ETV Bharat / state

ಕೋವಿಡ್ ಸಂಕಷ್ಟ ಹಿನ್ನೆಲೆ ಸರಳ ಹುಟ್ಟುಹಬ್ಬ ಆಚರಣೆ.. ಹಾರ, ತುರಾಯಿ ತರಬೇಡಿ ಎಂದ ಬಿಎಸ್​​ವೈ

ಆತ್ಮೀಯರೇ, ಹಿತೈಷಿಗಳೇ, ಕೊರೊನಾ ಸಂಕಷ್ಟಗಳ ಹಿನ್ನೆಲೆಯಲ್ಲಿ, ನಾಳೆ ನನ್ನ ಹುಟ್ಟಿದ ದಿನವನ್ನು ಯಾವುದೇ ವಿಶೇಷ ರೀತಿಯಲ್ಲಿ ನಾನು ಆಚರಿಸಿಕೊಳ್ಳುತ್ತಿಲ್ಲ ಎಂದು ಮಾಜಿ ಸಿಎಂ ಬಿಎಸ್​ವೈ ಟ್ವೀಟ್ ಮೂಲಕ ತಿಳಿಸಿದ್ದಾರೆ.

no-special-birthday-celebration-ex-cm-yeddyurappa-tweets
ಬಿಎಸ್​ವೈ ಟ್ವೀಟ್
author img

By

Published : Feb 26, 2022, 7:48 PM IST

ಬೆಂಗಳೂರು: ಕೋವಿಡ್ ಸಂಕಷ್ಟ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ನಿರ್ಧರಿಸಿದ್ದಾರೆ. ನಾಳೆ ಮಾಜಿ ಸಿಎಂ ಯಡಿಯೂರಪ್ಪರ ಜನ್ಮದಿನವಾಗಿದ್ದು, ಸರಳವಾಗಿ ಆಚರಿಸುವುದಾಗಿ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಆತ್ಮೀಯರೇ, ಹಿತೈಷಿಗಳೇ, ಕೊರೊನಾ ಸಂಕಷ್ಟಗಳ ಹಿನ್ನೆಲೆಯಲ್ಲಿ, ನಾಳೆ ನನ್ನ ಹುಟ್ಟಿದ ದಿನವನ್ನು ಯಾವುದೇ ವಿಶೇಷ ರೀತಿಯಲ್ಲಿ ನಾನು ಆಚರಿಸಿಕೊಳ್ಳುತ್ತಿಲ್ಲ. ಆದ್ದರಿಂದ ಯಾರೂ ಕೂಡ ಹಾರ, ತುರಾಯಿ, ಉಡುಗೊರೆ ಇತ್ಯಾದಿ ತರಬೇಡಿ. ನೀವು ಇದ್ದಲ್ಲಿಂದಲೇ ಹಾರೈಸಿ. ನಿಮ್ಮೆಲ್ಲರ ಪ್ರೀತಿ, ಅಭಿಮಾನ, ಆಶೀರ್ವಾದಗಳೇ ನನಗೆ ಶ್ರೀರಕ್ಷೆ ಎಂದು ತಿಳಿಸಿದ್ದಾರೆ.

  • ಆತ್ಮೀಯರೇ, ಹಿತೈಷಿಗಳೇ, ಕೊರೋನಾ ಸಂಕಷ್ಟಗಳ ಹಿನ್ನಲೆಯಲ್ಲಿ, ನಾಳೆ ನನ್ನ ಹುಟ್ಟಿದ ದಿನವನ್ನು ಯಾವುದೇ ವಿಶೇಷ ರೀತಿಯಲ್ಲಿ ನಾನು ಆಚರಿಸಿಕೊಳ್ಳುತ್ತಿಲ್ಲ. ಆದ್ದರಿಂದ ಯಾರೂ ಕೂಡ ಹಾರ, ತುರಾಯಿ, ಉಡುಗೊರೆ ಇತ್ಯಾದಿ ತರಬೇಡಿ ಎಂದು ಕೋರುತ್ತೇನೆ. ನೀವು ಇದ್ದಲ್ಲಿಂದಲೇ ಹಾರೈಸಿ. ನಿಮ್ಮೆಲ್ಲರ ಪ್ರೀತಿ, ಅಭಿಮಾನ, ಆಶೀರ್ವಾದಗಳೇ ನನಗೆ ಶ್ರೀರಕ್ಷೆ.

    — B.S. Yediyurappa (@BSYBJP) February 26, 2022 " class="align-text-top noRightClick twitterSection" data=" ">

ಇದನ್ನೂ ಓದಿ: ರೂಮಿನ ಪಕ್ಕವೇ ಬಾಂಬ್ ಸದ್ದು: ತಂದೆಗೆ ವಿಡಿಯೋ ಕಾಲ್​ ಮಾಡಿದ ಉಕ್ರೇನ್​ನಲ್ಲಿ ಸಿಲುಕಿದ ಕಾರವಾರದ ಯುವತಿ

ನಾಳೆ ಹುಟ್ಟು ಹಬ್ಬದ ಪ್ರಯುಕ್ತ ಬೆಳಗ್ಗೆ ಕಾವೇರಿ ನಿವಾಸದಲ್ಲಿ ಯಡಿಯೂರಪ್ಪ, ಅಭಿಮಾನಿಗಳ ಬಳಗದಿಂದ ಸಿದ್ದಗಂಗಾ ಶ್ರೀ‌ ಉಪಸ್ಥಿತಿಯಲ್ಲಿ ರೈತರಿಗೆ ಉಚಿತ ಟ್ರ್ಯಾಕ್ಟರ್​​​ಗಳನ್ನು‌ ನೀಡಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.