ಬೆಂಗಳೂರು : ನಮ್ಮ ಮೇಲೆ ಯಾವುದೇ ರೇಪ್ ಕೇಸ್ ಇಲ್ಲ. ಪರಿಶೀಲನೆ ನಡೆಸದೆ ಸುದ್ದಿ ಪ್ರಕಟ ಮಾಡಬಾರದು ಎಂಬ ಕಾರಣಕ್ಕೆ ಕೋರ್ಟ್ ಮೊರೆ ಹೋಗಿದ್ದೇವೆ ಎಂದು ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟೀಕರಣ ನೀಡಿದ್ದಾರೆ.
ನಾವು ಯಾಕೆ ನ್ಯಾಯಾಲಯಕ್ಕೆ ಹೋಗಿದ್ದೇವೆ ಎಂಬ ಪ್ರಶ್ನೆಗೆ ವಿಧಾನಸಭೆಯಲ್ಲಿ ಉತ್ತರಿಸುತ್ತ, ಸಮ್ಮಿಶ್ರ ಸರ್ಕಾರ ಪತನ ಮಾಡಿದವರ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಅದಕ್ಕೆ ಕಾನೂನು ವ್ಯಾಪ್ತಿಯಲ್ಲಿರುವ ಅವಕಾಶ ಬಳಸಿಕೊಂಡಿದ್ದೇವೆ. ನಾವು ಯಾವುದೇ ತಪ್ಪು ಮಾಡಿಲ್ಲ. ಆಧುನಿಕ ತಂತ್ರಜ್ಞಾನ ಬಳಸಿ ಹೇಗೆ ಬೇಕಾದರೂ ವಿಡಿಯೋ ಮಾಡಬಹುದು.
ವಿರೋಧ ಪಕ್ಷದ ನಾಯಕರು ಏಕೆ ಕೋರ್ಟ್‌ಗೆ ಹೋಗಿದ್ದೀರಾ ಎಂದು ಪ್ರಶ್ನೆ ಮಾಡುತ್ತಾರೆ. ರಮೇಶ್ ಜಾರಕಿಹೊಳಿ ಪ್ರಕರಣವೇನೂ ಮೊದಲ, ಚುನಾಯಿತ ಪ್ರತಿನಿಧಿಗಳು ಮಾತ್ರವಲ್ಲ ಸುಪ್ರೀಂಕೋರ್ಟ್ ಜಡ್ಜ್ ಸಹ ಕೋರ್ಟ್‌ಗೆ ಹೋಗಿದ್ದಾರೆ.
ಮಾಧ್ಯಮದಲ್ಲಿ ಆ ಸಂದರ್ಭದಲ್ಲಿ ಸಿಗುವ ದಾಖಲೆ, ಸಿಡಿ ಪ್ರಸಾರ ಮಾಡುತ್ತಾರೆ. ಆದರೆ, ಪ್ರಜಾಪ್ರತಿನಿಧಿಗಳಿಗೆ ಅವಮಾನ ಆಗುವಂತ ಪರಿಸ್ಥಿತಿ ಇದೆ. ಸತ್ಯಾಸತ್ಯತೆ ಪರಿಶೀಲನೆ ಮಾಡಬೇಕಲ್ವಾ?. ಫೇಕ್ ವಿಡಿಯೋ ಎಂಬ ತಂತ್ರಜ್ಞಾನದಲ್ಲಿ ಏನು ಬೇಕಾದರೂ ಮಾಡಬಹುದು ಎಂದಿದ್ದಾರೆ.