವಿರಕ್ಕೂ ಹೆಚ್ಚು ಅಕ್ರಮ ಕಟ್ಟಡಗಳ ಸರ್ವೇಯಾಗಿದೆ. ಬೈಲಾ, ನಕ್ಷೆ ಮಂಜೂರಾತಿಗಳನ್ನು ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳನ್ನು ಬಿಬಿಎಂಪಿ ಪಟ್ಟಿ ಮಾಡಿದೆ. ಹೈಕೋರ್ಟ್ ಚಾಟಿ ಬೀಸಿರುವ ಹಿನ್ನೆಲೆ ಎಚ್ಚೆತ್ತು ಸರ್ವೇ ನಡೆಸಿದ ಬಿಬಿಎಂಪಿ, ತನ್ನ ವ್ಯಾಪ್ತಿಯಲ್ಲಿರುವ ಅಕ್ರಮ ಕಟ್ಟಡಗಳ ಪಟ್ಟಿ ಮಾಡಿವೆ.

ಅಕ್ರಮ ಕಟ್ಟಡಗಳ ಮಾಲೀಕರಿಗೆ ನೋಟಿಸ್

ಒಂದೂವರೆ ವರ್ಷದ ಅವಧಿಯಲ್ಲಿ ನಕ್ಷೆ ಮಂಜೂರಾತಿ ಪಡೆದ ಕಟ್ಟಡಗಳ ಸರ್ವೇ ಮಾಡಲಾಗಿದೆ. ಬಿಬಿಎಂಪಿಯು 2020-21ರಲ್ಲಿ ಪ್ಲಾನ್ ಪಡೆದ ಕಟ್ಟಡಗಳ ಸಮೀಕ್ಷೆ ನಡೆಸಿದೆ. ಅದರಲ್ಲಿ 8,496 ಕಟ್ಟಡಗಳ ಪೈಕಿ, 6,148 ಕಟ್ಟಡಗಳನ್ನು ಅಧಿಕಾರಿಗಳು ಸರ್ವೇ ಮಾಡಿದ್ದಾರೆ.

ಈ ಪೈಕಿ ಶೇ.84.95ರಷ್ಟು ಅಂದ್ರೆ 5,223 ಕಟ್ಟಡಗಳು ಅಕ್ರಮ ಅನ್ನುವುದು ಪತ್ತೆಯಾಗಿದೆ. ಬೆಂಗಳೂರು ದಕ್ಷಿಣ ವಲಯದಲ್ಲೇ ಅತೀ ಹೆಚ್ಚು ಕಟ್ಟಡಗಳು ಅಕ್ರಮ ಎಂದು ತಿಳಿದು ಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ನೋಟಿಸ್ ಮೂಲಕ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಅಕ್ರಮ ಕಟ್ಟಡಗಳ ಮಾಲೀಕರಿಗೆ ನಡುಕ ಶುರುವಾಗಿದೆ.

ನಗರದಲ್ಲಿ ಕೆಲ ಕಟ್ಟಡಗಳು ನೆಲಕ್ಕುರುಳಿದ ಪರಿಣಾಮ ಹೈಕೋರ್ಟ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಅಕ್ರಮ ಕಟ್ಟಡಗಳ ಸರ್ವೇ ಮಾಡುವಂತೆ ಖಡಕ್ ಎಚ್ಚರಿಕೆ ನೀಡಿತ್ತು. ಸದ್ಯ ನಗರ ಯೋಜನಾ ಸಮಿತಿ ( ಟೌನ್ ಪ್ಲಾನಿಂಗ್ ಕಮಿಟಿ) ಅಧಿಕಾರಿಗಳಿಂದ ಸರ್ವೇ ನಡೆದಿದೆ. ಈ ವರದಿಯನ್ನು ಹೈಕೋರ್ಟ್‌ಗೆ ಒಪ್ಪಿಸಲಾಗುವುದು. ಹೈಕೋರ್ಟ್ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.

ಪ್ರತೀ ವಲಯವಾರು ಸಮೀಕ್ಷೆ ನಡೆಸಲಾಗಿದೆ. ಕಟ್ಟಡ ನಕ್ಷೆ ಮಂಜೂರಾತಿ ಉಲ್ಲಂಘನೆ, ಹೆಚ್ಚುವರಿ ಮಹಡಿಗಳು, ನಕ್ಷೆ ಮಂಜೂರಾತಿ ಪಡೆಯದೇ ನಿರ್ಮಿಸಿದ ಕಟ್ಟಡಗಳು ಹಾಗೂ ಇತರ ಉಲ್ಲಂಘನೆಗಳ ಮಾಹಿತಿ ಪಡೆಯಲಾಗಿದೆ. ಈ ಕಟ್ಟಡಗಳನ್ನು ತೆರವು ಮಾಡುವಂತೆ ಈಗಾಗಲೇ ನೋಟಿಸ್ ಕೂಡ ಕೊಡಲಾಗಿದೆ ಎಂದರು.

ಈ ಮೊದಲು 2019ರಲ್ಲಿ ಸರ್ವೇ ನಡೆಸಿದ್ದಾಗ 180 ಶಿಥಿಲ ಕಟ್ಟಡಗಳನ್ನು ಪಟ್ಟಿ ಮಾಡಲಾಗಿತ್ತು. ಆ ಪೈಕಿ ಕೇವಲ 10 ಕಟ್ಟಡಗಳನ್ನು ನೆಲಸಮಗೊಳಿಸಲಾಗಿತ್ತು. ನಂತರ ಈ ಬಾರಿ ಮಳೆಗಾಲದಲ್ಲಿ ಶಿಥಿಲ ಕಟ್ಟಡಗಳು ಧರೆಗುರುಳಿದ ಪರಿಣಾಮ ಮತ್ತೆ ಹೊಸದಾಗಿ ಸರ್ವೇ ನಡೆಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.